ವಿಶ್ವ ಆರೋಗ್ಯ ದಿನದ ಪ್ರಯುಕ್ತ ಅರಿವಿನ ಜಾಥಾ
ಮೈಸೂರು

ವಿಶ್ವ ಆರೋಗ್ಯ ದಿನದ ಪ್ರಯುಕ್ತ ಅರಿವಿನ ಜಾಥಾ

April 8, 2021

ಮೈಸೂರು,ಏ.7(ಪಿಎಂ)-ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಸುಯೋಗ್ ಆಸ್ಪತ್ರೆ ವತಿಯಿಂದ `ಸುಂದರ, ಆರೋಗ್ಯಕರ ಪ್ರಪಂಚ ನಿರ್ಮಿಸೋಣ’ ಘೋಷ ವಾಕ್ಯದಡಿ ಬುಧವಾರ ಜಾಥಾ ನಡೆಸಲಾಯಿತು.

ಮೈಸೂರಿನ ನಿವೇದಿತಾನಗರ ಉದ್ಯಾನ ವನದ (ಎಸ್.ಆರ್.ಸುಬ್ಬರಾವ್ ಉದ್ಯಾನ ವನ) ಎದುರು ಮಹಾನಗರ ಪಾಲಿಕೆ ಸದಸ್ಯೆ ನಿರ್ಮಲಾ ಹರೀಶ್ ಅವರ ಪತಿ ಹರೀಶ್ ಜಾಥಾಗೆ ಚಾಲನೆ ನೀಡಿದರು.

ಇದೇ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ, ಏ.7 ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆಯಾದ ದಿನ. ಹೀಗಾಗಿ ಈ ದಿನವನ್ನು ಪ್ರತಿವರ್ಷ ಆರೋಗ್ಯ ಕಾಯ್ದುಕೊಳ್ಳಲು ಪೂರಕವಾದ ಘೋಷ ವಾಕ್ಯದಡಿ ವಿಶ್ವ ಆರೋಗ್ಯ ದಿನವಾಗಿ ಆಚ ರಿಸಲಾಗುತ್ತಿದೆ. ಅಂತೆಯೇ ಈ ವರ್ಷ `ಸುಂದರ, ಆರೋಗ್ಯಕರ ಪ್ರಪಂಚ ನಿರ್ಮಿ ಸೋಣ’ ಘೋಷ ವಾಕ್ಯದಡಿ ವಿಶ್ವ ಆರೋಗ್ಯ ದಿನ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಈ ವಾಕ್ಯದ ಹಿನ್ನೆಲೆ ಹಾಗೂ ವ್ಯಾಪ್ತಿಯನ್ನು ಮೊದಲು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡು ವವರು ಅರ್ಥೈಸಿಕೊಂಡು ಬಳಿಕ ಅದನ್ನು ಸಾರ್ವಜನಿಕರಿಗೆ ತಲುಪಿಸಬೇಕು. ಇಲ್ಲಿ ಸುಂದರ ಎಂದರೆ ವ್ಯಕ್ತಿ ಹಾಗೂ ಪರಿಸರದ ಆರೋಗ್ಯವಾಗಿದೆ. ಅಂದರೆ ಮನುಷ್ಯ ಮಾನ ಸಿಕ ಹಾಗೂ ದೈಹಿಕ ಆರೋಗ್ಯ ಕಾಯ್ದು ಕೊಳ್ಳುವ ಜೊತೆಗೆ ತನ್ನ ಸುತ್ತಮುತ್ತಲಿನ ಪರಿಸರದ ಆರೋಗ್ಯವನ್ನು ಕಾಪಾಡಬೇಕು ಎಂಬುದಾಗಿದೆ ಎಂದರು. ಜಾಥಾವು ನ್ಯೂ ಕಾಂತರಾಜ ಅರಸ್ ರಸ್ತೆ, ಶ್ರೀರಾಮಕೃಷ್ಣ ಪರಮಹಂಸ ವೃತ್ತ ಮಾರ್ಗವಾಗಿ ರಾಮಕೃಷ್ಣ ನಗರದಲ್ಲಿರುವ ಆಸ್ಪತ್ರೆ ಆವರಣ ತಲುಪಿತು. ಜಾಥಾದಲ್ಲಿ ಆಸ್ಪತ್ರೆಯ ಸಿಬ್ಬಂದಿ ಪಾಲ್ಗೊಂಡಿ ದ್ದರು. ವಕೀಲ ತಮ್ಮೇಗೌಡ, ಡಾ.ಯೋಗಣ್ಣರ ಪುತ್ರಿ ಡಾ.ಸೀಮಾ ಇತರರು ಹಾಜರಿದ್ದರು.

Translate »