ಶ್ರೀ ಚಾಮರಾಜೇಶ್ವರಸ್ವಾಮಿ ದರ್ಶನ ಪಡೆದ ಸಚಿವ
ಚಾಮರಾಜನಗರ, ಮೈಸೂರು

ಶ್ರೀ ಚಾಮರಾಜೇಶ್ವರಸ್ವಾಮಿ ದರ್ಶನ ಪಡೆದ ಸಚಿವ

July 17, 2021

ಚಾಮರಾಜನಗರ, ಜು.16(ಎಸ್‍ಎಸ್)- ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶ್ರೀ ಚಾಮರಾಜೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ಚಾಮ ರಾಜೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಕೆಂಪನಂಜಾಂಬ ಮತ್ತು ಚಾಮುಂಡೇಶ್ವರಿದೇವಿಯ ದರ್ಶನ ಪಡೆ ದರು. ದೇವಸ್ಥಾನದ ಒಳಾವರಣದಲ್ಲಿ ಪ್ರದಕ್ಷಿಣೆ ಹಾಕುವ ಮೂಲಕ ದೇವಸ್ಥಾನ ಪರಿಶೀಲಿಸಿದರು. ಈ ವೇಳೆ ಸುದ್ದಿಗಾರರೊಂ ದಿಗೆ ಮಾತನಾಡಿದ ಸಚಿವರು, ಈ ಪುರಾ ತನ ದೇವಸ್ಥಾನದ ಅಭಿವೃದ್ಧಿಗೆ ಕೈಗೊಳ್ಳ ಬಹುದಾದ ಕ್ರಮಗಳ ಕುರಿತು ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಚರ್ಚಿಸ ಲಾಗುವುದು. ಇದಲ್ಲದೆ ಅಧಿಕಾರಿಗಳ ತಂಡ ರಚಿಸಿ ದೇವಸ್ಥಾನ ಪರಿಶೀಲಿಸುವು ದರೊಂದಿಗೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳು ವುದಾಗಿ ಭರವಸೆ ನೀಡಿದರು.

ತಮಿಳುನಾಡಿನಲ್ಲಿ ಮುಜರಾಯಿ ದೇವಾ ಲಯಗಳಿಗೆ ದಲಿತ ಅರ್ಚಕರನ್ನು ನೇಮಿಸಿ ರುವಂತೆ ಕರ್ನಾಟಕದಲ್ಲಿ ನೇಮಕ ಮಾಡುವ ಚಿಂತನೆ ಇದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆ ರೀತಿಯ ಯಾವುದೇ ಚಿಂತನೆಗಳು ಇಲ್ಲ. ಆಯಾಯ ದೇವಾಲಯದ ಪರಂಪರೆ, ಇತಿಹಾಸದಂತೆ ಅರ್ಚಕರು ನೇಮಕ ವಾಗಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ನಾಯಕತ್ವ ಗೊಂದಲವಿಲ್ಲ: ಆಡಳಿತಾ ತ್ಮಕ ವಿಚಾರವಾಗಿ ಮುಖ್ಯಮಂತ್ರಿಗಳು ದೆಹಲಿಗೆ ತೆರಳಿದ್ದಾರೆ. ಈ ದೆಹಲಿ ಯಾತ್ರೆಗೆ ವಿಶೇಷ ಅರ್ಥ ಬೇಡ. ನಮ್ಮಲ್ಲಿ ಯಾವುದೇ ನಾಯಕತ್ವ ಗೊಂದಲ ಇಲ್ಲ. ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಪಕ್ಷ ಸಂಘಟನೆಯನ್ನು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೋಡಿಕೊಳ್ಳುತ್ತಾರೆ ಎಂದರು. ಶ್ರೀ ಚಾಮರಾಜೇಶ್ವರ ನೂತನ ರಥ ನಿರ್ಮಾಣ ಆಗಿದ್ದು, ಮುಂದಿನ ರಥೋತ್ಸವದ ವೇಳೆಗೆ ನಾನಾ ಪೂಜಾ ಕಾರ್ಯಕ್ರಮಗಳು ನಡೆಯಬೇಕಾಕಿದೆ. ಇದಕ್ಕಾಗಿ ಮುಜರಾಯಿ ಇಲಾಖೆಯಿಂದ 10 ಲಕ್ಷ ರೂ.ಗಳನ್ನು ಬಿಡುಗಡೆ ಮಾಡು ವಂತೆ ಕನ್ನಡ ಚಳವಳಿಗಾರ ಚಾ.ರಂ. ಶ್ರೀನಿವಾಸಗೌಡ ಸಚಿವರಲ್ಲಿ ಇದೇ ವೇಳೆ ಮನವಿ ಮಾಡಿದರು. ಶಾಸಕ ಎನ್. ಮಹೇಶ್ ಸೇರಿದಂತೆ ಇತರರಿದ್ದರು.

Translate »