ನಂಜನಗೂಡಿನಲ್ಲಿ ಶುಭಂ ನೂತನ ಶಾಖೆ ಶುಭಾರಂಭ
ಮೈಸೂರು ಗ್ರಾಮಾಂತರ

ನಂಜನಗೂಡಿನಲ್ಲಿ ಶುಭಂ ನೂತನ ಶಾಖೆ ಶುಭಾರಂಭ

March 9, 2020

ನಂಜನಗೂಡು, ಮಾ.8-ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಪ್ರಸಿದ್ಧ ಮಾರಾಟ ಸಂಸ್ಥೆ ಶುಭಂ ಎಲೆಕ್ಟ್ರಾನಿಕ್ಸ್‍ನಿಂದ ನಗರದ ಎಂಜಿಎಸ್ ರಸ್ತೆಯ 12ನೇ ತಿರುವಿನಲ್ಲಿ ಶಾಖೆ ಶನಿವಾರ ಶುಭಾರಂಭಗೊಂಡಿತು.ನಂಜನಗೂಡು ಪೋಲಿಸ್ ಉಪ ವಿಭಾಗದ ಡಿವೈಎಸ್‍ಪಿ ಪ್ರಭಾಕರರಾವ್ ಶಿಂಧೆ ನೂತನ ಶಾಖೆ ಉದ್ಘಾಟಿಸಿ ಮಾತನಾಡಿದರು.

ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮಾರಾಟದಲ್ಲಿ ವಿಸ್ತøತ ಸೇವಾ ಜಾಲವನ್ನು ಹೊಂದಿರುವ ಶುಭಂ ಸಂಸ್ಥೆಯಿಂದ ನಂಜನಗೂಡಿನಲ್ಲಿ ಗ್ರಾಹಕರಿಗೆ ಗುಣಮಟ್ಟದ ಸೇವೆ ದೊರೆಯಲಿ ಎಂದು ಹಾರೈಸಿದರು.

ಈ ವೇಳೆ ಮಲ್ಲನಮೂಲೆ ಶ್ರೀ ಗುರು ಕಂಬಳೀಶ್ವರ ಮಠಾಧ್ಯಕ್ಷ ಶ್ರೀ ಚೆನ್ನಬಸವಸ್ವಾಮೀಜಿ, ಬಾಲಏಸು ದೇವಾಲಯದ ಫಾದರ್ ಜಾನ್‍ಟೆಕ್ಸೇರಾ ಕ್ಯಾಥೋಲಿಕ್, ಜಾಮಿಯಾ ಮಸೀದಿಯ ಇಮಾಮ್ ಮೌಲಾನಾ ಅಬ್ದುಲ್ ಮುಸವ್ಹೀರ್, ಜಾಮಿಯಾ ಮಸೀದಿ ಉಪ ಇಮಾಮ್ ಮೌಲಾನಾ ಹಿದಾಯತುಲ್ಲಾ ಸಿದ್ಧಿಖಿ ಹಾಗೂ ಮಸೀದಿ ಇನೂರ್‍ಇಮಾಮ್ ಮೌಲಾನಾ ಫುರ್ಖಾನ್ ಸಾಬ್, ಶುಭಂ ಸಂಸ್ಥೆಯ ಮಾರಾಟ ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ಸುರೇಶ್ ಹಾಗೂ ಮಾರುಕಟ್ಟೆ ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ಪ್ರದೀಪ್ ಮತ್ತಿತರರು ಭಾಗವಹಿಸಿದ್ದರು.

Translate »