ಓಡಿಪಿಯಿಂದ ಜಿಲ್ಲಾಡಳಿತಕ್ಕೆ  ವಿವಿಧ ಪರಿಕರಗಳ ಕೊಡುಗೆ
ಮೈಸೂರು

ಓಡಿಪಿಯಿಂದ ಜಿಲ್ಲಾಡಳಿತಕ್ಕೆ ವಿವಿಧ ಪರಿಕರಗಳ ಕೊಡುಗೆ

July 19, 2021

ಮೈಸೂರು, ಜು.18(ಎಂಟಿವೈ)-ಮೈಸೂರಿನ ಓಡಿಪಿ ಸಂಸ್ಥೆಯು ಜಿಲ್ಲಾಡಳಿತಕ್ಕೆ 10 ಆಕ್ಸಿಜನ್ ಕಾನ್ಸಂಟ್ರೇಟರ್ ಸೇರಿದಂತೆ ಇನ್ನಿತರ ಪರಿಕರವನ್ನು ಕೊಡುಗೆಯಾಗಿ ನೀಡಿದೆ.

ನವದೆಹಲಿಯ ಕ್ಯಾರಿಟಾಸ್ ಇಂಡಿಯಾ, ಕ್ಯಾಥೋ ಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ ಸಂಸ್ಥೆಯ ಸಾಮಾಜಿಕ ಕಾರ್ಯಕ್ರಮದ ಅಂಗ ವಾಗಿ ಓಡಿಪಿ ಸಂಸ್ಥೆ ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ವಿತರಿಸಲು 10 ಆಕ್ಸಿಜನ್ ಕಾನ್ಸಂ ಟ್ರೇಟರ್ ಅನ್ನು ಇತ್ತೀಚೆಗೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರಿಗೆ ಹಸ್ತಾಂತರಿಸಿದೆ.

ಈ ಆಕ್ಸಿಜನ್ ಕಾನ್ಸಂಟ್ರೇಟರ್‍ಗಳನ್ನು ವಿವಿ ಪುರಂನಲ್ಲಿರುವ ಹೆರಿಗೆ ಆಸ್ಪತ್ರೆ, ಜಯನಗರ ದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರ, ಜೆಎಲ್‍ಬಿ ರಸ್ತೆಯಲ್ಲಿರುವ ಎಸ್‍ಎಂಟಿ ಆಸ್ಪತ್ರೆಯಲ್ಲಿ ಬಳಸುವಂತೆ ಓಡಿಪಿ ಸಂಸ್ಥೆ ಕೋರಿದೆ.

ಇದೇ ವೇಳೆ ಮೈಸೂರು ಬಿಷಪ್ಸ್ ಡಾ.ಕೆ.ಎ. ವಿಲಿಯಂ ಮಾತನಾಡಿ, ಓಡಿಪಿ ಸಂಸ್ಥೆ ವತಿಯಿಂದ ಸಮಾಜ ಸೇವಾ ಹಿನ್ನೆಲೆಯಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ನೀಡಿರುವುದು ಶ್ಲಾಘನೀಯ. ಕೋವಿಡ್ ಸಂತ್ರಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ಓಡಿಪಿ ಸಂಸ್ಥೆ ಈಗಾಗಲೇ ಸಾಕಷ್ಟು ಸೇವೆ ಸಲ್ಲಿಸಿದೆ. ಲಸಿಕೆ ಪಡೆದುಕೊಳ್ಳುವಂತೆ ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕ್ರಮವನ್ನು ನಡೆಸಲಾಗಿದೆ. ಅಲ್ಲದೆ ಡಯಾಲಿಸಿಸ್ ಮಾಡಿಸಿಕೊಳ್ಳುವುದಕ್ಕೂ ರೋಗಿಗಳಿಗೆ ನೆರವು ನೀಡಿದೆ. ಸುಮಾರು 55 ಸಾವಿರಕ್ಕೂ ಹೆಚ್ಚು ಮಂದಿಗೆ ದಿನಸಿ ಕಿಟ್ ಹಾಗೂ ಔಷಧಿ ಕಿಟ್ ವಿತರಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋ ಗ್ಯಾಧಿಕಾರಿ ಡಾ. ಕೆ.ಹೆಚ್.ಪ್ರಸಾದ್, ಓಡಿಪಿ ನಿರ್ದೇ ಶಕ ರೆ.ಫಾ. ಅಲೆಕ್ಸ್ ಪ್ರಶಾಂತ್ ಸಿಕ್ವೇರಾ, ಪದಾಧಿ ಕಾರಿಗಳಾದ ಜಾನ್, ರಮೇಶ್, ಅನ್ನಮ್ಮ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »