ಮೈಸೂರು, ಆ. 12(ಆರ್‍ಕೆ)- ಕೊರೊನಾ ಆತಂಕ ಪರಿಸ್ಥಿತಿಯಿಂದಾಗಿ ಮೈಸೂರು ಭಾಗದ ಸಾರಿಗೆ ಬಸ್ ಸಂಚಾರ ಸೇವೆಯಲ್ಲಿ ಕುಂಠಿತವಾಗಿತ್ತು. ಆದರೆ ಈಗ ಸ್ವಲ್ಪ ಚೇತರಿಕೆ ಕಂಡುಬಂದಿದೆ. ಕೊರೊನಾ ಹರಡುತ್ತದೆ ಎಂಬ ಭೀತಿಯಿಂದ ಕೆಎಸ್‍ಆರ್‍ಟಿಸಿ ಬಸ್ಸುಗಳಲ್ಲಿ ಸಂಚರಿಸಲು ಹಿಂಜರಿಯು ತ್ತಿದ್ದ ಪ್ರಯಾಣಿಕರಿಗೆ ದಿನ ಕಳೆದಂತೆ ಸ್ವಲ್ಪ ಧೈರ್ಯ ಬಂದಂತಾಗಿರುವುದ ರಿಂದ ಮೈಸೂರು ನಗರ ಮತ್ತು ಗ್ರಾಮಾಂತರ ಸಾರಿಗೆ ವಿಭಾಗಗಳಲ್ಲಿ ಚೇತರಿಕೆ ಕಂಡುಬಂದಿದೆ. ಮೈಸೂರು ನಗರ ಸಿಟಿ ಬಸ್ ಸ್ಟ್ಯಾಂಡ್‍ನಿಂದ ಪ್ರಸ್ತುತ 150ರಿಂದ 200 ಟ್ರಿಪ್‍ಗಳಲ್ಲಿ ಬಸ್‍ಗಳು ಆಪರೇಟ್ ಆಗುತ್ತಿದ್ದು, ಲಾಕ್‍ಡೌನ್ ನಿರ್ಬಂಧ ವಿಧಿಸುವ ಮೊದಲು ಪ್ರತಿದಿನ 436 ಟ್ರಿಪ್ ಗಳಾಗುತ್ತಿದ್ದವು. ಹವಾನಿಯಂತ್ರಿತ ಬಸ್ಸುಗಳಿಗೆ ಜನರೇ ಬರುತ್ತಿಲ್ಲ. ಪ್ರಯಾ ಣಿಕರ ಕೊರತೆಯಿಂದಾಗಿ ಗ್ರಾಮಗಳಿಗೆ ಸಿಟಿ ಬಸ್‍ಗಳನ್ನು ಓಡಿಸುತ್ತಿಲ್ಲ.
ಅದೇ ರೀತಿ ಮೈಸೂರು ಗ್ರಾಮಾಂತರ ವಿಭಾಗದ ಕೆಎಸ್‍ಆರ್‍ಟಿಸಿ ಬಸ್ಸು ಗಳ ಸಂಚಾರದಲ್ಲೂ ಚೇತರಿಕೆಯಾಗುತ್ತಿದ್ದು, ಮುಂದಿನ ಒಂದು ತಿಂಗ ಳೊಳಗಾಗಿ ಮಾಮೂಲಿ ಸ್ಥಿತಿಗೆ ಬರುವ ನಿರೀಕ್ಷೆ ಇದೆ ಎಂದು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಮೈಸೂರು-ಬೆಂಗಳೂರು ನಡುವೆ 250 ಟ್ರಿಪ್‍ಗಳಿತ್ತು. ಈಗ ಕೇವಲ 70ರಿಂದ 80 ಟ್ರಿಪ್‍ಗಳಿವೆ. ಸುತ್ತಲಿನ ಚಾಮ ರಾಜನಗರ, ಕೊಡಗು, ಹಾಸನ ಜಿಲ್ಲೆಗಳಿಗೂ ಬಸ್ಸುಗಳ ಸಂಖ್ಯೆ ನಿಧಾನ ವಾಗಿ ಹೆಚ್ಚಾಗುತ್ತಿದೆ. ಸಂಪೂರ್ಣವಾಗಿ ಬಸ್ಸುಗಳನ್ನು ಸ್ಯಾನಿಟೈಸ್ ಮಾಡಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿರುವುದರಿಂದ ಜನ ರಲ್ಲಿ ಧೈರ್ಯ ಬಂದಿದ್ದು, ಬಸ್ಸುಗಳನ್ನು ಬಳಸಲು ಮುಂದೆ ಬರುತ್ತಿದ್ದಾರೆ. ಈ ಹಿಂದೆ ಮೈಸೂರು ಗ್ರಾಮಾಂತರ ವಿಭಾಗದಲ್ಲಿ ಪ್ರತಿದಿನ 75 ಲಕ್ಷದಂತೆ 1 ತಿಂಗಳಿಗೆ 22 ಕೋಟಿ ರೂ. ಪ್ರಯಾಣಿಕರ ಟಿಕೆಟ್‍ನಿಂದ ಆದಾಯ ಬರುತ್ತಿತ್ತು. ಈಗ ಕೇವಲ 4 ಕೋಟಿ ರೂ. ಸಂಗ್ರಹ ವಾಗುತ್ತಿದೆ. ಕೊರೊನಾ ಸಂಕಷ್ಟ ಪರಿಸ್ಥಿತಿಯಿಂದಾಗಿ ವಿಭಾಗಕ್ಕೆ ಕಳೆದ 4 ತಿಂಗಳಿಂದ ಸುಮಾರು 75 ಕೋಟಿ ರೂ. ಆದಾಯ ನಷ್ಟವಾದಂತಾಗಿದ್ದರೂ ಲಾಭ-ನಷ್ಟ ವಿಲ್ಲದೆ ಸೇವೆ ಒದಗಿಸಬೇಕಾಗಿರುವುದರಿಂದ ಬಸ್ ಗಳನ್ನು ಓಡಿಸಬೇಕಾಗಿದೆ ಎಂದು ವಿಭಾಗದ ಅಧಿಕಾರಿ ಗಳು ತಿಳಿಸಿದ್ದಾರೆ. ದೂರದ ಬೆಳಗಾಂ (ಸ್ಲೀಪರ್ ಕೋಚ್), ಗದಗ, ವಿಜಯಪುರ, ಗೋಕರ್ಣಗಳಿಗೂ ಪ್ರತಿದಿನ ಒಂದೊಂದು ಬಸ್ಸು ಓಡುತ್ತಿವೆಯಾದರೂ ನಿರೀಕ್ಷಿತ ಸಂಖ್ಯೆಯ ಪ್ರಯಾಣಿಕರು ಪ್ರಯಾಣಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಸುಧಾ ರಣೆಯಾಗಲಿದೆ ಎಂಬ ಆಶಾಭಾವನೆ ಯಿಂದ ನಾವು ಬಸ್ಸುಗಳನ್ನು ಆಪರೇಟ್ ಮಾಡುತ್ತಿ ದ್ದೇವೆ ಎಂದು ತಿಳಿಸಿದ್ದಾರೆ.