ಪ್ರತ್ಯೇಕ ಪ್ರಕರಣ: 10 ಮಂದಿ ಜೂಜುಕೋರರ ಬಂಧನ
ಮೈಸೂರು ಗ್ರಾಮಾಂತರ

ಪ್ರತ್ಯೇಕ ಪ್ರಕರಣ: 10 ಮಂದಿ ಜೂಜುಕೋರರ ಬಂಧನ

April 23, 2020

ನಂಜನಗೂಡು, ಏ.22-ತಾಲೂಕಿನ ಬಿಳಿಗೆರೆ ಠಾಣೆ ಪೊಲೀಸರು ಪ್ರತ್ಯೇಕ ಕಾರ್ಯಚರಣೆ ನಡೆಸಿ, ಜೂಜಾಟದಲ್ಲಿ ತೊಡಗಿದ್ದ 10 ಮಂದಿಯನ್ನು ವಶಕ್ಕೆ ಪಡೆದು, ಪಣಕ್ಕಿಟ್ಟಿದ್ದ 6,100 ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ.

ಎಎಸ್‍ಐ ಜವರೇಗೌಡರ ನೇತೃತ್ವದಲ್ಲಿ ಪೊಲೀಸರು ತಾಲೂಕಿನ ತಾಯೂರು ಗ್ರಾಮದ ಹೊರವಲಯದಲ್ಲಿ ಜೂಜಾಟದಲ್ಲಿ ನಿರತರಾಗಿದ್ದ ಐವರನ್ನು ಬಂಧಿಸಿ, ಪಣಕ್ಕಿಟ್ಟಿದ್ದ 2,500 ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಮುಳ್ಳೂರು-ಹೊರಳವಾಡಿ ರಸ್ತೆಯಲ್ಲಿ ಜೂಜಾಟದಲ್ಲಿ ತೊಡಗಿದ್ದ ಐವರನ್ನು ಬಂಧಿಸಿ, 3,600 ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ. ಎರಡೂ ಪ್ರಕರಣಗಳ ಸಂಬಂಧ ಬಿಳಿಗೆರೆ ಪಿಎಸ್‍ಐ ಆರತಿ ದೂರು ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »