ಐದು ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ;  ಎಂ.ಬಿ.ಪಾಟೀಲ್ ಹೇಳಿಕೆಗೆ ವರಿಷ್ಠರ ವಾರ್ನಿಂಗ್…! ಯಾರೂ ಬಾಯ್ಬಿಡಬೇಡಿ
News

ಐದು ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ; ಎಂ.ಬಿ.ಪಾಟೀಲ್ ಹೇಳಿಕೆಗೆ ವರಿಷ್ಠರ ವಾರ್ನಿಂಗ್…! ಯಾರೂ ಬಾಯ್ಬಿಡಬೇಡಿ

May 24, 2023

ಬೆಂಗಳೂರು, ಮೇ 23 (ಕೆಎಂಶಿ)- ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆಯ ಬಗ್ಗೆ ಸಚಿವ, ಪಕ್ಷದ ಶಾಸಕರು ಸಾರ್ವಜನಿಕ ವಾಗಿ ಹೇಳಿಕೆ ನೀಡಕೂಡದು. ಒಂದು ವೇಳೆ ಹೇಳಿಕೆ ನೀಡಿದರೆ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಕಾಂಗ್ರೆಸ್ ವರಿಷ್ಠರು ನೀಡಿದ್ದಾರೆ.

ಸಚಿವ ಎಂ.ಬಿ.ಪಾಟೀಲ್ ಮೈಸೂರಿನಲ್ಲಿ ಸಿದ್ದರಾಮಯ್ಯ ಅವರೇ ಮುಂದಿನ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ನೀಡಿ ರುವ ಹೇಳಿಕೆ ಪಕ್ಷ ಮತ್ತು ಸರ್ಕಾರದಲ್ಲಿ ಭಾರೀ ವಿವಾದವನ್ನೇ ಎಬ್ಬಿಸಿದೆ. ಸಚಿವರ ಹೇಳಿಕೆ ಬಗ್ಗೆ ಸ್ವತಃ ಶಿವಕುಮಾರ್ ಅವರೇ ಮುಖ್ಯಮಂತ್ರಿ ಬಳಿ, ದೆಹಲಿಯಲ್ಲಿ ನಡೆದಿರುವ ಮಾತುಕತೆಯ ಬಗ್ಗೆ ಯಾರೂ ಚಕಾರ ಎತ್ತಬಾರದು. ನಮ್ಮಿಬ್ಬರ ನಡುವೆ ಹುಳಿ ಹಿಂಡುವ ಕೆಲಸ ಆಗ ಬಾರದು. ಏನೇ ಇದ್ದರೂ ಮುಖಾಮುಖಿ ಚರ್ಚೆ ಮಾಡೋಣ. ಇಂತಹ ಹೇಳಿಕೆಗಳನ್ನು ನೀಡಬಾರದು ಎಂದು ನಿಮ್ಮವರಿಗೆ ಎಚ್ಚರಿ ಸಿ ಎಂದಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಉಸ್ತುವಾರಿ ಹೊಣೆ ಹೊತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‍ಸಿಂಗ್ ಸುರ್ಜೆವಾಲ ಅವರು, ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಯಾರು ಚರ್ಚಿಸದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಟ ಶಿವ ರಾಜ್‍ಕುಮಾರ್ ಅವರ ಮನೆಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುರ್ಜೆವಾಲ, ಯಾರು ಅನಗತ್ಯ ಹೇಳಿಕೆ ನೀಡ ಬಾರದು. ಒಳ್ಳೆಯ ಆಡಳಿತ ನಡೆಸುವುದಷ್ಟೇ ನಮ್ಮ ಆದ್ಯತೆ. ಇದರ ಕಡೆಗೆ ಗಮನ ಕೊಡಿ. ಇದರ ಹೊರತಾಗಿ ಒಬ್ಬರನ್ನೊಬ್ಬರು ಎತ್ತಿಕಟ್ಟುವ ಕೆಲಸ ಮಾಡಬೇಡಿ. ಪಕ್ಷದ ಸಚಿವರು, ಶಾಸಕರು ನೀಡುವ ಹೇಳಿಕೆಗಳನ್ನು ಎಐಸಿಸಿ ಗಮನಿಸುತ್ತದೆ. ಯಾವುದೇ ತೀರ್ಮಾನ ಗಳನ್ನು ಪಕ್ಷದ ಉನ್ನತ ಘಟಕವೇ ತೆಗೆದು ಕೊಳ್ಳುತ್ತದೆ. ಇಂತಹ ಅಧಿಕಾರವನ್ನು ಯಾರ ಕೈಗೂ ನೀಡಿಲ್ಲ ಎಂದು ಖಾರವಾಗಿ ತಿಳಿಸಿ ದ್ದಾರೆ. ಎಂ.ಬಿ.ಪಾಟೀಲ್ ಹೇಳಿಕೆ ಪಕ್ಷದಲ್ಲಿ ಆಂತರಿಕವಾಗಿ ಭಾರೀ ಚರ್ಚೆಗೆ ಗ್ರಾಸ ವಾಗಿರುವುದಲ್ಲದೆ, ಕೆಲವರು ಬಹಿರಂಗ ವಾಗಿ ಅವರ ಹೇಳಿಕೆ ಟೀಕಿಸಿದ್ದಾರೆ. ಅದ ರಲ್ಲೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ಸಹೋದರ ಸಂಸದ ಡಿ.ಕೆ.ಸುರೇಶ್ ಅವರು, ನಾನು ಎಂ.ಬಿ.ಪಾಟೀಲ್ ಅವ ರಿಗೆ ತೀಕ್ಷ್ಣವಾದ ಎಚ್ಚರಿಕೆ ಕೊಡಬಲ್ಲೆ. ಆದರೆ, ಈಗ ಅದು ಬೇಡ. ಅವರ ಹೇಳಿಕೆ ಬಗ್ಗೆ ಹೆಚ್ಚಿನ ಮಾಹಿತಿ ಅಗತ್ಯವಿದ್ದರೆ, ಸುರ್ಜೆವಾಲ ಅವರನ್ನು ಕೇಳಲಿ. ಆನಂತರ ಹೇಳಿಕೆ ನೀಡಲಿ ಎಂದಿದ್ದಾರೆ. ನಿನ್ನೆ ನೀಡಿದ ಹೇಳಿಕೆಯನ್ನು ಎಂ.ಬಿ. ಪಾಟೀಲ್ ಅವರು ಇಂದೂ ಸಮರ್ಥನೆ ಮಾಡಿಕೊಂಡಿದ್ದು, ಪಕ್ಷದ ವರಿಷ್ಠರು ಹೇಳಿರುವುದನ್ನೇ ನಾನು ಹೇಳಿದ್ದೇನೆ ಎಂದಿದ್ದಾರೆ. ಮುಖ್ಯ ಮಂತ್ರಿಯಾಗಿ ಸಿದ್ದ ರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಮ್ಮ ನಾಯಕರು ಎಂದು ಹೇಳಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯ ದರ್ಶಿ ಕೆ.ಸಿ.ವೇಣುಗೋಪಾಲ್ ಪತ್ರಿಕಾ ಹೇಳಿಕೆಯಲ್ಲಿ ಹೇಳಿರುವುದನ್ನೇ ಹೇಳಿ ದ್ದೇನೆ ಎಂದು ಪುನರುಚ್ಚರಿಸಿದರು. ಪವರ್ ಶೇರಿಂಗ್ ಇಲ್ಲ. ಇದ್ದರೆ, ಜನರ ಜತೆ ಮಾತ್ರ ಎಂದು ವೇಣುಗೋಪಾಲ್ ಸ್ಪಷ್ಟವಾಗಿ ತಿಳಿ ಸಿದ್ದಾರೆ. ಅಧಿಕಾರ ಹಂಚಿಕೆಯ ಸಂಧಾನ ಸೂತ್ರ ನನಗೆ ಗೊತ್ತಿಲ್ಲ. ಅವರು ನೀಡಿದ ಹೇಳಿಕೆಯನ್ನಷ್ಟೇ ಪುನರುಚ್ಚರಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಡಿ.ಕೆ.ಶಿವಕುಮಾರ್ ಮಾತನಾಡಿ, ಯಾರು ಏನು ಬೇಕಾದರೂ ಹೇಳಿಕೊಳ್ಳಲಿ. ನಾನು ಆ ಬಗ್ಗೆ ಮಾತಾಡುವುದಿಲ್ಲ. ಅಧಿಕಾರ ಮತ್ತಿತರ ಪಕ್ಷದ ವಿಚಾರಗಳನ್ನು ನೋಡಿಕೊಳ್ಳಲು ಎಐಸಿಸಿ ಇದೆ. ಕಾಂಗ್ರೆಸ್ ರಾಷ್ಟ್ರೀಯ ಮುಖಂಡರು ಇದ್ದಾರೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಮಾತ್ರ ನಮ್ಮ ಆದ್ಯತೆ ಎಂದು ತಿಳಿಸಿದ್ದಾರೆ.

 

Translate »