ಚಾಮರಾಜನಗರ, ಜೂ.21- ಕೋವಿಡ್ -19 ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಮರಳಿದ ಜನರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣಾ ಉದ್ಯೋಗ ಖಾತರಿ ಯೋಜನೆ ಸಂಜೀವಿನಿಯಾಗಿದ್ದು, ಜನರು ಸ್ವಾವ ಲಂಬನೆ ಬದುಕು ಕಟ್ಟಿಕೊಳ್ಳಲು ಸಹಕಾರಿ ಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಜಿಪಂ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್ ರಾಜ್ ಮತ್ತು ದಿ ಆರ್ಟ್ ಆಫ್ ಲಿವಿಂಗ್ ಇವರ ಸಹಯೋಗದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಯಡಿ ಅಂತರ್ಜಲ ಚೇತನ ಯೋಜನೆಗೆ ಚಾಲನೆ ನೀಡಿ ಇಲಾಖೆಯ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.
ಕೋವಿಡ್-19 ಹಿನ್ನೆಲೆÀಯಲ್ಲಿ ಪಟ್ಟಣ ಗಳಿಂದ ಗ್ರಾಮೀಣ ಭಾಗಕ್ಕೆ ಹಿಂತಿರುಗಿ ರುವ ಹಲವರು ತಮ್ಮ ಗ್ರಾಮಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವುದು ತಾವು ಭೇಟಿ ನೀಡಿದ ಹಲವು ಜಿಲ್ಲೆಗಳ ಪ್ರವಾಸದ ವೇಳೆ ಕಂಡು ಬಂದಿದೆ. ಉದ್ಯೋಗಾವ ಕಾಶ ನೀಡುವುದರೊಂದಿಗೆ ಅವರವರ ಹೊಲ, ಬದುವಿನಲ್ಲಿ ಕೆಲಸವಾಗಿದ್ದು ಆಸ್ತಿಗೂ ಅನುಕೂಲವಾಗಿದೆ. ಗ್ರಾಮೀಣರಿಗೆ ಸ್ಥಳೀಯವಾಗಿ ಹೆಚ್ಚಿನ ಮಟ್ಟದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಯಡಿ ಉದ್ಯೋಗ ಲಭಿಸಿದೆ ಎಂದರು.
ಮಾನವನ ದುರಾಸೆಯಿಂದ ಭೂಮಿ ಅತಿಕ್ರಮಣದಿಂದ ಅಂತರ್ಜಲದ ಮಟ್ಟ ಕುಸಿತ ಕಂಡಿದೆ. ಸಮಾಜದ ಋಣ ತೀರಿ ಸಲು ಪ್ರತಿಯೊಬ್ಬರು ಕ್ರಿಯಾಶೀಲರಾಗ ಬೇಕು. ಜಿಲ್ಲೆಯಲ್ಲಿ ನರೇಗಾ ಕಾಮಗಾರಿ ಯನ್ನು ವೀಕ್ಷಿಸಿದ್ದು, ಬಹಳ ಚೆನ್ನಾಗಿ ಕೆಲಸಗಳು ಸಾಗುತ್ತಿದೆ. ಹೀಗಾಗಿ 40 ವರ್ಷದ ನೀರಿನ ಮಟ್ಟವು ತಳಮಟ್ಟಕ್ಕೆ ಹೋಗಿರುವುದನ್ನು ಇನ್ನೂ 3 ವರ್ಷ ಗಳಲ್ಲಿ ನೀರಿನ ಮಟ್ಟವನ್ನು ಹೆಚ್ಚಿಸುವ ಕಾರ್ಯದಲ್ಲಿ ಪ್ರತಿಯೊಬ್ಬರು ಸಹಕಾರಿ ಯಾಗಬೇಕು ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್ ರಾಜ್ ಇಲಾಖೆ ಮುಖ್ಯ ಕಾರ್ಯ ದರ್ಶಿ ಎಲ್.ಕೆ.ಅತಿಕ್ ಅಹಮದ್ ಮಾತ ನಾಡಿ, ಜಿಲ್ಲೆಯಲ್ಲಿ ಅಂತರ್ಜಲ ಚೇತನಕ್ಕೆ ಸಚಿವರು ಚಾಲನೆ ನೀಡಿದ್ದು, ಮಳೆ ನೀರನ್ನು ಸಂಗ್ರಹಿಸುವ ಮಹತ್ವಕಾಂಕ್ಷೆ ಯೋಜನೆ ಯಾಗಿದೆ. ಇದರಿಂದ ಕುಡಿಯಲು ನೀರು, ರೈತರ ಬೆಳೆಗಳಿಗೆ ನೀರು ಸಿಗುವಂತೆ ಆಗು ತ್ತದೆ. ಜನರು ಗ್ರಾಮಗಳಲ್ಲಿ ನೀರಿನ ಬಜೆಟ್ ಅಳವಡಿಸಿಕೊಳ್ಳಲು ಅಧಿಕಾರಿಗಳು ತಿಳಿವಳಿಕೆ ನೀಡಬೇಕು. ನರೇಗಾ ಯೋಜ ನೆಯು ಜಲಮೂಲಗಳ ಸಂರಕ್ಷಣೆಗೆ ವರದಾನವಾಗಬೇಕು ಎಂದರು.
ಜಿಪಂ ಅಧ್ಯಕ್ಷೆ ಎಂ.ಅಶ್ವಿನಿ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎನ್.ಮಹೇಶ್, ಸಿ.ಎಸ್.ನಿರಂಜನ್‍ಕುಮಾರ್, ಆರ್. ನರೇಂದ್ರ, ಜಿಪಂ ಉಪಾಧ್ಯಕ್ಷ ಕೆ.ಎಸ್. ಮಹೇಶ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್ ರಾಜ್ ಇಲಾಖೆ ಆಯುಕ್ತ ಅನಿರುದ್ ಶ್ರವಣ್, ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ, ಜಿಪಂ ಸಿಇಓ ನಾರಾಯಣ್‍ರಾವ್, ಆರ್ಟ್ ಆಫ್ ಲಿವಿಂಗ್‍ನ ತಾಂತ್ರಿಕ ಸಹಾ ಯಕ ರವೀಂದ್ರ ದೇಸಾಯಿ, ಜಯರಾಂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.