ಮೈಸೂರು, ಜೂ.21(ಆರ್‍ಕೆಬಿ)-ಅಂತಾರಾಷ್ಟ್ರಿಯ ಯೋಗ ದಿನ ಹಾಗೂ ಸಂಸದ ಪ್ರತಾಪ್ ಸಿಂಹ ಅವರ ಹುಟ್ಟುಹಬ್ಬದಂಗವಾಗಿ ಪ್ರತಾಪ್ ಸಿಂಹ ಅಭಿಮಾನಿ ಬಳಗದ ಸದಸ್ಯರು ಭಾನುವಾರ ಸಾಯಿಬಾಬಾ ದೇವಸ್ಥಾನದಲ್ಲಿ ಯೋಗ ಶಿಕ್ಷಕರಾದ ಹೇಮಾವತಿ ರಮೇಶ್, ವೀಣಾ, ಕುಮಾರ್, ಮಣಿ ಅವರನ್ನು ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಮುಖಂಡ ಜಯಸಿಂಹ ಶ್ರೀಧರ್, ಪ್ರತಿದಿನ ಯೋಗ, ಸಂಸ್ಕಾರ ಮತ್ತು ಸ್ವಾವಲಂಬನೆಯ ಕಲ್ಪನೆಯೊಂದಿಗೆ ಸಾವಿರಾರು ಜನರಿಗೆ ಯೋಗ ಕಲಿಸುತ್ತಿರುವ ಯೋಗ ಗುರುಗಳಿಗೆ ಸನ್ಮಾನಿಸುತ್ತಿರುವುದು ನಮ್ಮನ್ನು ನಾವು ಗೌರವಿಸಿ ಕೊಂಡಂತೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಎಸ್‍ಟಿ ಮೋರ್ಚಾ ಕಾರ್ಯದರ್ಶಿ ಕಾರ್ತಿಕ್ ನಾಯಕ್, ಕೇಶವ, ಹೇಮಾವತಿ, ಪದ್ಮಮ್ಮ ಪ್ರಕಾಶ್, ಶ್ರೀನಿವಾಸ್, ವೆಂಕಟೇಶ್, ಶಶಿ, ನಾರಾಯಣ, ಚೇತನ್ ಇನ್ನಿತರರು ಉಪಸ್ಥಿತರಿದ್ದರು.