ಮೈಸೂರು ಲೋಕಾಯುಕ್ತ ಎಸ್ಪಿಯಾಗಿ ಪಿ.ವಿ. ಸ್ನೇಹಾ ಅಧಿಕಾರ ಸ್ವೀಕಾರ
ಮೈಸೂರು

ಮೈಸೂರು ಲೋಕಾಯುಕ್ತ ಎಸ್ಪಿಯಾಗಿ ಪಿ.ವಿ. ಸ್ನೇಹಾ ಅಧಿಕಾರ ಸ್ವೀಕಾರ

August 13, 2020

ಮೈಸೂರು,ಆ.12(ಆರ್‍ಕೆ)- ಮೈಸೂರು ಲೋಕಾಯುಕ್ತ ಎಸ್ಪಿಯಾಗಿ ಪಿ.ವಿ.ಸ್ನೇಹಾ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡರು. ಮಹ ದೇವ ಅವರು ವರ್ಗಾವಣೆ ಯಾದ ನಂತರ ಕಳೆದ 1 ವರ್ಷದಿಂದ ಖಾಲಿ ಉಳಿದಿದ್ದ ಮೈಸೂರು ಲೋಕಾಯುಕ್ತ ಎಸ್ಪಿ ಹುದ್ದೆಗೆ ಸ್ನೇಹಾ ಅವರನ್ನು ನಿಯೋಜಿಸ ಲಾಗಿದೆ. ಮೈಸೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಸೇಹಾ ಅವರು, ಈ ಹಿಂದೆ ಹಾಸನ ಜಿಲ್ಲೆಯ ಸಕಲೇಶಪುರ, ಚಾಮರಾಜ ನಗರ ಜಿಲ್ಲೆ ಕೊಳ್ಳೇಗಾಲ ಉಪವಿಭಾಗಗಳ ಡಿವೈಎಸ್ಪಿಯಾಗಿ ಹಾಗೂ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ (ಏPಂ) ಯಲ್ಲಿ ಸಹಾಯಕ ನಿರ್ದೇಶಕರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.

Translate »