ಹಿರಿಯ ಕಲಾವಿದ ಹೆಚ್.ಜಿ.ಸೋಮಶೇಖರರಾವ್ ನಿಧನ
ಮೈಸೂರು

ಹಿರಿಯ ಕಲಾವಿದ ಹೆಚ್.ಜಿ.ಸೋಮಶೇಖರರಾವ್ ನಿಧನ

November 4, 2020

ಬೆಂಗಳೂರು,ನ.3-ರಂಗಭೂಮಿ, ಕಿರುತೆರೆ ಹಾಗೂ ಚಲನಚಿತ್ರ ಕಲಾವಿದ ಎಚ್.ಜಿ.ಸೋಮಶೇಖರ ರಾವ್ (86) ವಯೋಸಹಜ ಕಾಯಿಲೆಗಳಿಂದಾಗಿ ಜಯನಗರದ ಶಾಂತಿ ಆಸ್ಪತ್ರೆಯಲ್ಲಿ ಮಂಗಳವಾರ ಹೃದಯಾಘಾತದಿಂದ ನಿಧನರಾದರು.
ಹಿರಿಯ ಕಲಾವಿದರಾದ ಎಸ್‍ಜಿಎಸ್, ಪತ್ನಿ, ಇಬ್ಬರು ಪುತ್ರರು ಹಾಗೂ ಕಿರಿಯ ಸೋದರ, ಚಿತ್ರನಟ ದತ್ತಣ್ಣ ಸೇರಿದಂತೆ ಅಪಾಯ ಬಂಧು ಬಳಗವನ್ನು ಅಗಲಿದ್ದಾರೆ.

ಕೆನರಾ ಬ್ಯಾಂಕ್‍ನ ಮಾಜಿ ಉದ್ಯೋಗಿಯಾದ ಸೋಮ ಶೇಖರರಾವ್, ಮಿಂಚಿನ ಓಟ, ಮಿಥಿಲೆಯ ಸೀತೆಯರು, ಸಾವಿತ್ರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬ್ಯಾಂಕ್ ವೃತ್ತಿಯಲ್ಲಿದ್ದುಕೊಂಡೇ ಸಾಹಿತ್ಯ, ರಂಗಭೂಮಿ, ಸಿನಿಮಾ ಕ್ಷೇತ್ರಗಳತ್ತ ಅತೀವ ಆಸಕ್ತಿಯನ್ನು ಹೊಂದಿದ್ದವರು. ಬದುಕಿನ ಅನುಭವ ಕಥನ ಸೇರಿದಂತೆ ಹಲವು ಸಾಹಿತ್ಯ ಕೃತಿಗಳನ್ನೂ ರಚಿಸಿದ್ದಾರೆ. ಅನೇಕ ಪಾಶ್ಚಿಮಾತ್ಯ ಮತ್ತು ಭಾರತೀಯ ನಾಟಕಕರ್ತೃಗಳ ಕೃತಿಗಳನ್ನು ರಂಗಭೂಮಿ ಮೇಲೆ ಜೀವಂತಗೊಳಿಸಿದವರು. 1981ರಲ್ಲಿ ಚಿತ್ರರಂಗ ಪ್ರವೇಶಿಸಿದ ಸೋಮಶೇಖರ್, ಟಿ.ಎಸ್.ರಂಗಾ ನಿರ್ದೇಶನದ ಸಾವಿತ್ರಿ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಖ್ಯಾತ ನಟ ಅನಿಲ್ ಠಕ್ಕರ್ ಅವರ ಪ್ರತಿದ್ವಂದಿ ಯಾಗಿ ಇವರು ನೀಡಿದ ಅಭಿನಯ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಹರಕೆಯ ಕುರಿ ಚಿತ್ರದಲ್ಲಿ ಸೋಮಶೇಖರ್ ಅವರ ಅಭಿನಯಕ್ಕಾಗಿ 1992-93ರಲ್ಲಿ ರಾಜ್ಯ ಸರ್ಕಾರದ ಅತ್ಯುತ್ತಮ ಪೆÇೀಷಕ ನಟ ಪ್ರಶಸ್ತಿ ಲಭಿಸಿತ್ತು.

 

 

 

Translate »