ಸದ್ಯದಲ್ಲೇ ‘ಶಾರ್ದೂಲ’ ಟ್ರೈಲರ್
ಸಿನಿಮಾ

ಸದ್ಯದಲ್ಲೇ ‘ಶಾರ್ದೂಲ’ ಟ್ರೈಲರ್

June 12, 2020

ಭೈರವ ಸಿನಿಮಾಸ್ ಲಾಂಛನದಲ್ಲಿ ಕಲ್ಯಾಣ್ ಹಾಗೂ ರೋಹಿತ್ ನಿರ್ಮಿಸಿರುವ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿದ `ಶಾರ್ದೂಲ’ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿಸಿಕೊಂಡು ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರವನ್ನು ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಅರ್ಹತಾ ಪತ್ರ ನೀಡಿ ರಿಲೀಸ್‍ಗೆ ಅನುಮತಿಸಿದೆ. ಕೊರೊನಾ ಬಂದ್ ಕಾರಣದಿಂದ ಚಿತ್ರದ ಬಿಡುಗಡೆ ಸ್ವಲ್ಪ ವಿಳಂಬವಾಗಿದ್ದು, ಥಿಯೇಟರ್‍ಗೆ ಅನುಮತಿ ದೊರಕಿದ ಕೂಡಲೇ ಚಿತ್ರ ವನ್ನು ತೆರೆಗೆ ತರುವುದಾಗಿ ನಿರ್ಮಾಪಕರು ತಿಳಿಸಿz್ದÁರೆ. ಈ ಚಿತ್ರದ ಟ್ರೇಲರ್ ಕೂಡ ವಿಭಿನ್ನವಾಗಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ.

ನಮ್ ಏರಿಯಾ¯್ಲÉೂಂದು ದಿನ, ತುಘಲಕ್ ಹಾಗೂ ಹುಲಿರಾಯದಂಥ ವಿಭಿನ್ನ ಶೈಲಿಯ ಚಿತ್ರಗಳನ್ನು ನಿರ್ದೇಶಿಸಿರುವ ಅರವಿಂದ್ ಕೌಶಿಕ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ. ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ವೈ.ಜಿ.ಆರ್.ಮನು ಅವರ ಛಾಯಾಗ್ರಹಣ, ಸತೀಶ್ ಬಾಬು ಅವರ ಸಂಗೀತ ನಿರ್ದೇಶನ, ಶಿವರಾಜ್ ಮೇಹು ಅವರ ಸಂಕಲನ ಹಾಗು ಮಾಸ್‍ಮಾದ, ಅಲ್ಟಿಮೇಟ್ ಶಿವ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಪಿ.ಯು.ಸಿ. ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟ ಚೇತನ್‍ಚಂದ್ರ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ, ನಟ ರವಿತೇಜ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಕೃತಿಕಾ ರವೀಂದ್ರ, ಐಶ್ವರ್ಯ ಪ್ರಸಾದ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಕಲ್ಯಾಣ್, ಹೃಷಿಕೇಶ್, ಮಹೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿz್ದÁರೆ.

Translate »