`ಸಮಸ್ಯೆಗಳಿಗೆ ಪರಿಹಾರ ಮಾರ್ಗ ತೋರಿಸುವುದೇ ನಿಜವಾದ ವಿದ್ಯೆ’
ಮೈಸೂರು

`ಸಮಸ್ಯೆಗಳಿಗೆ ಪರಿಹಾರ ಮಾರ್ಗ ತೋರಿಸುವುದೇ ನಿಜವಾದ ವಿದ್ಯೆ’

August 31, 2020

ರಾಮಕೃಷ್ಣ ಮಠದ ಸ್ವಾಮಿ ಸುಖಾತ್ಮಾನಂದಜೀ ಮಹಾರಾಜ್ ಬೋಧನೆ
ಮೈಸೂರು, ಆ.30(ಎಸ್‍ಪಿಎನ್)-ವಿದ್ಯೆ ವಿನಯವನ್ನು ಕಲಿಸುತ್ತದೆ. ಜ್ಞಾನ ವಿವೇಕವನ್ನು ಬೆಳೆಸುತ್ತದೆ. ಮನುಷ್ಯನ ಸಮಸ್ಯೆಗಳಿಗೆ ಸರಿಯಾದ ಪರಿಹಾರ ಮಾರ್ಗ ವನ್ನು ತೋರಿಸುವುದೇ ನಿಜವಾದ ವಿದ್ಯೆ ಎಂದು ರಾಮಕೃಷ್ಣ ಮಠದ ಹಿರಿಯ ಯತಿಗಳಾದ ಸ್ವಾಮಿ ಸುಖಾತ್ಮಾನಂದಜೀ ಮಹಾರಾಜ್ ಅಭಿಪ್ರಾಯಪಟ್ಟರು.

ಮೈಸೂರು ರಾಮಕೃಷ್ಣನಗರದ ರಾಮಕೃಷ್ಣ ವಿದ್ಯಾಕೇಂದ್ರದಲ್ಲಿ ನೂತನ ಕೊಠಡಿ ಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲೂ ಜೀವನ ಮೌಲ್ಯಗಳ ಅಳವಡಿಕೆಗೆ ಸಹಕಾರಿಯಾಗುವುದೇ ನಿಜವಾದ ಶಿಕ್ಷಣ ಎಂದರು.

ಮೈಸೂರು ರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಾಜೀ ಮಹಾರಾಜ್ ಮಾತನಾಡಿ, ಶಿಕ್ಷಣವೆಂದರೆ ಶೀಲ ಮತ್ತು ಸಂಸ್ಕøತಿಯನ್ನು ಕಲಿಸುವುದಾಗಿದೆ. ಇದು ವಿದ್ಯಾರ್ಥಿಗಳಿಗೆ ಬೋಧಿಸುವ ಪಠ್ಯ ಪುಸ್ತಕಗಳಿಂದಾಚೆಯೂ ಇದೆ. ಇಂದಿನ ಮೌಲ್ಯ ಯುತ ಶಿಕ್ಷಣ ಪದ್ಧತಿಯನ್ನು ವಿದ್ಯಾರ್ಥಿಗಳು ಕಲಿತು ತಮ್ಮ ಮುಂದಿನ ಜೀವನ ರೂಪಿಸಿಕೊಳ್ಳಬೇಕು ಎಂದರು. ಈ ವೇಳೆ ಸಂಸ್ಥೆಯ ತಿತಿತಿ.ಡಿಞvಞmಥಿsuಡಿu.ಛಿom ಜಾಲತಾಣವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಸ್ವಾಮಿ ಯುಕ್ತೇಶಾನಂದಜೀ, ಸ್ವಾಮಿ ಪುಣ್ಯವ್ರತಾನಂದಜೀ ಮಹಾರಾಜ್, ರಾಮಕೃಷ್ಣಾಶ್ರಮ ವಿದ್ಯಾಸಂಸ್ಥೆಯ ಶ್ರೀ ರಾಮಕೃಷ್ಣ ಸೇವಾ ಸಂಘದ ಅಧ್ಯಕ್ಷ ಎಂ.ಪಾಪೇಗೌಡ, ಕಾರ್ಯದರ್ಶಿ ಎಂ.ದೊರೆರಾಜು, ಪ್ರೊ.ಕೆ.ಪಿ.ಮಹಾದೇವಪ್ಪ, ಮುಖ್ಯಶಿಕ್ಷಕ ಜಿ.ಎನ್.ವಿಶ್ವನಾಥ್, ಕನ್ನಡ ಶಿಕ್ಷಕ ಎಸ್. ನಂಜುಂಡಸ್ವಾಮಿ, ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

Translate »