ಮೈಸೂರು, ಜು.4 (ಪಿಎಂ)- ಬೋಗಾದಿ ಗ್ರಾಮ ಪಂಚಾಯಿತಿ ಸದಸ್ಯ ರೊಬ್ಬರು ಪೌರಕಾರ್ಮಿಕರ ಮೇಲೆ ಗೂಂಡಾವರ್ತನೆ ತೋರುತ್ತಿದ್ದಾರೆ. ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿ ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋ ಪಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಶನಿವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.
ಬೋಗಾದಿ ಗ್ರಾಪಂನ ಪೌರಕಾರ್ಮಿ ಕರ ಮೇಲೆ ದೈಹಿಕ, ಮಾನಸಿಕ ದೌರ್ಜನ್ಯ ನಡೆಸಲಾಗಿದೆ. ಜೂನ್ 10ರ ಬೆಳಗ್ಗೆ 11ರ ವೇಳೆ ಗ್ರಾಮದ ಸಿದ್ದರಾಮೇಶ್ವರ ಕಲ್ಯಾಣ ಮಂಟಪದ ಪಕ್ಕದ ಗಲ್ಲಿಯಲ್ಲಿ ಮ್ಯಾನ್ ಹೋಲ್ ತ್ಯಾಜ್ಯವನ್ನು ಪೌರಕಾರ್ಮಿಕ ಚೆಲುವ ಅವರಿಂದ ಬರೀಗೈಯಲ್ಲೇ ತೆಗೆ ಸುವ ಮೂಲಕ ಗ್ರಾಪಂ ಸದಸ್ಯ ದಿನೇಶ್ ದೌರ್ಜನ್ಯ ನಡೆಸಿದ್ದಾರೆ. ಅಲ್ಲದೆ, ಚೆಲುವ ಅವÀರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಜೂನ್24ರ ಬೆಳಗ್ಗೆ ಕರ್ತವ್ಯ ನಿರ್ವಹಿಸುತ್ತಿದ್ದ ಚೆಲುವ ಅವರ ಮೇಲೆ ದಿನೇಶ್ ಕಾರು ಹತ್ತಿಸಲು ಯತ್ನಿಸಿದ್ದಾರೆ. ಬಳಿಕ ಚೆಲುವ ಅವರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈಗಾಗಲೇ ದಿನೇಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರೂ ಪೊಲೀಸರು ಬಂಧಿ ಸಿಲ್ಲ ಎಂದು ಪ್ರತಿಭಟನಾಕಾರರು ಅಸಮಾ ಧಾನ ವ್ಯಕ್ತಪಡಿಸಿದ್ದಾರೆ. ದಸಂಸ ರಾಜ್ಯ ಸಂಚಾಲಕ ಹರಿಹರ ಆನಂದಸ್ವಾಮಿ, ಜಿಲ್ಲಾ ಸಂಚಾಲಕ ಆಲಗೂಡು ಎಸ್.ಚಂದ್ರಶೇಖರ್, ನಗರ ಸಂಚಾಲಕ ಪೈ.ಕೃಷ್ಣ, ಜಿಲ್ಲಾ ಸಂಘ ಟನಾ ಸಂಚಾಲಕರಾದ ಆರ್ಟಿಸ್ಟ್ ಎಸ್.ನಾಗ ರಾಜು, ಡಿ.ಎನ್.ಬಾಬು ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.