ಮೈಸೂರಲ್ಲಿ ಸುಗಮವಾಗಿ ನಡೆದ SSಐಅ ಪರೀಕ್ಷೆ: 37,339 ವಿದ್ಯಾರ್ಥಿಗಳು ಹಾಜರಿ
ಮೈಸೂರು

ಮೈಸೂರಲ್ಲಿ ಸುಗಮವಾಗಿ ನಡೆದ SSಐಅ ಪರೀಕ್ಷೆ: 37,339 ವಿದ್ಯಾರ್ಥಿಗಳು ಹಾಜರಿ

July 20, 2021

ಮೈಸೂರು, ಜು.19(ಎಂಟಿವೈ)- ಹಲವು ಸವಾಲು, ವಿರೋಧ ಜೊತೆಗೆ ಆತಂಕದ ನಡುವೆಯೂ ಸೋಮವಾರ ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಮೊದಲ ದಿನದ ಪರೀಕ್ಷೆ ಸುಸೂತ್ರವಾಗಿ ನಡೆಯಿತು. ಮೈಸೂರು ಜಿಲ್ಲೆ ಯಲ್ಲಿ 237 ಕೇಂದ್ರಗಳಲ್ಲಿ 37339 ವಿದ್ಯಾರ್ಥಿ ಗಳು ಪರೀಕ್ಷೆಗೆ ಹಾಜರಾದರೆ, ವಿವಿಧ ಕಾರಣದಿಂದ 197 ಮಂದಿ ಗೈರಾದರು.

ಕೋವಿಡ್ 2ನೇ ಅಲೆಯ ಆತಂಕÀದಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ವಿರೋಧ ವ್ಯಕ್ತವಾ ಗಿತ್ತು. ಆದರೆ ಸರ್ಕಾರ ಅಗತ್ಯ ಸುರಕ್ಷತಾ ಕ್ರಮದೊಂದಿಗೆ ಪರೀಕ್ಷೆ ನಡೆಸಲು ನಿರ್ಧ ರಿಸಿತ್ತು. ಇತಿಹಾಸದಲ್ಲೇ ಇದೇ ಮೊದಲು ಎಸ್‍ಎಸ್‍ಎಲ್‍ಸಿ ಪರೀಕ್ಷೆ 2 ದಿನಕ್ಕೆ ಸೀಮಿತ ಗೊಳಿಸಲಾಗಿತ್ತು. ನಿಗದಿತ ವೇಳಾಪಟ್ಟಿಯಂತೆ ಇಂದು ಬೆಳಗ್ಗೆ ನಡೆದ ಐಚ್ಛಿಕ ವಿಷಯಗಳ ಒಳಗೊಂಡ ಮೊದಲ ಪರೀಕ್ಷೆ ಯಾವುದೇ ಗೊಂದಲವಿಲ್ಲದೆ, ಸುಸೂತ್ರವಾಗಿ ನಡೆಯಿತು.

37339 ಹಾಜರಿ: ಮೈಸೂರು ನಗರ ದಲ್ಲಿ 72, ಗ್ರಾಮೀಣ ಪ್ರದೇಶದ 165 ಸೇರಿ ದಂತೆ ಜಿಲ್ಲೆಯಲ್ಲಿ 237 ಪರೀಕ್ಷಾ ಕೇಂದ್ರ ಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮದೊಂ ದಿಗೆ ಬೆಳಗ್ಗೆ 10.30ರಿಂದ 1.30ರವರೆಗೆ ಪರೀಕ್ಷೆ ನಡೆಯಿತು. ಪ್ರಸಕ್ತ ಸಾಲಿನಲ್ಲಿ 37536 ವಿದ್ಯಾರ್ಥಿ ಗಳು ನೋಂದಾಯಿಸಿಕೊಂಡಿದ್ದರು. ಆದರೆ, 37339 ಮಂದಿಯಷ್ಟೇ ಹಾಜ ರಾದರೆ, ವಿವಿಧ ಕಾರಣಗಳಿಂದ 197 ವಿದ್ಯಾರ್ಥಿಗಳು ಗೈರಾದರು.
ಅನಾರೋಗ್ಯಕ್ಕೀಡಾಗಿದ್ದ ವಿದ್ಯಾರ್ಥಿ ಗಳಿಗೂ ಅವಕಾಶ: ಯಾವ ವಿದ್ಯಾರ್ಥಿಯೂ ಪರೀಕ್ಷೆಯಿಂದ ವಂಚಿತರಾಗದಂತೆ ನೋಡಿ ಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು. ಕೋವಿಡ್ ಸೋಂಕಿಗೆ ಒಳಗಾಗಿದ್ದ ಓರ್ವ ವಿದ್ಯಾರ್ಥಿ ಕೋವಿಡ್ ಕೇರ್ ಸೆಂಟರ್‍ನಲ್ಲೇ ಪರೀಕ್ಷೆ ಬರೆದರೆ, ಅನಾರೋಗ್ಯಕ್ಕೆ ತುತ್ತಾ ಗಿದ್ದ 9 ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿ ಯಲ್ಲಿ ಕೂರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಯಿತು. ಸರ್ಕಾರಿ ವಸತಿ ನಿಲಯ ದಲ್ಲಿದ್ದ 5 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

242 ವಲಸೆ ವಿದ್ಯಾರ್ಥಿಗಳು: ಕೊರೊನಾ ಹಾವಳಿಯಿಂದಾಗಿ ಮೈಸೂರು ಜಿಲ್ಲೆಯಿಂದ ಊರಿಗೆ ಹೋಗಿದ್ದ 775 ವಿದ್ಯಾರ್ಥಿಗಳು, ಆಯಾಯ ಬೇರೆ ಜಿಲ್ಲೆ ಗಳಲ್ಲಿ ಪರೀಕ್ಷೆ ಬರೆಯಲು ಹೆಸರು ನೋಂದಾ ಯಿಸಿಕೊಂಡಿದ್ದರು. ಇನ್ನು ಬೇರೆ ಜಿಲ್ಲೆ ಯಿಂದ ಮೈಸೂರಿಗೆ ವಲಸೆ ಬಂದಿದ್ದ 338 ಮಂದಿಯಲ್ಲಿ 242 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾದರು.

ಹಬ್ಬದ ವಾತಾವರಣ: ಕೋವಿಡ್ ಸೋಂಕು ಆತಂಕದಿಂದ ವಿದ್ಯಾರ್ಥಿಗಳನ್ನು ದೂರ ಮಾಡಲು ಬಹುತೇಕ ಎಲ್ಲಾ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಸ್ವಚ್ಛಂದÀ ವಾತಾವರಣ ಸೃಷ್ಟಿಸಲಾಗಿತ್ತು. ಹಲವು ಪರೀಕ್ಷಾ ಕೇಂದ್ರಗಳ ಮುಂದೆ ರಂಗೋಲಿ ಹಾಕಿ, ಹೂ ಸುರಿದು ವಿದ್ಯಾರ್ಥಿಗಳನ್ನು ಸ್ವಾಗತಿಸಿ ದರೆ, ಮತ್ತೆ ಕೆಲ ಕೇಂದ್ರದಲ್ಲಿ ತಳಿರು-ತೋರಣಗಳಿಂದ ಶಾಲೆಯ ಪ್ರವೇಶ ದ್ವಾರ ಮತ್ತು ಆವರಣವನ್ನು ಸಿಂಗರಿಸಲಾಗಿತ್ತು. ಮಹಾರಾಜ ಪ್ರೌಢಶಾಲೆಯಲ್ಲಿ ಶಿಕ್ಷಕರೇ ಶಾಲೆ ಮುಖ್ಯದ್ವಾರವನ್ನು ತಳಿರು-ತೋರಣಗಳಿಂದ ಸಿಂಗರಿಸಿದ್ದರು. ಮರಿಮಲ್ಲಪ್ಪ ಶಾಲೆಯ ಮುಖ್ಯ ದ್ವಾರವನ್ನು ಬಲೂನುಗಳಿಂದ ಸಿಂಗರಿಸಲಾಗಿತ್ತು. ಸದ್ವಿದ್ಯಾ ಶಾಲೆಯಲ್ಲಿ ರಂಗೋಲಿ ಬಿಡಿಸಿ, ಹೂವಿನಿಂದ ಅಲಂ ಕಾರ ಮಾಡಲಾಗಿತ್ತು.

ತಪಾಸಣೆ: ಎಲ್ಲಾ ಪರೀಕ್ಷಾ ಕೇಂದ್ರ ಗಳಲ್ಲೂ ಆರೋಗ್ಯ, ಆಶಾ ಕಾರ್ಯಕರ್ತೆ ಯರು, ಸ್ಕೌಟ್ಸ್ ಮತ್ತು ಗೈಡ್ಸ್ ಕೆಡೆಟ್‍ಗಳು, ಸ್ವಯಂ ಸೇವಕರು ಹಾಜರಿದ್ದರು. ಪ್ರತಿ ವಿದ್ಯಾರ್ಥಿಯ ಹೆಸರು, ಪ್ರವೇಶಾತಿ ಸಂಖ್ಯೆ ನೋಂದಣಿ ಮಾಡಿಕೊಳ್ಳುವುದರೊಂದಿಗೆ, ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ಹಾಗೂ ಪಲ್ಸ್ ಆಕ್ಸಿಮೀಟರ್‍ನಲ್ಲಿ ತಪಾಸಣೆ ಮಾಡಿ ದರು. ಅಲ್ಲದೆ ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಸಾಲಾಗಿ ಬರುವಂತೆ ಸ್ವಯಂಸೇವಕರು ಸಹ ಕರಿಸಿದರು. ಅಲ್ಲದೆ ಪರೀಕ್ಷಾ ಕೊಠಡಿ ಯಲ್ಲಿ ವಿದ್ಯಾರ್ಥಿಗಳಿಗೆ ಕುಡಿಯಲು ಬಿಸಿ ನೀರು ಪೂರೈಸುವ ಕಾರ್ಯವನ್ನು ಸ್ವಯಂ ಸೇವಕರು ಮಾಡಿದರು.

ಬಿಗಿ ಭದ್ರತೆ: ಪರೀಕ್ಷಾ ಕೇಂದ್ರದ ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಲಾಗಿತ್ತು. ಪರೀಕ್ಷಾ ಕೇಂದ್ರದ ಬಳಿಯ ಜೆರಾಕ್ಸ್ ಅಂಗಡಿ ಮುಚ್ಚಿಸಲಾಗಿತ್ತು. ಪರೀಕ್ಷಾ ಕೇಂದ್ರದ ಬಳಿ ಪೋಷಕರು ಗುಂಪು ಗೂಡದಂತೆ ಬ್ಯಾರಿಕೇಡ್ ಹಾಕಿ ನಿಯಂತ್ರಿಸ ಲಾಯಿತು. ಇದರಿಂದ ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿ ಪರೀಕ್ಷಾ ಕೇಂದ್ರಕ್ಕೆ ಯಾವುದೇ ಗೊಂದಲ, ಆತಂಕವಿಲ್ಲದೆ ಪ್ರವೇ ಶಿಸಿ ಪರೀಕ್ಷೆ ಬರೆಯಲು ಸಾಧ್ಯವಾಯಿತು.

ಖಜಾನೆಯಿಂದ ಉತ್ತರ ಪತ್ರಿಕೆ: ಇಂದು ಬೆಳಗ್ಗೆ 6.30ರಿಂದಲೇ ಮೈಸೂರು ಜಿಲ್ಲಾ ಧಿಕಾರಿ ಕಚೇರಿಯಲ್ಲಿರುವ ಖಜಾನೆಯಿಂದ ಬಿಗಿ ಭದ್ರತೆಯಲ್ಲಿ, ಡಿಡಿಪಿಐ ಡಾ.ಪಾಂಡು ರಂಗ ಸಮ್ಮುಖದಲ್ಲಿ ಎಲ್ಲಾ ಬಿಇಓ ಹಾಗೂ ತಹಶೀಲ್ದಾರ್ ಶ್ರೇಣಿ ಅಧಿಕಾರಿಗಳ ಉಪಸ್ಥಿತಿ ಯಲ್ಲಿ ಪ್ರಶ್ನೆ ಪತ್ರಿಕೆಯನ್ನು ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯಲಾಯಿತು. ಮೈಸೂರು ನಗರ ದಲ್ಲಿ ಐದು ಸೇರಿದಂತೆ ಒಟ್ಟು 12 ರೂಟ್ ನಲ್ಲಿ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಯ ಬೆಂಗಾವಲಿನಲ್ಲಿ ಮೊದಲು ಪಿರಿಯಾ ಪಟ್ಟಣ, ಹೆಚ್.ಡಿ.ಕೋಟೆ ತಾಲೂಕಿಗೆ ಪ್ರಶ್ನೆ ಪತ್ರಿಕೆ ಕಳುಹಿಸಿದ ನಂತರ ಉಳಿದ ತಾಲೂಕುಗಳಿಗೆ ರವಾನಿಸಲಾಯಿತು.

ಅಂತಿಮ ಹಂತದಲ್ಲಿ ಮೈಸೂರು ನಗರದ 72 ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಕೊಂಡೊಯ್ಯಲಾಯಿತು. ಪರೀಕ್ಷೆ ಆರಂಭಕ್ಕೂ ಮುನ್ನ ಎಲ್ಲಾ 237 ಕೇಂದ್ರ ಗಳಿಗೂ ಸಕಾಲದಲ್ಲಿ ಪ್ರಶ್ನೆ ಪತ್ರಿಕೆ ತಲುಪು ವಂತೆ ಕ್ರಮ ಕೈಗೊಳ್ಳಲಾಗಿತ್ತು.

Translate »