ಬೆಂಗಳೂರು, ಜುಲೈ 4 (ಕೆಎಂಶಿ)-ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಳೆದ ಭಾನುವಾರ “ಮನ್ ಕಿ ಬಾತ್” ಕಾರ್ಯಕ್ರಮದಲ್ಲಿ ಪ್ರಸ್ತಾ ಪಿಸಿದ ಮಳವಳ್ಳಿ ತಾಲೂಕು ದಾಸನದೊಡ್ಡಿ ಗ್ರಾಮದ ಕಾಮೇ ಗೌಡರ ಜಲಕ್ರಾಂತಿ ಕುರಿತು ನಾನು ಆರು ತಿಂಗಳ ಹಿಂದೆ ಸಾಕ್ಷ್ಯಚಿತ್ರವನ್ನು ನಿರ್ಮಾಣ ಮಾಡಿದ್ದೇನೆ. ಈ ಸಾಕ್ಷ್ಯ ಚಿತ್ರವು ಕೇಂದ್ರ ಸರ್ಕಾರ ನಡೆಸುವ ಪ್ರಕೃತಿ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ ಎಂದು ಸಾಕ್ಷ್ಯಚಿತ್ರ ನಿರ್ದೇಶಕ ಟಿ.ಕೆಂಪಣ್ಣ ತಿಳಿಸಿದ್ದಾರೆ. ಕಾಮೇಗೌಡರ ಜಲ ಸಂರಕ್ಷಣೆ ಕಾರ್ಯದ ಬಗ್ಗೆ ಈಗಾಗಲೇ ಬೆಳಕು ಚೆಲ್ಲಿದ್ದ ನನಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿರು ವುದು ನನ್ನ ಸಾಕ್ಷ್ಯಚಿತ್ರ ನಿರ್ಮಾಣ ಕಾರ್ಯಕ್ಕೆ ಪ್ರೋತ್ಸಾಹ ನೀಡಿದೆ ಎಂದರು.
