ಫೆ.21ಕ್ಕೆ ದೊಡ್ಡಕೆರೆ ಮೈದಾನದಲ್ಲಿ `ಶಿವಾಜಿ ಕಪ್ ಕಬಡ್ಡಿ ಪಂದ್ಯಾವಳಿ’
ಮೈಸೂರು

ಫೆ.21ಕ್ಕೆ ದೊಡ್ಡಕೆರೆ ಮೈದಾನದಲ್ಲಿ `ಶಿವಾಜಿ ಕಪ್ ಕಬಡ್ಡಿ ಪಂದ್ಯಾವಳಿ’

February 19, 2021

ಮೈಸೂರು, ಫೆ.18(ಎಂಟಿವೈ)- ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ಮೈಸೂರಿನ ಪರಿಸರ ಸ್ನೇಹಿ ಬಳಗವು ಫೆ.21ರ ಬೆಳಿಗ್ಗೆ 9ರಿಂದ ದೊಡ್ಡಕೆರೆ ಮೈದಾನದಲ್ಲಿ ಮೈಸೂರು ವಿಭಾಗ ಮಟ್ಟದ ಹೊನಲು ಬೆಳಕಿನ ಶಿವಾಜಿ ಕಪ್ ಕಬಡ್ಡಿ ಪಂದ್ಯಾವಳಿ ಆಯೋ ಜಿಸಿದೆ ಎಂದು ಪರಿಸರ ಬಳಗ ಅಧ್ಯಕ್ಷ ಡಿ.ಲೋಹಿತ್ ಮೈಸೂರಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ ಸುತ್ತಲ ಗ್ರಾಮಗಳಿಂದ 50ಕ್ಕೂ ಹೆಚ್ಚು ತಂಡ ಭಾಗವಹಿಸುತ್ತಿವೆ. ವಿಜೇತರಿಗೆ ಪ್ರಥಮ ಬಹುಮಾನ 30 ಸಾವಿರ ರೂ., ದ್ವಿತೀಯ 20 ಸಾವಿರ ರೂ., ತೃತೀಯ ಮತ್ತು ಚತುರ್ಥ ಬಹುಮಾನ ತಲಾ 7500 ರೂ., ಉತ್ತಮ ದಾಳಿಕೋರ, ಆಲ್‍ರೌಂಡರ್, ಪಂದ್ರಶೇಷ್ಠ ಪ್ರಶಸ್ತಿಗಳಿಗೂ ತಲಾ 1 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತದೆ ಎಂದರು.

ಅಂದು ಬೆಳಗ್ಗೆ 9ಕ್ಕೆ ಪಂದ್ಯಾವಳಿ ಉದ್ಘಾಟನೆ. ವಂಗೀಪುರಂ ನಂಬಿಮಠದ ಇಳೈ ಆಳ್ವಾರ್ ಸ್ವಾಮೀಜಿ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಸಿ.ಎಸ್. ನಿರಂಜನಕುಮಾರ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್‍ಕುಮಾರ್‍ಗೌಡ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಮತ್ತಿತರರು ಭಾಗ ವಹಿಸಲಿದ್ದಾರೆ. ಸುಚೇಂದ್ರ, ಹರೀಶ್ ನಾಯ್ಡು, ಮಂಜುನಾಥ್, ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »