ಅಲೆಮಾರಿ, ಅರೆ ಅಲೆಮಾರಿ ಜನಾಂಗಕ್ಕೆ ಪ್ರತ್ಯೇಕ  ಬಡಾವಣೆ, ರುದ್ರಭೂಮಿ ಕಲ್ಪಿಸುವ ಚಿಂತನೆ
ಮೈಸೂರು

ಅಲೆಮಾರಿ, ಅರೆ ಅಲೆಮಾರಿ ಜನಾಂಗಕ್ಕೆ ಪ್ರತ್ಯೇಕ ಬಡಾವಣೆ, ರುದ್ರಭೂಮಿ ಕಲ್ಪಿಸುವ ಚಿಂತನೆ

April 8, 2021

ಮೈಸೂರು,ಏ.7(ಪಿಎಂ)- ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗ ಹೆಚ್ಚಿ ರುವ ಜಿಲ್ಲೆಗಳಲ್ಲಿ ಈ ಸಮುದಾಯಕ್ಕೆ ನಿರ್ದಿಷ್ಟ ಸ್ಥಳದಲ್ಲಿ ಪ್ರತ್ಯೇಕ ಬಡಾವಣೆ ನಿರ್ಮಿಸು ವುದು ಹಾಗೂ ರುದ್ರಭೂಮಿ ಕಲ್ಪಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದ ಕರ್ನಾ ಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ, ರಾಜ್ಯ ಬಜೆಟ್‍ನಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಿರಿಸಿರುವ 500 ಕೋಟಿ ರೂ. ಅನು ದಾನದಲ್ಲಿ ನಿಗಮಕ್ಕೆ 250 ಕೋಟಿ ರೂ. ಅನುದಾನ ನೀಡುವಂತೆ ಮುಖ್ಯಮಂತ್ರಿ ಗಳಲ್ಲಿ ಮನವಿ ಮಾಡಿರುವುದಾಗಿ ಹೇಳಿದರು.

ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭ ದಲ್ಲಿಯೂ ಅಲೆಮಾರಿ ಜನಾಂಗದಲ್ಲಿ ಬಹು ತೇಕ ಕುಟುಂಬಗಳು ಮೂಲಭೂತ ಸೌಲಭ ಗಳಿಲ್ಲದೇ ದುಸ್ಥಿತಿಯಲ್ಲಿ ಬದುಕುವ ಪರಿ ಸ್ಥಿತಿ ಇದೆ. ಬಯಲಿನಲ್ಲಿ ಡೇರೆ ಹಾಕಿಕೊಂಡು ಬದುಕುವ ಈ ಸಮುದಾಯವನ್ನು ಮುಖ್ಯ ವಾಹಿನಿಗೆ ತರಬೇಕಿದೆ. ಸಮುದಾಯ ಹೆಚ್ಚು ಜನಸಂಖ್ಯೆ ಹೊಂದಿರುವ ಜಿಲ್ಲೆಗಳಲ್ಲಿ ಪ್ರತ್ಯೇಕ ಬಡಾವಣೆ ನಿರ್ಮಿಸಲು ಚಿಂತನೆ ನಡೆಸಿದ್ದೇನೆ ಎಂದು ತಿಳಿಸಿದರು.

ಡೇರೆ ಮುಕ್ತ ರಾಜ್ಯ ಮಾಡುವ ಆಶಯ ಹೊಂದಿದ್ದೇನೆ. ಅದು ಅಷ್ಟು ಸುಲಭವಲ್ಲ ಎಂಬುದು ಗೊತ್ತಿದೆ. ಆದರೂ ಸವಾಲಾಗಿ ಸ್ವೀಕರಿಸಿ ಕೆಲವು ಜಿಲ್ಲೆಗಳಲ್ಲಾದರೂ ಇದನ್ನು ಸಾಧಿಸುವ ವಿಶ್ವಾಸ ಹೊಂದಿದ್ದೇನೆ. ಮುಖ್ಯ ಮಂತ್ರಿಗಳು ಹಾಗೂ ಸಂಬಂಧಿಸಿದ ಸಚಿ ವರ ಸಹಕಾರ ಪಡೆದು ಮನೆಗಳನ್ನು ನಿರ್ಮಿಸಿ ಕೊಡುವ ಮೂಲಕ ಇದನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಈ ಜನಾಂ ಗದ ಸ್ಥಿತಿಗತಿ ಅರಿಯುತ್ತಿದ್ದೇನೆ. ಪ್ರವಾಸ ಪೂರ್ಣಗೊಂಡ ಬಳಿಕ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗುತ್ತೇನೆ ಎಂದರು.

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಜಂಪೇನಹಳ್ಳಿಯಲ್ಲಿ ಖಾಸಗಿಯವರಿಗೆ ಸೇರಿದ ಜಾಗದಲ್ಲಿ ಶವ ಸಂಸ್ಕಾರ ನಡೆಸಿದ್ದ ಅಲೆಮಾರಿ ಸಮುದಾಯದ ಮಗುವೊಂದರ ಶವವನ್ನು ಹೊರತೆಗೆಸಿ, ಬೇರೆಡೆ ಮತ್ತೆ ಅಂತ್ಯಕ್ರಿಯೆ ನಡೆ ಸಿದ ಪ್ರಕರಣ ಆತಂಕಕಾರಿ. ಈ ಘಟನೆ ಹಿನ್ನೆಲೆ ಯಲ್ಲಿ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ರುದ್ರಭೂಮಿ ಕಲ್ಪಿಸುವ ಉದ್ದೇಶವನ್ನೂ ಹೊಂದಿರುವುದಾಗಿ ತಿಳಿಸಿದರು.

ದಾಖಲೆಗಳಲ್ಲಿ ಅಲೆಮಾರಿ ಉಲ್ಲೇಖಿಸಿ: ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದಲ್ಲಿ 46 ಸಮುದಾಯಗಳಿದ್ದು, ಈ ಜಾತಿಗಳು ಪವರ್ಗ-1ರ ವ್ಯಾಪ್ತಿಗೆ ಬರ ಲಿವೆ. ಜನನ ಪ್ರಮಾಣ ಪತ್ರ, ಶಾಲಾ ವರ್ಗಾ ವಣೆ ಪತ್ರ, ಜಾತಿ ಪ್ರಮಾಣ ಪತ್ರ ಸೇರಿ ದಂತೆ ಮತ್ತಿತರರ ದಾಖಲೆಗಳಲ್ಲಿ `ಅಲೆಮಾರಿ ಹಾಗೂ ಅರೆ ಅಲೆಮಾರಿ’ ಎಂದು ಉಲ್ಲೇ ಖಿಸುತ್ತಿಲ್ಲ. ಇದನ್ನು ಉಲ್ಲೇಖಿಸಿದರೆ ನಿಗಮದ ಸೌಲಭ್ಯ ಪಡೆಯಲು ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಇದನ್ನು ಉಲ್ಲೇಖಿಸಲು ಕ್ರಮ ವಹಿ ಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.

4.38 ಕೋಟಿ ರೂ. ಆರ್ಥಿಕ ನೆರವು: ಮೈಸೂರು ಜಿಲ್ಲೆಯಲ್ಲಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯ ಒಟ್ಟು 41,500 ಜನಸಂಖ್ಯೆ ಹೊಂದಿರುವ ಅಂದಾಜು ಇದೆ. ರಾಜ್ಯದಲ್ಲಿ ಒಟ್ಟಾರೆ ಸುಮಾರು 70 ಲಕ್ಷ ಜನಸಂಖ್ಯೆ ಇದೆ ಎಂದು ಹೇಳಲಾಗಿದೆ. ಆದರೆ ನಿಖರ ಮಾಹಿತಿ ಇಲ್ಲ. ಹೀಗಾಗಿ ಜನಸಂಖ್ಯೆ ಹಿನ್ನೆಲೆಯಲ್ಲಿ ಸಮೀಕ್ಷೆ ಕಾರ್ಯ ನಡೆಸುವ ಉದ್ದೇಶವೂ ಇದೆ. ಮೈಸೂರು ಜಿಲ್ಲೆ ಸಂಬಂಧ 2013-14ನೇ ಸಾಲಿನಿಂದ 2019-20ರವರೆಗೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಡಿ ಅಲೆಮಾರಿ ಜನಾಂ ಗದ 1,101 ಫಲಾನುಭವಿಗಳಿಗೆ ಒಟ್ಟು 4.38 ಕೋಟಿ ರೂ. ಆರ್ಥಿಕ ನೆರವು ಒದಗಿಸಲಾಗಿದೆ ಎಂದು ತಿಳಿಸಿದರು.

ಈ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಕ್ಕಾಗಿ 28 ಫಲಾನುಭವಿ ಗಳಿಗೆ ತಲಾ 50 ಸಾವಿರ ರೂ. ಸಾಲ ವಿತ ರಣೆ ಮಾಡಿದ್ದು, ಒಟ್ಟು 14 ಲಕ್ಷ ರೂ. ಸಾಲಸೌಲಭ್ಯ ನೀಡಿ ನಿಗದಿಪಡಿಸಿದ್ದ ಗುರಿ ಯನ್ನು ಪೂರ್ಣ ಪ್ರಮಾಣದಲ್ಲಿ ತಲುಪ ಲಾಗಿದೆ. ಈ 50 ಸಾವಿರ ರೂ. ನಲ್ಲಿ 10 ಸಾವಿರ ರೂ. ಸಬ್ಸಿಡಿ ದೊರೆಯಲಿದೆ. ಅದೇ ರೀತಿ 30 ಮಹಿಳಾ ಸ್ವ-ಸಹಾಯ ಸಂಘಗಳಿಗೆ ಒಟ್ಟಾರೆ 4.80 ಲಕ್ಷ ರೂ. ಸಾಲಸೌಲಭ್ಯ ನೀಡಲಾಗಿದೆ. ಇದರಲ್ಲೂ ಪ್ರತಿ ಸಂಘಕ್ಕೆ 5 ಸಾವಿರ ರೂ. ಸಬ್ಸಿಡಿ ಸಿಗ ಲಿದೆ. ಅರಿವು ಶೈಕ್ಷಣಿಕ ಸಾಲ ಯೋಜನೆ ಯಡಿ ಇಬ್ಬರು ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‍ಗಳಿಗೆ ಸಾಲ ಸೌಲಭ್ಯ ಒದಗಿ ಸಲಾಗಿದೆ ಎಂದು ಕೆ.ರವೀಂದ್ರಶೆಟ್ಟಿ ವಿವರಿ ಸಿದರು. ನಿಗಮದ ನಿರ್ದೇಶಕ ಕೆ.ಹೆಚ್. ಲಕ್ಷ್ಮಣ ಕೆಂಗಟ್ಟೆ, ಮೈಸೂರು ಜಿಲ್ಲಾ ವ್ಯವ ಸ್ಥಾಪಕಿ ಹೆಚ್.ಎ.ಶೋಭಾ, ಚಾಮರಾಜ ನಗರ ಜಿಲ್ಲಾ ವ್ಯವಸ್ಥಾಪಕಿ ಎಂ.ಶ್ವೇತಾ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »