ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಬ್ರಹ್ಮಾಂಡ ಭ್ರಷ್ಟಾಚಾರ ನೂರಾರು ನಿವೇಶನಗಳ ದಾಖಲೆಯ ಪುಟಗಳೇ ಮಾಯ
ಮೈಸೂರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಬ್ರಹ್ಮಾಂಡ ಭ್ರಷ್ಟಾಚಾರ ನೂರಾರು ನಿವೇಶನಗಳ ದಾಖಲೆಯ ಪುಟಗಳೇ ಮಾಯ

April 24, 2022

ನೂರಾರು ಕೋಟಿ ರೂ. ಮೌಲ್ಯದ ನಿವೇಶನಗಳ ಅಕ್ರಮ ಪರಭಾರೆ ಶಂಕೆ

ಮುಡಾ ಅಧಿಕಾರಿಗಳು, ಸಿಬ್ಬಂದಿ ಕೈವಾಡದಿಂದ ಭಾರೀ ಅವ್ಯವಹಾರ

ಗಣಕೀಕೃತ ಇಂಡೆಕ್ಸ್ ಮಾಡುವಾಗ ಲೆಡ್ಜರ್‌ಗಳಿಂದ ನಿವೇಶನಗಳ ಮಾಹಿತಿ ಪುಟ ನಾಶ

ಪ್ರಾಧಿಕಾರದ ಆಯುಕ್ತರ ಸೂಚನೆ ಮೇರೆಗೆ ರಜಾ ದಿನವೂ ಕಾರ್ಯದರ್ಶಿ ನೇತೃತ್ವದ ೨೦ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿAದ ಮೂಲ ಕಡತಗಳ ಪರಿಶೀಲನಾ ಕಾರ್ಯಾಚರಣೆ

ಮೈಸೂರು, ಏ.೨೩-ನಿವೇಶನ ಹೊಂದುವ ಕನಸು ಕಂಡು ಅರ್ಜಿ ಸಲ್ಲಿಸಿ ಸುಮಾರು ೧೫-೨೦ ವರ್ಷಗಳಿಂದ ಸಾವಿರಾರು ಮಂದಿ ಕಾಯುತ್ತಲೇ ಇದ್ದಾರೆ. ಚಾತಕ ಪಕ್ಷಿಯಂತೆ ಕಾದಿ ರುವವರಿಗೆ ನಿವೇಶನ ನೀಡದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ), ಸಾವಿರಾರು ಮಂದಿಗೆ ಅಕ್ರಮವಾಗಿ ನಿವೇಶನ ಹೊಂದುವ ಭಾಗ್ಯವನ್ನಂತೂ ಕರುಣ ಸಿದೆ. ಆ ಮೂಲಕ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದೆ.

ಕಚೇರಿ ಲೇಖಾಭಿಲಾಯ (ಖeಛಿoಡಿಜ Seಛಿಣioಟಿ)ದ ಲೆಡ್ಜರ್ ಮತ್ತು ಕಡತಗಳ ದಾಖಲೆಗಳನ್ನು ಸ್ಕಾö್ಯನ್ ಮಾಡಿ ಡಿಜಿಟಲೈಸ್ಡ್ ಇಂಡೆಕ್ಸ್ ಮಾಡು ವಾಗ ಬೆಲೆಬಾಳುವ ನೂರಾರು ನಿವೇಶನಗಳ ಮಾಹಿತಿ ಇದ್ದ ದಾಖ ಲಾತಿ ಪುಟಗಳನ್ನೇ ಹರಿದು ನಾಶ ಪಡಿಸಿರುವುದು ಬೆಳಕಿಗೆ ಬಂದಿದೆ. ಸುಮಾರು ೩೦ ಲೆಡ್ಜರ್‌ಗಳಿಂದ ೬೦೦ ನಿವೇ ಶನಗಳ ದಾಖಲೆ ಪುಟ (Pಚಿge)ಗಳೇ ನಾಪತ್ತೆಯಾಗಿದ್ದು, ಇದರಲ್ಲಿ ನೂರಾರು ಕೋಟಿ ರೂ. ಅವ್ಯವಹಾರ ನಡೆದಿರಬಹು ದೆಂದು ಅಂದಾಜಿಸಲಾಗಿದೆ. ಭ್ರಷ್ಟಾಚಾರದ ಸುಳಿವು ಸಿಗುತ್ತಿದ್ದಂ ತೆಯೇ ಎಚ್ಚೆತ್ತ ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್, ಈ ಕರ್ಮ ಕಾಂಡವನ್ನು ಬಯಲಿಗೆಳೆದು ಭಾಗಿಯಾಗಿರುವವರಿಗೆ ತಕ್ಕ ಶಾಸ್ತಿ ಮಾಡಲು ಮುಂದಾಗಿದ್ದಾರೆ.

ಕಚೇರಿ ಅಭಿಲೇಖಾಲಯದಲ್ಲಿರುವ ಸಾವಿರಾರು ಕಡತಗಳನ್ನು ಪರಿಶೀಲಿಸಲು ಮುಡಾ ಕಾರ್ಯದರ್ಶಿ ವೆಂಕಟರಾಜು ನೇತೃತ್ವದಲ್ಲಿ ತಂಡ ರಚಿಸಿದ್ದಾರೆ.

ರಜಾ ದಿನವೇ ಕಾರ್ಯಾಚರಣೆ:ಭಾರೀ ಅವ್ಯವಹಾರ ಪತ್ತೆ ಮಾಡಲು ವೆಂಕಟರಾಜು ನೇತೃತ್ವದ ವಿಶೇಷ ತಹಸೀಲ್ದಾರ್, ರೆವಿನ್ಯೂ ಇನ್ಸ್ಪೆಕ್ಟರ್, ನಿವೇಶನ ಶಾಖೆ, ಇ-ಖಾತಾ ಶಾಖೆಯ ಸುಮಾರು ೨೦ಕ್ಕೂ ಹೆಚ್ಚು ಮಂದಿ ಅಧಿಕಾರಿಗಳು ೪ನೇ ಶನಿವಾರದ ರಜಾ ದಿನವೂ ಪತ್ತೆ ಕಾರ್ಯಾಚರಣೆ ಆರಂಭಿಸಿದ್ದಾರೆ. ವಿವಿಧ ಬಡಾವಣೆಯ ನಿವೇಶನ ಹಂಚಿಕೆ
ಮಾಡಿರುವ ಮೂಲ ಕಡತಗಳ ಪ್ರತಿಯೊಂದು ಪುಟಗಳನ್ನೂ ಪರಿಶೀಲಿಸುತ್ತಿರುವ ಅಧಿಕಾರಿಗಳು, ದಾಖಲೆಗಳ ಪುಟ ಸಂಖ್ಯೆ, ಹಣ ಪಾವತಿಸಿರುವ ಚಲನ್, ಹಂಚಿಕೆ ಪತ್ರ, ಕ್ರಯ ಪತ್ರ, ಸ್ವಾಧೀನ ಪತ್ರ, ಖಾತಾ ಪತ್ರ, ಕ್ರಯ ವರ್ಗಾವಣೆ ಪತ್ರ, ಟೈಟಲ್ ಡೀಡ್, ಇಸಿ ಸೇರಿದಂತೆ ಎಲ್ಲಾ ದಾಖಲಾತಿಗಳ ಮಾಹಿತಿಗಳನ್ನು ಪ್ರತ್ಯೇಕ ಲೆಡ್ಜರ್‌ಗಳಲ್ಲಿ ನಮೂದಿಸುತ್ತಿದ್ದಾರೆ.

ದಾಖಲಾತಿಗಳ ನಾಶ: ವಿವಿಧ ಪ್ರತಿಷ್ಠಿತ ಬಡಾವಣೆಗಳನ್ನೇ ಗುರಿಯಾಗಿಸಿಕೊಂಡು ಭಾರೀ ಬೆಲೆಬಾಳುವ ದೊಡ್ಡ ದೊಡ್ಡ ನಿವೇಶನಗಳ ಮೂಲ ಕಡತ (ಔಡಿigiಟಿಚಿಟ ಈiಟe)ಗಳಿಂದ ಪ್ರಮುಖ ಮಾಹಿತಿಗಳಿರುವ ಹಾಳೆಗಳನ್ನೇ ಕಿತ್ತಿರುವುದು, ಆ ಸ್ಥಳಕ್ಕೆ ಬೇರೊಬ್ಬ ವ್ಯಕ್ತಿಯ ಹೆಸರಿನ ನಕಲಿ ದಾಖಲೆಗಳನ್ನು ಸೇರಿಸಿರುವುದು ಪರಿಶೀಲನೆ ವೇಳೆ ಕಂಡುಬAದಿದೆ.

೬೦೦ ನಿವೇಶನಗಳ ದಾಖಲೆ ನಾಪತ್ತೆ: ಮುಡಾದಿಂದ ರಚಿಸಿರುವ ವಿವಿಧ ಬಡಾವಣೆಗಳ ೬೦೦ ನಿವೇಶನಗಳ ಹಂಚಿಕೆ ಮಾಡಿರುವ ಬಗ್ಗೆ ಇದ್ದ ೩೦೦ ಕಡತಗಳಿಂದ ದಾಖಲೆ ಪತ್ರಗಳನ್ನು ನಾಪತ್ತೆ ಮಾಡಲಾಗಿದ್ದು, ಫೈಲ್ ಮತ್ತು ಲೆಡ್ಜರ್‌ಗಳಲ್ಲಿರುವ ದಾಖಲೆಗಳಿಗೆ ಒಂದಕ್ಕೊAದು ತಾಳೆಯಾಗದಿರುವುದು ಪರಿಶೀಲನೆ ವೇಳೆ ಕಂಡುಬರುತ್ತಿದೆ.

ನೂರಾರು ಕೋಟಿ ರೂ ಅವ್ಯವಹಾರ: ಮೂಲ ದಾಖಲೆಗಳನ್ನು ನಾಶ ಮಾಡಿ, ಅದರ ಸ್ಥಳದಲ್ಲಿ ನಕಲಿ ದಾಖಲೆಗಳನ್ನು ಸೇರಿಸಿ, ಬ್ಯಾಂಕ್ ಚಲನ್‌ಗಳನ್ನೂ ನಕಲಿ ಮಾಡಿ ನೂರಾರು ಕೋಟಿ ರೂ.ಗಳ ನಿವೇಶನಗಳನ್ನು ಪರಭಾರೆ ಮಾಡಿ ಭಾರೀ ಅವ್ಯವಹಾರ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಅಧಿಕಾರಿ, ಸಿಬ್ಬಂದಿ ಶಾಮೀಲು: ಈ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಡಾದ ಕೆಲ ಅಧಿಕಾರಿಗಳು, ಸಿಬ್ಬಂದಿ ಶಾಮೀಲಾಗಿರುವ ಬಲವಾದ ಶಂಕೆ ವ್ಯಕ್ತವಾಗಿದ್ದು, ಅಭಿಲೇಖಾಲಯದಿಂದ ಕಡತ ತೆಗೆದು ಅದರಲ್ಲಿನ ದಾಖಲೆಗಳ ಪುಟಗಳನ್ನು ತೆಗೆದು ಅಕ್ರಮ ನಡೆಸಲು ಬೇರೆಯವರಿಂದ ಸಾಧ್ಯವಾಗುವುದಿಲ್ಲ ಎಂಬುದೂ ಖಾತರಿಯಾಗಿದೆ. ಪ್ರಾಧಿಕಾರದಲ್ಲಿ ಕೆಲಸ ಮಾಡುತ್ತಿದ್ದು, ಈಗ ಸ್ವಯಂ ನಿವೃತ್ತಿ ಪಡೆದಿರುವ ಕೆಲವರು ಈ ಅವ್ಯವಹಾರ ದಂಧೆಯ ಪ್ರಮುಖ ರೂವಾರಿಗಳೆಂದು ಹೇಳಲಾಗುತ್ತಿದ್ದು, ಅಂತಹವರ ಮಾಹಿತಿ ಕಲೆ ಹಾಕಲು ಈಗಾಗಲೇ ಒಂದು ತಂಡ ಸದ್ದಿಲ್ಲದೇ ಕೆಲಸ ಮಾಡುತ್ತಿದೆ.

ಹಲವು ಕಡತಗಳೇ ಕಣ್ಮರೆ: ಕೇವಲ ದಾಖಲೆ ಪುಟಗಳಷ್ಟೇ ಅಲ್ಲದೆ, ಹಲವು ಬಡಾ ವಣೆಗಳಲ್ಲಿ ಹಂಚಿಕೆ ಮಾಡಿರುವ ನಿವೇಶನಗಳಿಗೆ ಸಂಬAಧಿಸಿದ ಮೂಲ ಕಡತಗಳೇ ಕಣ್ಮರೆಯಾಗಿವೆ. ಲೆಡ್ಜರ್‌ಗಳಲ್ಲಿ ನಿವೇಶನಗಳ ಮಾಹಿತಿ ಬರೆಯಲಾಗಿದೆ. ಆದರೆ ಅವುಗಳಿಗೆ ಸಂಬAಧಿಸಿದ ದಾಖಲೆಗಳಿರುವ ಕಡತಗಳನ್ನು ಕಳವು ಮಾಡಲಾಗಿದೆ. ಕೆಲ ಪ್ರಕರಣಗಳಲ್ಲಿ ಕಡತ ಮತ್ತು ಲೆಡ್ಜರ್ ಎರಡೂ ನಾಪತ್ತೆ ಆಗಿರುವುದು ತಿಳಿದು ಬಂದಿದೆ.

ಇAಡೆಕ್ಸ್ ಮಾಡುವಾಗ ಪತ್ತೆ: ಮುಡಾದಲ್ಲಿರುವ ನಿವೇಶನಗಳಿಗೆ ಸಂಬAಧಪಟ್ಟ ಎಲ್ಲಾ ಕಡತಗಳಲ್ಲಿನ ಪ್ರತಿಯೊಂದು ಪುಟಗಳನ್ನೂ ಸ್ಕಾö್ಯನ್ ಮಾಡಿ ಸಾಫ್ಟ್ವೇರ್‌ನಲ್ಲಿ ಇಂಡೆಕ್ಸ್ ರೂಪದಲ್ಲಿ ಸಂಗ್ರಹಿಸಿಡಲು ಪ್ರಕ್ರಿಯೆ ನಡೆಸಿದಾಗ ದಾಖಲೆಗಳ ಮೂಲ ಪ್ರತಿಗಳು ನಾಪತ್ತೆಯಾಗಿರುವುದು ತಿಳಿಯಿತು. ಅಂತಹ ಫೈಲ್‌ಗಳನ್ನು ಪ್ರತ್ಯೇಕ ಪಟ್ಟಿ ಮಾಡಿ ಗುರುತಿಸಿಕೊಂಡು ಇದೀಗ ಪರಿಶೀಲನಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

ವಿವಿಧ ಹಂತದಲ್ಲಿ ಅಕ್ರಮ: ಕಳೆದ ೨೫-೩೦ ವರ್ಷಗಳ ಹಿಂದಿನಿAದಲೂ ಈ ಅವ್ಯವಹಾರ ನಡೆದಿದ್ದು, ವಿವಿಧ ಹಂತದಲ್ಲಿ ಮಧ್ಯವರ್ತಿಗಳೊಂದಿಗೆ ಶಾಮೀಲಾಗಿ ಬೆಲೆ ಬಾಳುವ ನಿವೇಶನಗಳನ್ನು ಪರಭಾರೆ ಮಾಡಿದ್ದು, ಕೋಟ್ಯಾಂತರ ರೂ. ಅವ್ಯವಹಾರ ನಡೆದಿದೆ ಎಂಬುದೂ ಕಡತಗಳ ಪರಿಶೀಲನೆಯಿಂದ ತಿಳಿಯುತ್ತಿದೆ.
ಇಂದು ಬೆಳಗ್ಗೆ ೧೦ರಿಂದ ಸಂಜೆ ೪ ಗಂಟೆವರೆಗೂ ಪರಿಶೀಲನೆ ನಡೆಸಿದ ಅಧಿಕಾರಿಗಳ ತಂಡವು, ನಾಳೆ (ಭಾನುವಾರ)ಯೂ ಮಧ್ಯಾಹ್ನದವರೆಗೆ ಕಾರ್ಯನಿರ್ವಹಿಸಲಿದೆ.

ಹರಾಜಾದ ನಿವೇಶನಗಳ ಕಡತಗಳೂ ಇಲ್ಲ: ಕಳೆದ ೩೦ ವರ್ಷಗಳಿಂದಲೂ ಮುಡಾ ದಿಂದ ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಮಾಡಿದ ಮೂಲೆ ಮತ್ತು ಮಧ್ಯಂತರ ನಿವೇ ಶನಗಳ ಕಡತ ಮತ್ತು ಲೆಡ್ಜರ್‌ಗಳೂ ಕಣ್ಮರೆಯಾಗಿದ್ದು, ಹಣ ಕಟ್ಟಿ ನಿವೇಶನ ಖರೀದಿಸಿ ದವರ ಬ್ಯಾಂಕ್ ಚಲನ್, ಹಣ ಪಾವತಿಯಾಗಿದೆ ಎಂದು ನಮೂದಿಸಿರುವ ಲೆಕ್ಕ ಶಾಖೆ ಲೆಡ್ಜರ್‌ಗಳನ್ನೂ ಕಳವು ಮಾಡಿರುವುದು ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ.

ಇದೂವರೆಗೆ ಹೇಗೆ ತಿಳಿಯಲಿಲ್ಲ?: ಹಲವು ವರ್ಷಗಳಿಂದಲೇ ವಿವಿಧ ಹಂತದಲ್ಲಿ ಈ ಖದೀಮ ಕೆಲಸ ನಡೆದಿದೆ ಎಂದು ತಿಳಿದುಬಂದಿದೆ. ಹಾಗಾದರೆ ಹಲವು ಆಯುಕ್ತರು, ಕಾರ್ಯದರ್ಶಿಗಳು, ಅಧ್ಯಕ್ಷರು ಮುಡಾದಲ್ಲಿ ಸೇವೆ ಸಲ್ಲಿಸಿದ್ದರೂ ದಾಖಲೆ ಪತ್ರಗಳು ಕಣ್ಮರೆಯಾಗಿರುವುದು ತಿಳಿಯಲಿಲ್ಲವೇಕೆ? ಹಿಂದೆಯೇ ಪರಿಶೀಲಿ ಸಿದ್ದರೆ, ಅದರಲ್ಲಿ ಭಾಗಿಯಾಗಿರುವವರನ್ನು ಪತ್ತೆ ಮಾಡಿ ನಿಜ ಬಣ್ಣ ಬಟಾಬಯಲು ಮಾಡಬಹುದಿತ್ತು. ಆ ಬಗ್ಗೆ ಅವರ ಗಮನಕ್ಕೆ ಬರಲಿಲ್ಲವೇ ಅಥವಾ ಗೊತ್ತಿದ್ದೂ ಸುಮ್ಮನಾಗಿದ್ದರೆ ಅಥವಾ ಕೋಟ್ಯಾಂತರ ರೂ. ಹಣ ಪಡೆದು ಈ ಭ್ರಷ್ಟಕೂಪದಲ್ಲಿ ಅವರೂ ಭಾಗಿಯಾಗಿದ್ದರೆ ಎಂಬ ಅನುಮಾನ ಮೂಡತೊಡಗಿದೆ.
ಬದಲಿ ನಿವೇಶನದಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವ ಬಗ್ಗೆ ಭಾರೀ ಗುಮಾನಿ ಇದೆ. ಬದಲಿ ನಿವೇ ಶನ ಪಡೆದ ಅದೆಷ್ಟೋ ಫಲಾನುಭವಿಗಳು, ಮೂಲ ನಿವೇ ಶನವನ್ನು ತಮ್ಮ ಸುಪರ್ದಿಯಲ್ಲೇ ಇರಿಸಿಕೊಂಡಿದ್ದಾರೆ. ಇಲ್ಲವೇ ನಕಲಿ ದಾಖಲೆಗಳ ಮೂಲಕ ಇಂತಹ ಹಲವು ನಿವೇಶನ ಕಂಡ ಕಂಡವರ ಪಾಲಾಗಿವೆ. ಇದರಲ್ಲೂ ಮುಡಾ ಸಿಬ್ಬಂದಿ ಕೈಚಳಕವಿದೆ ಎಂದು ಹೇಳಲಾಗುತ್ತಿದೆ.

ವಿಜಯನಗರ, ದೇವನೂರು ಬಡಾವಣೆ ನಿವೇಶನಗಳದ್ದೇ ಸಿಂಹಪಾಲು
ಮೈಸೂರು: ಕಡತಗಳು, ಲೆಡ್ಜರ್‌ಗಳ ದಾಖಲೆ ಪುಟಗಳು ಕಣ್ಮರೆಯಾಗಿರುವು ದರಲ್ಲಿ ವಿಜಯನಗರ ೨ನೇ ಹಂತ ಮತ್ತು ದೇವನೂರು ೧ನೇ ಹಂತದ ಬಡಾವಣೆ ಗಳ ನಿವೇಶನಗಳದ್ದೇ ಸಿಂಹಪಾಲು. ವಿಜಯನಗರ ೨ನೇ ಹಂತದ ೪೦ಘಿ೬೦, ೫೦ಘಿ೮೦ ಅಳತೆ ವಿಸ್ತೀರ್ಣದ ಕೋಟ್ಯಾಂತರ ರೂ. ಬೆಲೆಬಾಳುವ ನಿವೇಶನಗಳ ಹಂಚಿಕೆ ಸಂಬAಧ ಇದ್ದ ಕಡತ, ಲೆಡ್ಜರ್ ಮತ್ತು ಪ್ರಮುಖ

ದಾಖಲೆಗಳನ್ನೇ ತೆಗೆದು ಹಾಕಿ ಆ ಸ್ಥಳದಲ್ಲಿ ಬೇರೆಯವರ ಹೆಸರಿನ ದಾಖಲಾತಿ ಸೃಷ್ಟಿಸ ಲಾಗಿದೆ. ಮರಣ ಹೊಂದಿದ, ವಿದೇಶದಲ್ಲಿ ನೆಲೆಸಿರುವ, ಮುಡಾದಿಂದ ಕಳುಹಿಸಿದ ಹಿಂಬರಹ, ತಿಳುವಳಿಕೆ ಪತ್ರ ತಲುಪದೇ ಇರುವವರ ನಿವೇಶನಗಳನ್ನೇ ಗುರಿಯಾಗಿರಿಸಿ ಕೊಂಡು, ಅದೇ ಹೆಸರಿನ ಬೇರೆ ವ್ಯಕ್ತಿಗಳನ್ನು ಕರೆತಂದು ಖಾತಾ ಕಂದಾಯ ಮಾಡಿಸಿ ಕೊಟ್ಟಿರುವುದು ವಿಜಯನಗರ ೨ನೇ ಹಂತದಲ್ಲಿ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಅದೇ ರೀತಿ ವಿಜಯನಗರ ೧ ಮತ್ತು ೩ನೇ ಹಂತ, ದೇವನೂರು ೧ನೇ ಹಂತದ ಬಡಾವಣೆಗಳ ದೊಡ್ಡ ದೊಡ್ಡ ವಿಸ್ತೀರ್ಣದ ಸುವಿಶಾಲದ ರಸ್ತೆಯಲ್ಲಿರುವ ನಿವೇಶನಗಳ ಹಂಚಿಕೆ ಫೈಲ್‌ಗಳಿಂದಲೇ ದಾಖಲೆ ಪತ್ರಗಳ ಪುಟಗಳನ್ನು ಕಿತ್ತು ಅಕ್ರಮವಾಗಿ ಬೇರೆಯವರ ಹೆಸರಿಗೆ ದಾಖಲಾತಿ ಮಾಡಿಕೊಟ್ಟಿರುವುದೂ ಬೆಳಕಿಗೆ ಬರುತ್ತಿದೆ. ಈ ಅವ್ಯವಹಾರದಲ್ಲಿ ಹಲವು ಮುಡಾ ಸಿಬ್ಬಂದಿ ಶಾಮೀಲಾಗಿರುವ ದೂರುಗಳಿದ್ದು, ಅವರಲ್ಲಿ ಅನೇಕರು ನಿವೃತ್ತ ರಾಗಿದ್ದಾರೆ, ಇಲ್ಲವೇ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಇವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರೆ ನೂರಾರು ಕೋಟಿಯ ಹಗರಣ ಬೆಳಕಿಗೆ ಬರಲಿದೆ.

ಎಸ್.ಟಿ.ರವಿಕುಮಾರ್

Translate »