ಸಿದ್ದರಾಮಯ್ಯ ವಿರುದ್ಧ ಸೋಮಣ್ಣ, ಡಿ.ಕೆ.ಶಿವಕುಮಾರ್ ವಿರುದ್ಧ ಅಶೋಕ್
ಮೈಸೂರು

ಸಿದ್ದರಾಮಯ್ಯ ವಿರುದ್ಧ ಸೋಮಣ್ಣ, ಡಿ.ಕೆ.ಶಿವಕುಮಾರ್ ವಿರುದ್ಧ ಅಶೋಕ್

April 12, 2023

ಮೈಸೂರು,ಏ.11-ಬಿಜೆಪಿ ಹೈಕಮಾಂಡ್ ರಾಜ್ಯದ ಇಬ್ಬರು ಪ್ರಭಾವಿ ನಾಯಕರಿಗೆ ಮಹತ್ವದ ಟಾಸ್ಕ್ ನೀಡಿದೆ. ಒಂದು ವೇಳೆ ಇದರಲ್ಲಿ ಈ ಇಬ್ಬರು ನಾಯಕರು ಯಶಸ್ವಿ ಯಾದರೆ ಇವರಿಗೆ ಹೈಕಮಾಂಡ್ ಬಹು ದೊಡ್ಡ ಬಳುವಳಿಯನ್ನೇ ನೀಡುವ ಸಾಧ್ಯತೆ ಗಳಿವೆ. ಅಂತಹ ಸವಾಲಿಗೆ ಸಜ್ಜಾಗಿರುವ ನಾಯಕರೆಂದರೆ ಸಚಿವರಾದ ಆರ್. ಅಶೋಕ್ ಮತ್ತು ವಿ. ಸೋಮಣ್ಣ. ಆರ್. ಅಶೋಕ್ ಇದು ವರೆಗೆ ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಈ ಬಾರಿಯೂ ಇದೇ ಕ್ಷೇತ್ರ ದಿಂದ ಅವರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸುವುದರೊಂದಿಗೆ ರಾಜ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕನಕಪುರ ದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಒಕ್ಕಲಿಗರ ಪ್ರಾಬಲ್ಯ ವಿರುವ ಈ ಕ್ಷೇತ್ರದಲ್ಲಿ ಆರ್.ಅಶೋಕ್ ಕಣಕ್ಕಿಳಿಸುವ ಮೂಲಕ ಆ ಸಮುದಾಯದ ಅಧಿಕ ಮತ ಗಳಿಸುವುದರೊಂದಿಗೆ ಹಿಂದು ತ್ವದ ನೆಲೆಯಲ್ಲಿ ಗೆಲುವು ಸಾಧಿಬಹು ದೆಂಬ ಲೆಕ್ಕಾಚಾರ ಬಿಜೆಪಿ ವರಿಷ್ಠರದ್ದಾಗಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ವಿರುದ್ಧ ಸಿ.ಪಿ. ಯೋಗೇಶ್ವರ್ ಅವರನ್ನು ಕಣಕ್ಕಿಳಿಸಲಾಗಿದೆ. ಹಾಗೆಯೇ ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದಿ ರುವ ವಿ.ಸೋಮಣ್ಣ ಅವರನ್ನು ಚಾಮರಾಜನಗರಕ್ಕೆ ಎತ್ತಂಗಡಿ ಮಾಡಲಾಗಿದೆ. ಇದರ ಜೊತೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ವರುಣಾದಿಂದ ಸ್ಪರ್ಧಿಸಲು ಟಾಸ್ಕ್ ನೀಡಲಾಗಿದೆ. ವರುಣಾ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಸಮುದಾಯ ಅತೀ ದೊಡ್ಡ ಮತ ಬ್ಯಾಂಕ್ ಆಗಿದ್ದು, ಅದನ್ನು ಸಾರಾಸಗಟಾಗಿ ಗಿಟ್ಟಿಸಿಕೊಂಡು ಸಿದ್ದರಾಮಯ್ಯರಿಗೆ ಸೆಡ್ಡು ಹೊಡೆಯುವ ತಂತ್ರಗಾರಿಕೆ ಬಿಜೆಪಿ ಹೈಕಮಾಂಡ್‍ದಾಗಿದೆ. ಇದಕ್ಕಾಗಿ ಈ ಸಮುದಾಯದ ಹಿರಿಯ ನಾಯಕ ವಿ.ಸೋಮಣ್ಣ ಅವರನ್ನು ಇಲ್ಲಿಂದ ಸ್ಪರ್ಧೆಗಿಳಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಇಬ್ಬರು ನಾಯಕರಿಗೆ ಮಾತ್ರ ಎರಡು ಕಡೆ ಸ್ಪರ್ಧಿಸುವ ಸವಾಲು ಕಲ್ಪಿಸಲಾಗಿದೆ. ಇದರೊಂದಿಗೆ ಈ ನಾಯಕರ ಸಾಮಥ್ರ್ಯ ಪರೀಕ್ಷೆಗೆ ಹೈಕಮಾಂಡ್ ಮುಂದಾಗಿರುವುದು ರಾಜ್ಯ ಬಿಜೆಪಿ ವಲಯದಲ್ಲಿ ಅಚ್ಚರಿ ಮೂಡಿಸಿದೆ.

Translate »