ಸಿಎಂ ಅಭ್ಯರ್ಥಿ ನಿಷ್ಕರ್ಷೆಗೆ ಸಿದ್ದರಾಮಯ್ಯ ಬಣ ಪಟ್ಟು
News

ಸಿಎಂ ಅಭ್ಯರ್ಥಿ ನಿಷ್ಕರ್ಷೆಗೆ ಸಿದ್ದರಾಮಯ್ಯ ಬಣ ಪಟ್ಟು

June 28, 2022

ಬೆಂಗಳೂರು, ಜೂ.27- ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಹೀಗಾಗಿ ಇಬ್ಬರು ನಾಯ ಕರು ನಾಳೆ (ಮಂಗಳವಾರ) ದೆಹ ಲಿಗೆ ಹಾರಲಿದ್ದು, ಮಧ್ಯಾಹ್ನ 3 ಗಂಟೆಗೆ ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಲಿದ್ದಾರೆ.
ಭಾರತ್ ಜೋಡೋ ಯಾತ್ರೆ ಹೊರತಾಗಿ ರಾಜ್ಯ ರಾಜಕಾರಣ, ರಾಜ್ಯ ಕಾಂಗ್ರೆಸ್ ನಾಯ ಕತ್ವದ ಬಗ್ಗೆ ರಾಹುಲ್ ಗಾಂಧಿ ಮಾತುಕತೆ ನಡೆಸಲಿ ದ್ದಾರೆ. ಈಗಾಗಲೇ ಹೈಕಮಾಂಡ್ ಮುಂದೆ ಸಿಎಂ ಅಭ್ಯರ್ಥಿ ಘೋಷಣೆ ಮಾಡುವಂತೆ ಸಿದ್ದರಾಮಯ್ಯ ಬಣ ವಾದ ಮಂಡಿಸಿದೆ. ಮುಖ್ಯಮಂತ್ರಿ ಅಭ್ಯರ್ಥಿ ಯಾಗಿ ಘೋಷಣೆ ಮಾಡದಿದ್ದರೆ ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿ ಸುವುದಿಲ್ಲ ಎಂದು ಪಟ್ಟು ಹಿಡಿದಿ ದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲದೇ ಹೋದರೆ ಕೇವಲ ಶಾಸಕ ರಾಗಿ ಇನ್ನೇನು ಮಾಡುವುದಿದೆ ಎಂದು ಸಿದ್ದರಾಮಯ್ಯ ಬೆಂಬಲಿ ಗರು ವರಿಷ್ಠರ ಬಳಿ ವಾದ ಮಾಡಿದ್ದಾರೆ. ಇನ್ನು ತಾನು ಕೂಡ ಪಕ್ಷಕ್ಕಾಗಿ, ಗಾಂಧಿ ಪರಿವಾರಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೀನಿ ಎಂದು ಡಿ.ಕೆ.ಶಿವಕುಮಾರ್ ವಾದಿಸಿದ್ದಾರೆ. ಗಾಂಧಿ ಕುಟುಂಬ ಏನು ಸೂಚಿಸುತ್ತದೋ ಅದನ್ನೇ ಚಾಚೂ ತಪ್ಪದೇ ಪಾಲಿಸುತ್ತೇನೆ ಎಂದಿದ್ದಾರೆ. ಚುನಾವಣೆಗೆ 6 ತಿಂಗಳು ಮೊದಲೇ ನಾಯಕತ್ವ ಘೋಷಣೆ ಮಾಡುವಂತೆ ಕಾಂಗ್ರೆಸ್ ಹೈಕಮಾಂಡ್ ಮೇಲೆ ಸ್ಥಳೀಯ ನಾಯಕರು ತೀವ್ರ ಒತ್ತಡ ಹೇರಿದ್ದಾರೆ. ಹೀಗಾಗಿ ಈ ಎಲ್ಲಾ ವಿಚಾರಗಳ ಬಗ್ಗೆ ನಾಳೆ ರಾಜ್ಯ ನಾಯಕರ ಜೊತೆ ರಾಹುಲ್ ಗಾಂಧಿ ಮಾತುಕತೆ ನಡೆಸಲಿದ್ದಾರೆ.
ಸಿದ್ದು ಬಣದ ಒತ್ತಡ: ಕಳೆದ ಕೆಲ ದಿನಗಳ ಹಿಂದೆಯೇ ರಾಹುಲ್ ಗಾಂಧಿ ಭೇಟಿಗೆ ಸಿದ್ದರಾಮಯ್ಯ ಬಣ ಮುಂದಾಗಿತ್ತು. ಸಿದ್ದರಾಮಯ್ಯರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸುವಂತೆ ಒತ್ತಡ ಹೇರಲು ನಿರ್ಧಾರ ಮಾಡಲಾಗಿತ್ತು. ಸಿದ್ದರಾಮಯ್ಯ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡದೇ ಇದ್ದರೆ ಪಕ್ಷಕ್ಕೆ ಮತ ಬರುವುದಿಲ್ಲ. ಚುನಾವಣಾ ರಾಜಕೀಯದಿಂದ ಅವರು ಹಿಂದೆ ಸರಿದು ಪಕ್ಷಕ್ಕಾಗಿ ದುಡಿಯಲಿದ್ದಾರೆ. ಸಿದ್ದರಾಮಯ್ಯ ಪಕ್ಷ ಬಿಡುವುದಿಲ್ಲ. ಆದರೆ ಚುನಾವಣೆ ಎದುರಿಸುವುದಿಲ್ಲ. ಹೀಗೆ ಪರೋಕ್ಷವಾಗಿ ಹೈಕಮಾಂಡ್ ಮೇಲೆ ಒತ್ತಡ ಹೇರಲು ತಂತ್ರ ರೂಪಿಸಲಾಗಿದೆ.

ಸಿಎಂ ಅಭ್ಯರ್ಥಿ ಘೋಷಣೆ ಮಾಡಿದರೆ ಲಿಂಗಾಯಿತ, ಒಕ್ಕಲಿಗ ಮತಗಳು ಬರುವುದಿಲ್ಲ ಎಂಬುದು ಡಿ.ಕೆ.ಶಿವಕುಮಾರ್ ಹಾಗೂ ಮೂಲ ಕಾಂಗ್ರೆಸ್ಸಿಗರ ವಾದ. ದಲಿತ ನಾಯಕರು ಸಹ ಪಕ್ಷಕ್ಕಾಗಿ ಕೆಲಸ ಮಾಡುವುದಿಲ್ಲ. ಹೀಗಾಗಿ ಸಾಮೂಹಿಕ ನಾಯಕತ್ವಕ್ಕೆ ಮನ್ನಣೆ ನೀಡುವಂತೆ ಸಲಹೆ ನೀಡಿದ್ದಾರೆ. ಆದರೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣವನ್ನು ಕೃಷ್ಣ ಭೈರೇಗೌಡ, ಚಲುವರಾಯಸ್ವಾಮಿ ಒಂದಾಗಿಸಿದ ಬಳಿಕ ತಿಕ್ಕಾಟ ತಣ್ಣಗಾಗಿತ್ತು. ಆದರೆ ಈಗ ಘರ್ಷಣೆ ಇಲ್ಲದೇ ಇದ್ದರೂ ಎಲ್ಲವನ್ನು ಮುಕ್ತವಾಗಿ ಚರ್ಚಿಸಲು ರಾಹುಲ್ ಗಾಂಧಿ ನಿರ್ಧಾರ ಮಾಡಿದ್ದಾರೆ. ಚುನಾವಣೆ ಸಮೀಪಿಸುವ ಮುನ್ನವೇ ಎಲ್ಲಾ ಗೊಂದಲ ನಿವಾರಿಸಲು ರಾಹುಲ್ ಮುಂದಾಗಿದ್ದು ಇದಕ್ಕಾಗಿ ಉಭಯ ನಾಯಕರ ಜೊತೆ ಮಾತುಕತೆ ನಡೆಸಲು ದೆಹಲಿಗೆ ಕರೆದಿದ್ದಾರೆ.

Translate »