ಸಿದ್ದಾಪುರ, ನೆಲ್ಯಹುದಿಕೇರಿ, ಪಾಲಿಬೆಟ್ಟ ಸಂಪೂರ್ಣ ಬಂದ್
ಕೊಡಗು

ಸಿದ್ದಾಪುರ, ನೆಲ್ಯಹುದಿಕೇರಿ, ಪಾಲಿಬೆಟ್ಟ ಸಂಪೂರ್ಣ ಬಂದ್

April 25, 2021

ಸಿದ್ದಾಪುರ, ಏ.24- ಕೊರೊನಾ ಮಹಾಮಾರಿ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ವಾರಂತ್ಯದ ಕಫ್ರ್ಯೂ ಘೋಷÀಣೆ ಹಿನ್ನಲೆ ಸಿದ್ದಾಪುರ, ನೆಲ್ಯಹುದಿಕೇರಿ, ಪಾಲಿಬೆಟ್ಟ, ಸೇರಿದಂತೆ ಹಲವು ಗ್ರಾಮ ಗಳಲ್ಲಿ ವರ್ತಕರು ಸ್ವಯಂ ಪ್ರೇರಿತ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್‍ಗೆ ಸಹಕರಿಸಿದರು. ವೈದ್ಯಕೀಯ ಸೇವೆ, ಆಸ್ಪತ್ರೆ, ಪೆಟ್ರೋಲ್ ಬಂಕ್ ಹೊರತು ಪಡಿಸಿ ಎಲ್ಲವೂ ನಿಶಬ್ದವಾಗಿತ್ತು. ಆಸ್ಪತ್ರೆ ಸೇರಿದಂತೆ ತುರ್ತು ಸಂದರ್ಭಕ್ಕೆ ಸೀಮಿತ ವಾದ ವಾಹನಗಳು ಮಾತ್ರ ಓಡಾಟವಿತ್ತು.

ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ನೇತೃತ್ವದಲ್ಲಿ ಎಲ್ಲೆಡೆ ಪೆÇಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಸಾರ್ವಜನಿಕರು ಮನೆಯಿಂದ ಹೊರ ಬರದೇ ಮುಖ್ಯ ರಸ್ತೆಗಳು ಬಿಕೋ ಎನ್ನುತ್ತಿತ್ತು, ಬೆಳಿಗ್ಗೆ 10 ಗಂಟೆಯವರೆಗೆ ದಿನಸಿ, ತರಕಾರಿ, ಕೋಳಿ ಮಾಂಸ ದಂಗಡಿಗಳು ತೆರೆದಿದ್ದವು. ಜನ ಹೆಚ್ಚಾಗಿ ಅಂಗಡಿಗಳ ಕಡೆ ಬರಲಿಲ್ಲ. 10 ಗಂಟೆ ಯಾಗುತ್ತಿದ್ದಂತೆ ಪೆÇಲೀಸರು ಧ್ವನಿವರ್ಧಕದ ಮೂಲಕ ತಿಳಿಸುತ್ತಿದ್ದಂತೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದರು.

ನೆಲ್ಯಹುದಿಕೇರಿಯಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿಯಿಂದ ಪಂಚಾಯಿತಿಯ ವಾಹನದಲ್ಲಿ ಧ್ವನಿವರ್ಧಕದ ಮೂಲಕ ಸಾರ್ವಜನಿಕರು ಎಚ್ಚರ ವಹಿಸುವಂತೆ ಸುರಕ್ಷತೆ ಕಾಪಾಡಿಕೊಳ್ಳುವಂತೆ ಮನವಿ ಮಾಡುತ್ತಿರುವ ದೃಶ್ಯ ಕಂಡುಬಂತು. ಸಿದ್ಧಾ ಪುರದಲ್ಲಿ ಮದ್ಯಪ್ರಿಯರು ಕೆಲವು ಬಾರ್‍ಗಳ ಮುಂದೆ ನಿಂತಿದರೂ ಮದ್ಯ ಸಿಗದೆ ಕಂಗಾಲಾಗಿ ಹಿಂತಿರುಗುತ್ತಿದ್ದರು. ಹೋಟೆಲ್‍ಗಳು ಸಂಪೂರ್ಣ ಬಂದ್ ಆಗಿರುವ ಹಿನ್ನೆಲೆಯಲ್ಲಿ ಕೆಲವು ಕಾರ್ಮಿಕರು ಊಟ ಸಿಗದೆ ಪರದಾಡು ತ್ತಿರುವ ದೃಶ್ಯ ಕಂಡುಬಂತು.

Translate »