ಕುತೂಹಲ ಕೆರಳಿಸಿರುವ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ‘ಸಪ್ತ ಸಾಗರದಾಚೆ ಎಲ್ಲೋ’
ಸಿನಿಮಾ

ಕುತೂಹಲ ಕೆರಳಿಸಿರುವ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ‘ಸಪ್ತ ಸಾಗರದಾಚೆ ಎಲ್ಲೋ’

June 12, 2020

ಕಳೆದವಾರ ಕಿರಿಕ್‍ಪಾರ್ಟಿ, ಅವನೇ ಶ್ರೀಮನ್ನಾರಾಯಣದಂಥ ಹಿಟ್ ಚಿತ್ರಗಳ ನಟ ರಕ್ಷಿತ್‍ಶೆಟ್ಟಿ ಅವರ ಜನ್ಮದಿನವಿತ್ತು. ಇದೇ ಸಂದರ್ಭದಲ್ಲಿ ಅವರು ಅಭಿನಯಿ ಸುತ್ತಿರುವ ಹೊಸ ಚಿತ್ರದ ಕ್ಯಾರೆಕ್ಟರ್ ರಿವೀಲ್ ಮಾಡಲಾಗಿದೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಲ್ಲಿ ತಂದೆಗಾಗಿ ಹಂಬಲಿಸುವ ಮಗನಾಗಿ ವಿಶಿಷ್ಟ ಪಾತ್ರದ ಮೂಲಕ ಗುರುತಿಸಿಕೊಂಡಿದ್ದ ರಕ್ಷಿತ್‍ಶೆಟ್ಟಿ, ಈಗ ಮತೊಂದು ವಿಶೇಷ ಗೆಟಪ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಕ್ಷಿತ್ ಶೆಟ್ಟಿ, ನಿರ್ದೇಶಕ ಹೇಮಂತ್‍ರಾವ್ ಮತ್ತು ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ಈ ಮೂವರ ಜೋಡಿ ಮತ್ತೊಮ್ಮೆ ಜತೆಗೂಡಿ ಮಾಡುತ್ತಿರುವ ಚಿತ್ರದ ಹೆಸರು ‘ಸಪ್ತ ಸಾಗರದಾಚೆ ಎ¯್ಲÉೂೀ’. ಈ ಚಿತ್ರದ ಶೀರ್ಷಿಕೆಯೇ ಪ್ರೇಕ್ಷಕರಲ್ಲಿ ಹೊಸ ಕುತೂಹಲ ಕೆರಳಿಸಿತ್ತು. ಜೊತೆಗೆ ಈಗಾಗಲೇ ಎರಡು ವಿಭಿನ್ನ ಶೈಲಿಯ ಸಸ್ಪೆನ್ಸ್, ಥ್ರಿಲ್ಲರ್, ಎಮೋಷನಲ್ ಚಿತ್ರಗಳನ್ನು ನೀಡಿರುವ ಹೇಮಂತ್‍ರಾವ್ ಅವರ ನಿರ್ದೇಶನ ಈ ಚಿತ್ರಕ್ಕಿರುವುದು ಕೂಡ ಸಾಕಷ್ಟು ನಿರೀಕ್ಷೆ ಹುಟ್ಟಿಸಲು ಕಾರಣವಾಗಿದೆ. ಇತ್ತೀಚೆಗೆ ‘ಸಪ್ತ ಸಾಗರದಾಚೆ ಎ¯್ಲÉೂೀ’ ಚಿತ್ರದಲ್ಲಿನ ಅವರ ಪಾತ್ರದ ಹೆಸರು ಮತ್ತು ಪಾತ್ರದ ವಿಶೇಷತೆಗಳನ್ನು ಬಹಿರಂಗಪಡಿಸಲಾಗಿದೆ. ಈ ಚಿತ್ರದಲ್ಲಿ ರಕ್ಷಿತ್‍ಶೆಟ್ಟಿ ಅವರು ‘ಮನು ಅಲಿಯಾಸ್ ರಾಜೇಂದ್ರ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿz್ದÁರೆ. ವಿಶೇಷವೆಂದರೆ ಈಗ ಗಡ್ಡಧಾರಿಯಾಗಿರುವ ರಕ್ಷಿತ್‍ಶೆಟ್ಟಿ ಅವರ ಹಳೆಯ ಫೋಟೊ ಇದರಲ್ಲಿದೆ. ರಕ್ಷಿತ್‍ಶೆಟ್ಟಿ ಗಡ್ಡ ಇಲ್ಲದೆ ತಮ್ಮ ಹಳೆಯ ಲುಕ್‍ನಲ್ಲಿಯೂ ಕಾಣಿಸಿಕೊಳ್ಳುವ ಸುಳಿವು ಈ ಚಿತ್ರದಲ್ಲಿದೆ. ರಕ್ಷಿತ್‍ಶೆಟ್ಟಿ ಅವರ ಹತ್ತು ವರ್ಷಗಳ ಹಿಂದಿನ ಲುಕ್ ಮತ್ತು ಪಾತ್ರದ ಹೆಸರು ಬಹಿರಂಗವಾಗಿರುವುದು ಪೆÇಲೀಸ್ ಸ್ಟೇಷನ್ನಿನ ಕೈದಿಗಳ ಲೆಡ್ಜರ್ ಪುಸ್ತಕದಲ್ಲಿ. ಅಂದರೆ ರಕ್ಷಿತ್‍ಶೆಟ್ಟಿ ಈ ಚಿತ್ರದಲ್ಲಿ ಒಬ್ಬ ಖೈದಿಯಾಗಿ ನಟಿಸುತ್ತಿದ್ದು, ಹೇಮಂತ್‍ರಾವ್ ಅವರ ಈ ಚಿತ್ರವೂ ಸಹ ಸಸ್ಪೆನ್ಸ್, ಥ್ರಿಲ್ಲರ್ ಕಥೆ ಹೊಂದಿದೆ ಎನ್ನಬಹುದಾಗಿದೆ. ಈ ಕೇಸ್ ದಾಖಲಾಗಿರು ವುದು 2010ರಲ್ಲಿ. ಅದೇ ವರ್ಷ ರಕ್ಷಿತ್‍ಶೆಟ್ಟಿ ಅವರ ಮೊದಲ ಚಿತ್ರ ‘ನಮ್ ಏರಿಯಾದಲ್ ಒಂದಿನ’ ಬಿಡುಗಡೆ ಯಾಗಿತ್ತು. ಆ ಫೋಟೊ ಕೂಡ ಅದೇ ವರ್ಷದಲ್ಲಿ ತೆಗೆದಿರುವಂತೆ ಕಾಣಿಸುತ್ತದೆ.

‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿ ಕಾಣೆಯಾದವರ ಬಗ್ಗೆ ವಿವರ ಹೇಳುವಂತೆ ಇಲ್ಲಿ ಕೈದಿಯ ಕುರಿತ ವಿವರಗಳಿದೆ. ಇಲ್ಲಿ ನಾಯಕನಿಗೆ ಅಣ್ಣ ‘ಪ್ರಸನ್ನ’, ತಾಯಿ ‘ಸರೋಜಮ್ಮ’ ಇz್ದÁರೆ. ಅಂದಹಾಗೆ ನಾಯಕ ವೃತ್ತಿಯಿಂದ ಚಾಲಕ ಎನ್ನುವುದು ಕೈದಿಗಳ ಶೋಧನೆ ರಿಜಿಸ್ಟರ್‍ನಲ್ಲಿ ನಮೂದಾಗಿದೆ. ಸಾಕಷ್ಟು ಆಸಕ್ತಿಕರವಾದ ಕಥೆಯೊಂದನ್ನು ಹೇಮಂತ್‍ರಾವ್ ಅವರು ಈ ಚಿತ್ರದ ಮೂಲಕ ಹೇಳಹೊರಟಿz್ದÁರೆ ಎನ್ನುವುದನ್ನು ಅವರು ಹಂಚಿಕೊಂಡಿರುವ ಈ ಪೋಸ್ಟರ್ ತಿಳಿಸುತ್ತದೆ. ಚಿತ್ರ ಆರಂಭಿಸಲು ಕಾಯುತ್ತಿದ್ದೇನೆ ಎಂದಿರುವ ಹೇಮಂತ್, ಸದ್ಯದಲ್ಲೇ ನಿಮ್ಮಲ್ಲರನ್ನೂ ಲಾಕಪ್ ಮಾಡಲು ಸಿದ್ಧನಾಗಿz್ದÉೀನೆ ಎಂದಿz್ದÁರೆ. ಈ ಹಿಂದೆ ಬಿಡುಗಡೆಯಾಗಿದ್ದ ‘ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ರಕ್ಷಿತ್‍ಶೆಟ್ಟಿ ಒಬ್ಬ ಪೆÇಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅವರೊಬ್ಬ ಖೈದಿಯಾಗಿ ಕಾಣಿಸಿಕೊಳ್ಳಲಿz್ದÁರೆ. ಇದು ಅವರ ಪಾತ್ರದ ಒಂದು ಆಯಾಮವಷ್ಟೇ ಎಂದು ಹೇಳ ಲಾಗಿದ್ದು, ಚಿತ್ರದಲ್ಲಿ ರಕ್ಷಿತ್‍ಶೆಟ್ಟಿ ಅವರು ಎರಡು ಗೆಟಪ್‍ಗಳಲ್ಲಿ ಕಾಣಿಸಿಕೊಳ್ಳಲಿz್ದÁರೆ ಎನ್ನಲಾಗುತ್ತಿದೆ.

Translate »