ಜೂ.1ರಂದು ಐದು ಗ್ಯಾರಂಟಿ ಜಾರಿಗೆ ಸಿದ್ದರಾಮಯ್ಯ ಸರ್ಕಾರ ನಿರ್ಧಾರ
News

ಜೂ.1ರಂದು ಐದು ಗ್ಯಾರಂಟಿ ಜಾರಿಗೆ ಸಿದ್ದರಾಮಯ್ಯ ಸರ್ಕಾರ ನಿರ್ಧಾರ

May 30, 2023

ಬೆಂಗಳೂರು,ಮೇ 29(ಕೆಎಂಶಿ)- ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದ ಜನತೆಗೆ ನೀಡಿದ್ದ ಗ್ಯಾರಂಟಿಗಳನ್ನು ಜೂನ್ ಒಂದರಿಂದ ಅನುಷ್ಠಾನ ಗೊಳಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ.

ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ, ಬಿಪಿಎಲ್ ಪಡಿತರ ಚೀಟಿದಾರರಿಗೆ ಮಾಸಿಕ 10 ಕೆಜಿ ಅಕ್ಕಿ, ಮಹಿಳೆಯರಿಗೆ ಸರ್ಕಾರಿ ಸಾಮಾನ್ಯ ಬಸ್ಸುಗಳಲ್ಲಿ ಉಚಿತ ಪ್ರಯಾಣ, ಮನೆ ಒಡತಿಗೆ ಮಾಸಿಕ 2000 ರೂ. ಡಿಪ್ಲೊಮಾ ಮತ್ತು ಪದವೀಧರ ನಿರುದ್ಯೋಗಿಗಳಿಗೆ ಕ್ರಮವಾಗಿ ಮಾಸಿಕ ತಲಾ 1500 ಹಾಗೂ 3000 ರೂ. ಭತ್ಯೆ ನೀಡುವ ಸಂಬಂಧ ಜೂನ್ ಒಂದರಂದು ನಡೆಯುವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ.

ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪೂರ್ಣ ಪ್ರಮಾಣದಲ್ಲಿ ಮಂತ್ರಿಮಂಡಲ ರಚಿಸಿ, ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಅನುಷ್ಠಾನಕ್ಕೆ ಚಾಲನೆ ನೀಡಿದ್ದಾರೆ. ಐದು ಗ್ಯಾರಂಟಿಗಳ ಅನುಷ್ಠಾನ ಸಂಬಂಧ ಮುಖ್ಯಮಂತ್ರಿ ಅವರು ಶಕ್ತಿ ಭವನದಲ್ಲಿ ಇಡೀ ದಿನ ಅಧಿಕಾರಿಗ ಳೊಂದಿಗೆ ಕಸರತ್ತು ನಡೆಸಿದರು. ಹಣಕಾಸು, ಸಾರಿಗೆ, ಆಹಾರ ಮತ್ತು ನಾಗರಿಕ ಪೂರೈಕೆ, ಯುವ ಸಬಲೀ ಕರಣ, ಇಂಧನ, ಕಂದಾಯ ಸೇರಿದಂತೆ ವಿವಿಧ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜೊತೆ ಸಮಾಲೋಚನೆ ನಡೆಸಿದರು. ಜೂನ್ ಒಂದರಿಂದಲೇ ಗ್ಯಾರಂಟಿಗಳು ಅನುಷ್ಠಾನಗೊಳ್ಳಲೇಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿರುವ ಮುಖ್ಯಮಂತ್ರಿ, ಸಂಪುಟ ಸಭೆಗೆ ಬರುವ ಮುನ್ನ ಸಂಬಂಧಪಟ್ಟ ಇಲಾಖೆಯವರು ವರದಿ ನೀಡುವಂತೆ ಆದೇಶಿಸಿದ್ದಾರೆ. ಯೋಜನೆ ಅನುಷ್ಠಾನಕ್ಕೆ ವಾರ್ಷಿಕ 50 ಸಾವಿರ ಕೋಟಿ ರೂ. ತಗಲುವ ಅಂದಾಜಿದ್ದು, ಇಷ್ಟು ಹಣ ವನ್ನು ವಿವಿಧ ಮೂಲಗಳಿಂದ ಕ್ರೋಢೀಕರಿಸಿ ನೀಡುವುದಾಗಿ ಹಣಕಾಸು ಇಲಾಖೆ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಸಿದ್ದ ರಾಮಯ್ಯ ತಿಳಿಸಿದ್ದಾರೆ.

ಸಂಪನ್ಮೂಲ ಕ್ರೋಢೀಕರಣ, ನಿರುಪಯುಕ್ತ ಯೋಜನೆಗಳ ಸ್ಥಗಿತಗೊಳಿಸುವುದು ಮತ್ತು ಯೋಜನಾ ಗಾತ್ರವನ್ನು ಇನ್ನು 15 ಸಾವಿರ ಕೋಟಿ ರೂ. ಹೆಚ್ಚಿಸಿ ಜುಲೈನಲ್ಲಿ ಬಜೆಟ್‍ನಲ್ಲಿ ಮಂಡಿ ಸುವುದಾಗಿಯೂ ಹೇಳಿದ್ದಾರೆ. ಅಲ್ಲದೆ ನಮ್ಮ ಯೋಜನೆ ಗಳು ಬಡ ಮತ್ತು ಮಧ್ಯಮ ವರ್ಗದವರ ಮನೆ ಬಾಗಿಲಿಗೆ ಮುಟ್ಟಬೇಕು ಎಂದಿದ್ದಾರೆ. ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 17 ದಿನ ಕಳೆದರೂ ಗ್ಯಾರಂಟಿಗಳನ್ನು ಅನುಷ್ಠಾನ ಮಾಡುತ್ತಿಲ್ಲ ಎಂದು ಬಿಜೆಪಿ ಮತ್ತು ಜೆಡಿಎಸ್ ತೀವ್ರ ಟೀಕಾ ಪ್ರಹಾರ ಮಾಡುತ್ತಿವೆ. ಗ್ಯಾರಂಟಿಗಳನ್ನು ತಕ್ಷಣವೇ ಅನುಷ್ಠಾನಗೊಳಿಸಿ ಲೋಕಸಭಾ ಚುನಾ ವಣೆಯಲ್ಲಿ 20 ಸ್ಥಾನ ಗಳಿಸಲು ಪಣ ತೊಟ್ಟಿರುವ ಕಾಂಗ್ರೆಸ್, ಇವುಗಳನ್ನು ಚಾಚೂ ತಪ್ಪದೇ ಅನುಷ್ಠಾನ ಗೊಳಿಸಿ, ಮತ ಬೇಟೆಗೆ ಸಿದ್ಧವಾಗುತ್ತಿದೆ.

Translate »