ಮೈಸೂರಲ್ಲಿ ಶ್ರದ್ಧಾ-ಭಕ್ತಿಯ ‘ಪುತ್ತರಿ ನಮ್ಮೆ’
ಮೈಸೂರು

ಮೈಸೂರಲ್ಲಿ ಶ್ರದ್ಧಾ-ಭಕ್ತಿಯ ‘ಪುತ್ತರಿ ನಮ್ಮೆ’

November 21, 2021

ಮೈಸೂರು, ನ.20 (ಎಂಕೆ)- ಮೈಸೂರಿನಲ್ಲಿ ಧಾನ್ಯ ಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳುವ ಕೊಡವರ ಸುಗ್ಗಿ ಹಬ್ಬ ‘ಪುತ್ತರಿ ನಮ್ಮೆ’ ಶ್ರದ್ಧಾ-ಭಕ್ತಿಯಿಂದ ನೆರವೇರಿತು.

ನಗರದ ವಿಜಯನಗರ ಒಂದನೇ ಹಂತದಲ್ಲಿರುವ ಕೊಡವ ಸಮಾಜ ಸಮುದಾಯ ಭವನದಲ್ಲಿ ಮೊದಲ ಬಾರಿಗೆ ನಡೆದ ಕೊಡವ ಸಾಂಸ್ಕøತಿಕ ಸುಗ್ಗಿ ಹಬ್ಬ ನೋಡುಗರ ಕಣ್ಮನ ಸೆಳೆಯಿತು.

ಕೊಡವರ ಆರಾಧ್ಯ ದೈವ ಇಗ್ಗುತಪ್ಪ ಹಾಗೂ ತಾಯಿ ಕಾವೇರಮ್ಮನಿಗೆ ನಮಿಸಿ, ಬೆಳೆದು ನಿಂತ ಕದಿರು ತೆಗೆದು(ಹೊಸ ಭತ್ತದ ಪೈರು) ಗಾಳಿ ಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದರು.

ಇದಕ್ಕೂ ಮುನ್ನ ಕೊಡವ ಸಾಂಸ್ಕøತಿಕ ವಸ್ತ್ರವಿನ್ಯಾಸಗಳಾದ ಕಪ್ಪು ಕುಪ್ಯ, ಚೇಲೆ(ಸೊಂಟಕ್ಕೆ ಕಟ್ಟುವ ರೇಷ್ಮೆ ದಟ್ಟಿ) ಪೀಚೆಕತ್ತಿ, ಮಂಡೆ ತುಣಿ (ಪೇಟ) ಪುರುಷರು ಹಾಗೂ ಕೆಂಪು ಬಣ್ಣದ ಸೀರೆ ತೊಟ್ಟ ಮಹಿಳೆಯರು ಕೊಡವ ಜನಪ್ರಿಯ ನೃತ್ಯಗಳಾದ ‘ಕೋಲಾಟ’, ‘ಬೊಳ್ ಕಾಟ್’, ‘ಕತ್ತಿಯಾಟ್’, ‘ಬಾಳೋಪಾಟ್’, ‘ತಾಲಿಪಾಟ್’, ‘ನಾಡೆ ಕಾಕು’ ಹಾಗೂ ‘ಉಮ್ಮತಾಟ್’ ನೃತ್ಯಗಳನ್ನು ಅಮೋಘವಾಗಿ ಪ್ರದರ್ಶಿಸಿದರು.

ಪುಟಾಣಿಗಳು ಭಾಗಿ: ಕೊಡವ ನಾಡಿನ ಕಲೆ-ಸಂಸ್ಕøತಿಯ ಉಳಿವಿ ಗಾಗಿ ಈ ಬಾರಿ ಹೊಸಬರಿಗೆ ಹೆಚ್ಚಿನ ಆದ್ಯತೆ ನೀಡಲಾಯಿತು. ಅನುಭವಿ ಗಳಿಗೂ ಕಡಿಮೆ ಇಲ್ಲದಂತೆ ಪುಟಾಣಿಗಳು ಕೊಡವ ಸಾಂಸ್ಕøತಿಕ ಧಿರಿಸು ತೊಟ್ಟು ಕುಣಿದು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಪುತ್ತರಿ ಹಬ್ಬದ ವಿಶೇಷ ಖಾದ್ಯಗಳಾದ ಬೇಯಿಸಿದ ಪುತ್ತರಿ ಗೆಣಸು, ಹುರಿದ ಕುಸುಬಲಕ್ಕಿಯ ಪುಡಿಯನ್ನು ಬಾಳೆಹಣ್ಣಿನೊಂದಿಗೆ ಎಳ್ಳು ಬೆರೆಸಿ ಮಾಡುವ ತಂಬಿಟ್ಟು, ಗದ್ದೆಯಿಂದ ಕೊಯ್ಲುಮಾಡಿ ತಂದ ಭತ್ತದಿಂದ ಮಾಡಿದ ಹೊಸ ಅಕ್ಕಿ ಒಳಗೊಂಡ ಪಾಯಸವನ್ನು ಕುಟುಂಬಸ್ಥರೆಲ್ಲಾ ಒಟ್ಟಿಗೆ ಸೇರಿ ಸವಿದು ಸಂಭ್ರಮಿಸಿದರು.

ಕೊಡವ ಸಮಾಜದಲ್ಲಿ ಮೊದಲು: ಪ್ರತಿವರ್ಷ ಮೈಸೂರಿನ ಕುವೆಂಪು ನಗರದಲ್ಲಿರುವ ಕಾವೇರಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯುತ್ತಿದ್ದ ‘ಪುತ್ತರಿ ನಮ್ಮೆ’ ಈ ಬಾರಿ ಮಳೆಯಿಂದಾಗಿ ವಿಜಯನಗರ 1ನೇ ಹಂತ ದಲ್ಲಿರುವ ಕೊಡವ ಸಮಾಜ ಸಮುದಾಯ ಭವನದಲ್ಲಿ ನಡೆಯಿತು. ನೂರಾರು ಮಂದಿ ಕೊಡವರು ‘ಪುತ್ತರಿ ನಮ್ಮೆ’ ಸಂಭ್ರಮದಲ್ಲಿ ಭಾಗಿ ಯಾಗಿ ಇಗ್ಗುತಪ್ಪ ದೇವರ ಕೃಪೆಗೆ ಪಾತ್ರರಾದರು. ಮೈಸೂರು ಕೊಡವ ಸಮಾಜದ ಅಧ್ಯಕ್ಷ ಕೇಕಡ ಎಂ.ಬೆಳ್ಳಿಯಪ್ಪ, ಉಪಾಧ್ಯಕ್ಷ ಮೇಚಂಡ ಎಂ.ಪೊನ್ನಪ್ಪ, ಕಾರ್ಯದರ್ಶಿ ಮಲಚಿರ ಎಂ.ಪೊನ್ನಪ್ಪ, ಸಹ ಕಾರ್ಯ ದರ್ಶಿ ಪಾಡೇಯಂಡ ವಿಮಲ ಪೂಣಚ್ಚ, ಖಜಾಂಚಿ ಮುಕ್ಕಾಟಿರ ಬಿ.ಜೀವನ್, ನಿರ್ದೇಶಕ ಚೇನಂಡ ವಿ.ಉತ್ತಪ್ಪ ಹಾಗೂ ಕೊಡವ ಸಮುದಾಯ ಹಿರಿಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »