ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಆಯ್ತು… ನಮ್ಮ ಮುಂದಿನ ಗುರಿ ಮಥುರಾದಲ್ಲಿ ಶ್ರೀಕೃಷ್ಣ ಮಂದಿರ, ಕಾಶಿಯಲ್ಲಿ ವಿಶ್ವನಾಥ ಮಂದಿರ ವಿವಾದ ಇತ್ಯರ್ಥ
ಮೈಸೂರು

ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಆಯ್ತು… ನಮ್ಮ ಮುಂದಿನ ಗುರಿ ಮಥುರಾದಲ್ಲಿ ಶ್ರೀಕೃಷ್ಣ ಮಂದಿರ, ಕಾಶಿಯಲ್ಲಿ ವಿಶ್ವನಾಥ ಮಂದಿರ ವಿವಾದ ಇತ್ಯರ್ಥ

April 24, 2022

ಬಿಜೆಪಿ ಹಿರಿಯ ನಾಯಕರೂ ಆದ ರಾಜ್ಯಸಭಾ ಸದಸ್ಯ ಸುಬ್ರಹ್ಮಣ ಯನ್ ಸ್ವಾಮಿ ವಿಶ್ವಾಸ

ಮೈಸೂರು, ಏ.೨೩(ಎಂಕೆ)- ಶ್ರೀ ರಾಮನ ಜನ್ಮ ಭೂಮಿ ಅಯೋಧ್ಯೆಯಲ್ಲಿ ‘ಶ್ರೀ ರಾಮ ಮಂದಿರ’ ನಿರ್ಮಾಣವಾಗು ತ್ತಿರುವಂತೆಯೇ ಶ್ರೀ ಕೃಷ್ಣ ಜನ್ಮ ಭೂಮಿ ಮಥುರಾದಲ್ಲಿ ‘ಶ್ರೀಕೃಷ್ಣ ಮಂದಿರ’ ಹಾಗೂ ಕಾಶಿಯಲ್ಲಿ ‘ಕಾಶಿ ವಿಶ್ವನಾಥ ಮಂದಿರ’ದ ವಿವಾದ ಇತ್ಯರ್ಥ ನಮ್ಮ ಮುಂದಿನ ಗುರಿಯಾಗಿದೆ ಎಂದು ರಾಜ್ಯಸಭಾ ಸದಸ್ಯ ಡಾ. ಸುಬ್ರಹ್ಮಣ ಯನ್ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಹಿರಿಯ ನಾಯಕರು ಆದ ರಾಜ್ಯಸಭಾ ಸದಸ್ಯ ಸುಬ್ರಹ್ಮಣ ಯನ್ ಸ್ವಾಮಿಎಲ್ಲಾ ಭಾರತೀಯರ ಡಿಎನ್‌ಎ
ಮೈಸೂರು, ಏ.೨೩(ಎಂಕೆ)- ಶ್ರೀ ರಾಮನ ಜನ್ಮ ಭೂಮಿ ಅಯೋಧ್ಯೆಯಲ್ಲಿ ‘ಶ್ರೀ ರಾಮ ಮಂದಿರ’ ನಿರ್ಮಾಣವಾಗು ತ್ತಿರುವಂತೆಯೇ ಶ್ರೀ ಕೃಷ್ಣ ಜನ್ಮ ಭೂಮಿ ಮಥುರಾದಲ್ಲಿ ‘ಶ್ರೀಕೃಷ್ಣ ಮಂದಿರ’ ಹಾಗೂ ಕಾಶಿಯಲ್ಲಿ ‘ಕಾಶಿ ವಿಶ್ವನಾಥ ಮಂದಿರ’ ನಿರ್ಮಾಣ ಮಾಡುವುದು ನಮ್ಮ ಮುಂದಿನ ಗುರಿಯಾಗಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಸುಬ್ರಹ್ಮಣ ಯನ್ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಸದರ್ನ್ ಸ್ಟಾರ್ ಹೋಟೆಲ್ ನಲ್ಲಿ ಶನಿವಾರ ಮೈಸೂರು ಹಿಂದೂ ಫೋರಂ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮ ದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಶ್ರೀರಾಮಮಂದಿರ ನಿರ್ಮಾಣಕ್ಕೆ ಮುಂದಾ ದರೆ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಸಿದ್ದ ೩೭೦ನೇ ವಿಧಿ ರದ್ದಾ ದರೆ ದೇಶದಲ್ಲಿ ದೊಡ್ಡಮಟ್ಟದ ಕೋಮು ಗಲಭೆ ಉಂಟಾಗುತ್ತದೆ ಎಂದು ಕೆಲವರು ಹೆದರಿಸುತ್ತಿದ್ದರು. ಆದರೆ ಒಂದೇ ಒಂದು ಗುಂಡು ಹಾರದ ಹಾಗೆ, ಒಂದು ತೊಟ್ಟು ರಕ್ತ ಚೆಲ್ಲಲು ಬೀಡದೆ ಶಾಂತ ರೀತಿಯಲ್ಲಿ ರಾಮಮಂದಿರವನ್ನು ಕಟ್ಟುತ್ತಿದ್ದೇವೆ. ಹಾಗೆಯೇ ನಮ್ಮ ಮುಂದಿನ ಗುರಿ ಶ್ರೀ ಕೃಷ್ಣ ಜನ್ಮಭೂಮಿ ಹಾಗೂ ಕಾಶಿ. ಇವು ಗಳನ್ನು ಸಹ ಶಾಂತಿಯುತವಾಗಿ ನೆರ ವೇರಿಸುತ್ತೇವೆ ಎಂದು ಹೇಳಿದರು.

೩೭೦ನೇ ವಿಧಿ ರದ್ದಾದ ಬಳಿಕ ಜಮ್ಮು ಮತ್ತು ಕಾಶ್ಮೀರ, ದೇಶದಲ್ಲಿ ಒಂದಾಗಿವೆೆ. ಅಲ್ಲಿಯೂ ಶಾಂತಿ-ಸುವ್ಯವಸ್ಥೆ ನೆಲೆಸು ವಂತಾಗಿದ್ದು, ಕೆಲ ದಿನಗಳ ಹಿಂದೆಯಷ್ಟೇ ನಾನು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ, ಬಹಿರಂಗ ಸಮಾವೇಶ ನಡೆಸಿ ದ್ದೇನೆ. ಭಾರತೀಯ ಸೇನೆಯಿಂದ ನಿವೃತ್ತ ರಾದವರನ್ನು ಮತ್ತೆ ಸೇನೆಗೆ ಸೇರಿಸಿ ಕೊಂಡು ಅವರಿಗೆ ಸಂಬಳ ನೀಡಿ, ೫ ವರ್ಷಗಳ ಕಾಲ ಕಾಶ್ಮೀರಿ ಪಂಡಿತರಿಗೆ ಸೂಕ್ತ ಭದ್ರತೆ ಕಲ್ಪಿಸಿದರೆ, ಅವರು ಕೂಡ ತಮ್ಮ ಸ್ವ-ಸ್ಥಳಕ್ಕೆ ಮರಳುತ್ತಾರೆ ಎಂದು ಅಭಿಪ್ರಾಯಪಟ್ಟರು.

ಎಲ್ಲಾ ಭಾರತೀಯರ ಡಿಎನ್‌ಎ ಒಂದೇ: ದೇಶದಲ್ಲಿರುವ ಹಿಂದೂ ಮತ್ತು ಮುಸ್ಲಿಮರೂ ಸೇರಿದಂತೆ ಎಲ್ಲ ಭಾರತೀಯರ ಡಿಎನ್‌ಎ ಗಳು ಒಂದೇ ಆಗಿವೆ. ಹೈದರ ಬಾದಿನ ಮೈಕ್ರೋಬಯಾಲಜಿ ಪ್ರಯೋ ಗಾಲಯ ದಲ್ಲಿ ಇದು ಸಾಬೀತಾಗಿದೆ. ಹಿಂದೂಗಳು ಹೊರಗಿನಿಂದ ಬಂದವ ರಲ್ಲ. ಭೂಮಿ ಹುಟ್ಟಿದಾಗಿನಿಂದಲೂ ಅವರು ಭಾರತ ದಲ್ಲೇ ಇರುವವರು ಎಂದು ಹೇಳಿದರು.

ಆರ್ಯರು ಮತ್ತು ದ್ರಾವಿಡರು ಎಂಬುದು ಜನಾಂಗಳಲ್ಲ. ದಕ್ಷಿಣ ಭಾರತ ದಲ್ಲಿದ್ದಲ್ಲಿ ದ್ದವರನ್ನು ದ್ರಾವಿಡರು ಹಾಗೂ ಉತ್ತಮ ನಡವಳಿಕೆ ಇದ್ದವರನ್ನು ಆರ್ಯರು ಎನ್ನ ಲಾಯಿತು. ಇವೆರಡೂ ನಿರ್ದಿಷ್ಟ ವಾದ ಜನಾಂಗಳಲ್ಲ. ಕೆಲ ಧರ್ಮಗಳು ದೇಶಕ್ಕೆ ಬಂದಿದ್ದರೂ ಎಂದೂ ಹಿಂದೂಗಳು ಅವರಿಗೆ ಕಿರುಕುಳ ನೀಡಿಲ್ಲ. ಇರಾನ್ ದೇಶದಿಂದ ಇಸ್ಲಾಂ ಧರ್ಮ ಬಂದರೆ ಯೂರೋಪ್ ದೇಶಗಳಿಂದ ಕ್ರೆöÊಸ್ತರು ಬಂದಿದ್ದಾರೆ. ಪರ್ಷಿಯಾ ದೇಶದಿಂದ ಬಂದ ಪಾರ್ಸಿ(ಜ್ವರಸ್ತಿçÃಯನ್)ಗಳನ್ನು ಸಮಾನತೆಯಿಂದ ಕಂಡಿದ್ದೇವೆ. ಭದ್ರತೆ ಯನ್ನು ನೀಡಿದ್ದೇವೆ ಎಂದು ತಿಳಿಸಿದರು.

ಇಂಗ್ಲಿಷ್‌ಗೆ ಪರ್ಯಾಯವಾಗಿ ಸಂಸ್ಕöÈತ: ಸಂಸ್ಕೃತ ಭಾಷೆಯನ್ನು ಪ್ರಪಂಚವೇ ಒಪ್ಪಿ ಕೊಂಡಿದೆ. ಇಂಗ್ಲಿಷ್‌ಗೆ ಪರ್ಯಾಯವಾಗಿ ಸಂಸ್ಕöÈತವನ್ನು ಮಾತನಾಡುವ ಕಾಲವು ಸನ್ನಿಹಿತವಾಗಿದೆ. ಬ್ರಿಟಿಷರು ಭಾರತೀಯರ ಬ್ರೇನ್‌ವಾಷ್ ಮಾಡಿದ್ದರಿಂದ ಇಂಗ್ಲಿಷ್ ಪ್ರವರ್ಧಮಾನಕ್ಕೆ ಬಂತು. ಈಗ ವೈಜ್ಞಾನಿಕ ಸಂಶೋಧನೆಗಳು ಸಂಸ್ಕöÈತದ ಮಹತ್ವವನ್ನು ಎತ್ತಿ ಹಿಡಿದಿವೆ. ನಾಸಾ ಸಂಸ್ಥೆ ನಡೆಸಿದ ಅಧ್ಯ ಯನ ಒಂದರಲ್ಲಿ ಕೃತಕ ಬುದ್ದಿಮತ್ತೆ ಹಾಗೂ ಕಂಪ್ಯೂಟರ್‌ಗೆ ಸುಲಭವಾಗಿ ಅರ್ಥವಾಗುವ ಉತ್ತಮ ಭಾಷೆ ಸಂಸ್ಕöÈತ ಎಂದು ಹೇಳಲಾಗಿದೆ. ಭವಿಷ್ಯದಲ್ಲಿ ಇದೇ ಭಾಷೆಯ ಮೂಲಕವೇ ಕೃತಕ ಬುದ್ದಿಮತ್ತೆ ಕಾರ್ಯನಿರ್ವಹಿಸಲಿದೆ ಎಂದು ಡಾ. ಸುಬ್ರಹ್ಮಣ ಯನ್ ಸ್ವಾಮಿ ಹೇಳಿದರು.

ದೇಶದಲ್ಲಿ ಶೇ.೮೦ರಷ್ಟು ಹಿಂದೂಗಳು: ವಿಜಯನಗರದ ಅರಸರು, ರಾಣ ಚೆನ್ನಮ್ಮ ಸೇರಿದಂತೆ ಹಿಂದಿನ ಹಿಂದೂ ರಾಜರು ಎಂದಿಗೂ ಹೊರಗಿನವರ ಆಕ್ರಮಣ ಸಹಿಸಿಕೊಂಡವರಲ್ಲ. ಹಾಗಾಗಿಯೇ ಭಾರತ ದಲ್ಲಿ ಇಂದಿಗೂ ಶೇ.೮೦ರಷ್ಟು ಹಿಂದೂ ಗಳಿದ್ದಾರೆ. ಆದರೆ, ಪರ್ಷಿಯಾ, ಮೆಸಪ ಟೋಮಿಯಾ ಸೇರಿದಂತೆ ಬೇರೆ ಎಲ್ಲ ದೇಶಗಳೂ ತಮ್ಮ ಸ್ಥಳೀಯ ಸಂಸ್ಕöÈತಿ ಯನ್ನು ಕಳೆದುಕೊಂಡಿವೆ ಎಂದರು.೨೦೫೦ಕ್ಕೆ ಮೊದಲ ಸ್ಥಾನ: ಅಮೆರಿಕಾ ಹಾಗೂ ಚೀನಾ ನಂತರದ ಸ್ಥಾನದಲ್ಲಿ ದೇಶದ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಇದ್ದು, ಮುಂದಿನ ೧೦ ವರ್ಷಗಳಲ್ಲಿ ಚೀನಾ ಹಾಗೂ ೨೦೫೦ರ ಹೊತ್ತಿಗೆ ಅಮೆ ರಿಕಾ ದಾಟಿ ಜಿಡಿಪಿಯಲ್ಲಿ ವಿಶ್ವದಲ್ಲಿಯೇ ಭಾರತ ಮೊದಲ ಸ್ಥಾನ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

Translate »