ಇನ್ನರ್‍ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್‍ನಿಂದ ಪೌರಕಾರ್ಮಿಕರಿಗೆ ಮಾಸ್ಕ್ ವಿತರಣೆ
ಮೈಸೂರು

ಇನ್ನರ್‍ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್‍ನಿಂದ ಪೌರಕಾರ್ಮಿಕರಿಗೆ ಮಾಸ್ಕ್ ವಿತರಣೆ

June 22, 2020

ಮೈಸೂರು, ಜೂ.21(ಎಂಟಿವೈ)-ಮಾಸ್ಕ್ ಡೇ ಹಿನ್ನೆಲೆ ಯಲ್ಲಿ ಮೈಸೂರಿನಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ರುವ ಪೌರ ಕಾರ್ಮಿಕರಿಗೆ ಇನ್ನರ್‍ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ವತಿಯಿಂದ ಮರು ಬಳಕೆಯ ಮಾಸ್ಕ್ ವಿತರಿಸಲಾಯಿತು.

ಮೈಸೂರಿನ ಚಿಕ್ಕಗಡಿಯಾರದ ಬಳಿ ನಡೆದ ಸರಳ ಸಮಾರಂಭದಲ್ಲಿ ಇನ್ನರ್‍ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಸಂಸ್ಥೆಯ ಸದಸ್ಯರು ಮಾಸ್ಕ್ ವಿತರಿಸಿದರು.

ಇದೇ ವೇಳೆ ಪಾಲಿಕೆಯ ಆರೋಗ್ಯಾಧಿಕಾರಿ ಡಾ. ಡಿ.ಜಿ. ನಾಗರಾಜು ಮಾತನಾಡಿ, ಮೈಸೂರು ನಗರದಲ್ಲಿ ವೈದ್ಯ ಕೀಯ ಸಿಬ್ಬಂದಿಯನ್ನು ಹೊರತುಪಡಿಸಿದರೆ, ಪೌರ ಕಾರ್ಮಿಕರ ಶ್ರಮ ಮಹತ್ವದ್ದಾಗಿದೆ. ಲಾಕ್‍ಡೌನ್ ಸಂದರ್ಭ ದಲ್ಲಿಯೂ ಪ್ರತೀ ದಿನ ನಗರದ ಸ್ವಚ್ಛತೆ ಕಾಪಾಡುವ ಮಹತ್ತರ ಜವಾಬ್ದಾರಿಯನ್ನು ಪೌರಕಾರ್ಮಿಕರು ನಿಭಾ ಯಿಸುತ್ತಿದ್ದಾರೆ. ಇಂತಹ ಶ್ರಮಜೀವಿಗಳನ್ನು ಇನ್ನರ್‍ವ್ಹೀಲ್ ಕ್ಲಬ್ ಆಫ್ ಮೈಸೂರ್ ಸೆಂಟ್ರಲ್ ಸಂಸ್ಥೆಯ ಸದಸ್ಯರು ಗುರುತಿಸಿ ಮರು ಬಳಕೆಯ ಮಾಸ್ಕ್ ವಿತರಿಸಿರುವುದು ಶ್ಲಾಘನೀಯ. ಮಾಸ್ಕ್ ಬಳಕೆ ಕಡ್ಡಾಯವಾಗಿರುವ ಹಿನ್ನೆಲೆ ಯಲ್ಲಿ ಸಂಘ-ಸಂಸ್ಥೆಗಳು ಶ್ರಮಿಕ ವರ್ಗಕ್ಕೆ, ಬಡ ಜನರಿಗೆ ಮಾಸ್ಕ್ ವಿತರಿಸುವ ಜವಾಬ್ದಾರಿ ಪ್ರದರ್ಶಿಸಬೇಕು. ಇದೇ ಸಂದರ್ಭದಲ್ಲಿ ಬಳಸಿದ ಮಾಸ್ಕ್‍ಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು. ಅವುಗಳನ್ನು ಸುರಕ್ಷಿತ ಸ್ಥಳದಲ್ಲಿ ಹಾಕ ಬೇಕು. ಸೋಂಕಿತ ವ್ಯಕ್ತಿಗಳು ಮಾಸ್ಕ್ ಅನ್ನು ರಸ್ತೆ ಬದಿ ಬಿಸಾಡುವುದರಿಂದ ಇತರರಿಗೂ ಸೋಂಕು ಹರಡುವ ಅಪಾಯ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ಯೊಬ್ಬರು ತಮ್ಮ ನಾಗರಿಕ ಜವಾಬ್ದಾರಿಯನ್ನು ಅರಿತು ಕೊಳ್ಳುವಂತೆ ಅವರು ಮನವಿ ಮಾಡಿದರು.

ಇನ್ನರ್‍ವ್ಹೀಲ್ ಕ್ಲಬ್ ಆಫ್ ಮೈಸೂರ್ ಸೆಂಟ್ರಲ್ ಅಧ್ಯಕ್ಷೆ ಕವಿತಾ ವಿನೋದ್ ಮಾತನಾಡಿ, ತಮ್ಮ ಆರೋಗ್ಯವನ್ನು ಲೆಕ್ಕಿಸದೆ, ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಪೌರಕಾರ್ಮಿ ಕರು ತಮ್ಮ ಜವಾಬ್ದಾರಿ ನಿಭಾಯಿಸುವುದರೊಂದಿಗೆ ಮೈಸೂರಿನ ಜನತೆಯ ಆರೋಗ್ಯ ಕಾಪಾಡುವಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಕ್ಲಬ್ ವತಿಯಿಂದ ಪ್ರಾಥಮಿಕ ಹಂತದಲ್ಲಿ ಮಾಸ್ಕ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವಾ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಇನ್ನರ್‍ವ್ಹೀಲ್ ಕ್ಲಬ್ ಆಫ್ ಮೈಸೂರ್ ಸೆಂಟ್ರಲ್ ಪದಾಧಿಕಾರಿಗಳಾದ ಲಕ್ಷ್ಮಿ ಅರುಣ್, ಮಾಜಿ ಅಧ್ಯಕ್ಷೆ ಚಂದ್ರಿಕಾ ಸುದೀಪ್, ಎಂ.ಎನ್.ಪ್ರೇಮಾ ಸೇರಿ ದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »