ಸಿದ್ದರಾಮಯ್ಯರನ್ನು 70 ಸಾವಿರ ಲೀಡ್‍ನಲ್ಲಿ ಗೆಲ್ಲಿಸಿಕೊಂಡು ಬರ್ತೀನಿ!
ಮೈಸೂರು

ಸಿದ್ದರಾಮಯ್ಯರನ್ನು 70 ಸಾವಿರ ಲೀಡ್‍ನಲ್ಲಿ ಗೆಲ್ಲಿಸಿಕೊಂಡು ಬರ್ತೀನಿ!

May 27, 2021

ಬೆಂಗಳೂರು, ಮೇ 26- ಯಡಿ ಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳ ಗಿಳಿಸಬೇಕು ಎನ್ನುವ ವಿಚಾರ ಆರೇಳು ತಿಂಗಳಿಂದಲೂ ಇದೆ. ಅದು ಬಿಜೆಪಿ ಪಕ್ಷದ ವಿಚಾರ. ನಾನು ಹೇಗೆ ಪ್ರತಿಕ್ರಿಯೆ ನೀಡಲು ಸಾಧ್ಯ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದರು.

ನನ್ನ ಕ್ಷೇತ್ರದಲ್ಲಿ ನಡೆದ ಅನ್ನದಾನದ ಕಾರ್ಯಕ್ರಮಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಕರೆದಿದ್ದೆ. ಲಾಕ್‍ಡೌನ್ ವಿಸ್ತರಣೆ ಯಾದರೆ ಮತ್ತೆ ಮೂವತ್ತು ಸಾವಿರ ಜನ ರಿಗೆ ಊಟ ಹಾಕಬೇಕೆಂದಿದ್ದೇನೆ. ಆಗ, ಮತ್ತೆ ನಮ್ಮ ಅಧ್ಯಕ್ಷರನ್ನು ಕರೆಯುತ್ತೇನೆ ಎಂದು ಜಮೀರ್ ಸ್ಪಷ್ಟನೆ ನೀಡಿದರು. ನಾನು ಯಾವುದೇ ಒಳ್ಳೆಯ ಕೆಲಸವನ್ನು ಮಾಡಿದರೂ ಸಿದ್ದರಾಮಯ್ಯನವರನ್ನು ಬಿಟ್ಟು ಮಾಡುವುದಿಲ್ಲ. ಕ್ಷೇತ್ರದ ಕಾರ್ಯ ಕರ್ತರು ಸಿದ್ದರಾಮಯ್ಯನವರನ್ನು ಕರೆಸಿ ಎಂದು ಒತ್ತಡ ಹಾಕುತ್ತಾರೆ. ಹಾಗಾಗಿ, ಸಿದ್ದರಾಮಯ್ಯನವರನ್ನು ನಾನು ಕರೆ ಯುತ್ತಿದ್ದೇನೆ ಎಂದು ಜಮೀರ್ ಹೇಳಿ ದರು. ರಾಜ್ಯದೆಲ್ಲೆಡೆ ನಾನು ಪ್ರವಾಸ ಮಾಡಿ ದ್ದೇನೆ, ಜನರು ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕೆಂದು ಬಯಸು ತ್ತಿದ್ದಾರೆ.

ಬಾದಾಮಿಯಲ್ಲಿ ಬೇಡ, ನನ್ನ ಕ್ಷೇತ್ರ ಚಾಮರಾಜಪೇಟೆಯಲ್ಲಿ ನೀವು ನಿಲ್ಲಿ ಎಂದು ನಾನೇ ಸಿದ್ದರಾಮಯ್ಯನವರಿಗೆ ಹೇಳಿದ್ದೇನೆ ಎಂದು ಜಮೀರ್ ಅಹ್ಮದ್ ಖಾನ್ ಪುನರುಚ್ಚರಿಸಿ ದ್ದಾರೆ. ಸಿದ್ದರಾಮಯ್ಯನವರಿಂದ ರಾಜ್ಯಕ್ಕೆ ಒಳ್ಳೆಯದಾಗಬೇಕಿದೆ. ನೀವು ಬರೀ ನಾಮಪತ್ರ ಸಲ್ಲಿಸಿ ಹೋಗಿ, ನಿಮ್ಮನ್ನು 70 ಸಾವಿರ ಲೀಡ್‍ನಲ್ಲಿ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು ಎಂದು ವಿಶ್ವಾಸದ ಮಾತನ್ನಾಡಿದ್ದಾರೆ. ನಾನು ಸಿದ್ದರಾಮಯ್ಯನವರನ್ನು ಚಾಮರಾಜಪೇಟೆಯಿಂದ ಗೆಲ್ಲಿಸಿಕೊಂಡು ಬರದಿದ್ದರೆ, ರಾಜಕೀಯ ನಿವೃತ್ತಿ ಪಡೆಯುತ್ತೇನೆ. ನನ್ನ ಆಹ್ವಾನಕ್ಕೆ ಸಿದ್ದರಾಮಯ್ಯ ನವರು ಇನ್ನೂ ಏನನ್ನೂ ಹೇಳಲಿಲ್ಲ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದರು.

 

 

 

 

 

Translate »