ಕಸ್ತೂರಿ ನಿವಾಸ ಸಿನಿಮಾಗೆ 50 ವರ್ಷದ ಸಂಭ್ರಮ; ನಾದಬ್ರಹ್ಮ ಸಂಗೀತ ಸಭಾದಲ್ಲಿ ನಾಳೆ ರಸಮಂಜರಿ
ಮೈಸೂರು

ಕಸ್ತೂರಿ ನಿವಾಸ ಸಿನಿಮಾಗೆ 50 ವರ್ಷದ ಸಂಭ್ರಮ; ನಾದಬ್ರಹ್ಮ ಸಂಗೀತ ಸಭಾದಲ್ಲಿ ನಾಳೆ ರಸಮಂಜರಿ

February 19, 2021

ಮೈಸೂರು,ಫೆ.18(ಎಂಟಿವೈ)-ವರನಟ ಡಾ.ರಾಜ್‍ಕುಮಾರ್ ಅಭಿನಯದ ‘ಕಸ್ತೂರಿ ನಿವಾಸ’ ಚಲನಚಿತ್ರದ 50ನೇ ವರ್ಷದ ಸಂಭ್ರಮಾ ಚರಣೆ ಪ್ರಯುಕ್ತ ಫೆ.20ರ ಸಂಜೆ 4ಕ್ಕೆ ಜೆಎಲ್‍ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ಡಾ.ರಾಜ್, ಡಾ.ಪಿ.ಬಿ.ಶ್ರೀನಿವಾಸ್ ಹಾಡಿರುವ ಹಳೆಯ ಚಲನ ಚಿತ್ರಗಳ ಸುಮಧುರ ಗೀತೆಗಳ ಸಂಗಮ ಹಾಗೂ ರಸಮಂಜರಿ ಆಯೋಜಿಸಲಾಗಿದೆ ಎಂದು ಕಾರ್ಯ ಕ್ರಮ ವ್ಯವಸ್ಥಾಪಕರಾದ ಎಂ.ವಿ.ಗೋವಿಂದರಾಜು, ಶ್ರೀಕಂಠರಾವ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಸಪ್ತಗಿರಿ ಮೆಲೋಡಿಸ್ ಹಾಗೂ ಶೃಂಗಾರ್ ಮೆಲೋಡಿಸ್ ಸಹಯೋಗದಲ್ಲಿ ಸಂಗೀತ ಕಾರ್ಯಕ್ರಮ ನಡೆಯ ಲಿದೆ. ಸಂಗೀತ ಸಂಜೆ ಕಾರ್ಯಕ್ರಮವನ್ನು ಶಾಸಕ ಜಿ.ಟಿ.ದೇವೇಗೌಡ ಉದ್ಘಾಟಿಸ ಲಿದ್ದಾರೆ. ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ.ಹರೀಶ್‍ಗೌಡ ಪಾಲ್ಗೊಳ್ಳುವ ಕಾರ್ಯಕ್ರಮದ ಸಾನಿಧ್ಯವನ್ನು ವಂಗೀಪುರಂ ನಂಬಿಮಠದ ಇಳೈ ಆಳ್ವಾರ್ ಸ್ವಾಮೀಜಿ ವಹಿಸಲಿದ್ದಾರೆ. ನಂತರ ನಡೆಯುವ `ಗೀತ ಗಾಯನ’ದಲ್ಲಿ ವೈ.ಡಿ.ರಾಜಣ್ಣ, ಕವಿತಾ ಕಾಮತ್, ಪ್ರಮೋದಿನಿ, ತೇಜಸ್ವಿನಿ, ಮಹದೇವು, ಅರುಣಾಚಲಂ, ನಾಗೇಂದ್ರ, ಜಯಲಕ್ಷ್ಮೀನಾಡು ಮತ್ತಿತರರು ಡಾ.ರಾಜ್ ಮತ್ತು ಡಾ.ಪಿ.ಬಿ.ಎಸ್ ಹಾಡಿದ ಪ್ರಸಿದ್ಧ ಗೀತೆಗಳನ್ನು ಹಾಡಲಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದರು. ಅಶ್ವಿನ್, ನಾಗೇಂದ್ರ, ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ ಸುದ್ದಿಗೋಷ್ಠಿಯಲ್ಲಿದ್ದರು.

Translate »