ಪಾವಗಡ ಬಳಿ ಕಂದಕಕ್ಕೆ ಖಾಸಗಿ ಬಸ್ ಉರುಳಿ ಆರು ಮಂದಿ ಸಾವು
ಮೈಸೂರು

ಪಾವಗಡ ಬಳಿ ಕಂದಕಕ್ಕೆ ಖಾಸಗಿ ಬಸ್ ಉರುಳಿ ಆರು ಮಂದಿ ಸಾವು

March 20, 2022

ಅಧಿಕ ಸಂಖ್ಯೆಯ ಪ್ರಯಾಣ ಕರು ಹಾಗೂ ಅತೀ ವೇಗವೇ ಅಪಘಾತಕ್ಕೆ ಕಾರಣ: ಆರೋಪ
ತುಮಕೂರು, ಮಾ.೧೯-ಪ್ರಯಾಣ ಕ ರಿಂದ ತುಂಬಿ ತುಳುಕುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರು ಳಿದ ಪರಿಣಾಮ ಮೂವರು ವಿದ್ಯಾರ್ಥಿ ಗಳೂ ಸೇರಿದಂತೆ ೬ ಮಂದಿ ಮೃತಪಟ್ಟು, ೩೫ಕ್ಕೂ ಹೆಚ್ಚು ಮಂದಿ ಗಾಯಗೊಂಡ ದುರ್ಘಟನೆ ಪಾವಗಡ ತಾಲೂಕು ಪಳವಳ್ಳಿ ಗ್ರಾಮದ ಬಳಿ ಶನಿವಾರ ಸಂಭವಿಸಿದೆ.
ಅಪಘಾತದಲ್ಲಿ ವಿದ್ಯಾರ್ಥಿಗಳಾದ ವೈ. ಎನ್.ಹೊಸಕೋಟೆಯ ಕಲ್ಯಾಣ್ (೧೯), ಪೋತಗಾನಹಳ್ಳಿಯ ಅಮೂಲ್ಯ (೧೬), ಈಕೆಯ ಸಹೋದರಿ ಹರ್ಷಿತಾ (೨೧), ಆಂಧ್ರಪ್ರದೇಶದ ಬೆತ್ತರಹಳ್ಳಿ ಗ್ರಾಮದ ಶಾನ್‌ವಾಜ್ (೨೦), ಶೂಲನಾಯಕನಹಳ್ಳಿಯ ಅಜೀತ್ (೨೭) ಹಾಗೂ ಮತ್ತೋರ್ವ ಪ್ರಯಾ ಣ ಕ ಮೃತಪಟ್ಟಿದ್ದಾರೆ.
ಅಪಘಾತ ಸ್ಥಳದಲ್ಲೇ ಬಸ್‌ನ ಅಡಿ ಸಿಲುಕಿ ಐವರು ಸ್ಥಳದಲ್ಲೇ ಮೃತ ಪಟ್ಟರೆ, ವಿದ್ಯಾರ್ಥಿನಿ ಅಮೂಲ್ಯ ಸಹೋದರಿ ಹರ್ಷಿತಾ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಂಜೆ ಮೃತಪಟ್ಟಿ ದ್ದಾರೆ. ಪಾವಗಡ, ತುಮಕೂರು ಹಾಗೂ ಬೆಂಗಳೂರಿನ ಆಸ್ಪತ್ರೆಗಳಲ್ಲಿ ೩೫ಕ್ಕೂ ಹೆಚ್ಚು ಮಂದಿ ದಾಖಲಾಗಿದ್ದು, ಹಲವರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿವರ: ಪಾವಗಡ ತಾಲೂಕಿನ ಪಳವಳ್ಳಿ ಸುತ್ತಮುತ್ತಲಿನ ಪ್ರದೇಶಗಳಿಗೂ ಸಮರ್ಪಕವಾದ ಬಸ್ ಸೌಕರ್ಯವಿಲ್ಲ. ಈ ಮಾರ್ಗದಲ್ಲಿ ಸಂಚರಿಸುವ ಎಸ್‌ವಿಟಿ ಖಾಸಗಿ ಬಸ್‌ನಲ್ಲಿ ವೈ.ಎಸ್.ಹೊಸಕೋಟೆಯಿಂದ ಪಾವಗಡ ಪಟ್ಟಣಕ್ಕೆ ವಿದ್ಯಾರ್ಥಿಗಳು, ಕಚೇರಿಗಳಿಗೆ ಕೆಲಸಕ್ಕೆ ಹೋಗುವವರು ಸೇರಿದಂತೆ ಅಪಾರ ಸಂಖ್ಯೆ ಪ್ರಯಾಣ ಕರು ಹತ್ತಿದ್ದಾರೆ.
ಬಸ್‌ನಲ್ಲಿ ಆಸನಗಳು ತುಂಬಿ, ಪ್ರಯಾಣ ಕರು ಫುಟ್‌ಬೋರ್ಡ್ ನಲ್ಲಿಯೂ ನಿಂತಿದ್ದಲ್ಲದೇ, ೩೦ಕ್ಕೂ ಹೆಚ್ಚು ಮಂದಿ ಬಸ್‌ನ ಟಾಪ್ ಮೇಲೂ ಕೂಡ ಕುಳಿತಿದ್ದರು. ಈ ಬಸ್‌ನಲ್ಲಿ ೧೦೦ಕ್ಕೂ ಹೆಚ್ಚು ಮಂದಿ ಪ್ರಯಾಣ ಸು ತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಈ ಬಸ್ ವೀರಮ್ಮನಹಳ್ಳಿ ದಾಟಿದ ನಂತರ ಪಳವಳ್ಳಿ ಟ್ಯಾಂಕ್ ತಿರುವಿನಲ್ಲಿ ಅತೀ ವೇಗವಾಗಿ ಚಲಿಸುತ್ತಿದ್ದ ಬಸ್, ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಟಾಪ್ ಮೇಲೆ ಇದ್ದವರೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾರೆ. ಫುಟ್‌ಬೋರ್ಡ್ನಲ್ಲಿದ್ದವರು ಬಸ್‌ನ ಅಡಿ ಸಿಲುಕಿ ಐವರು ಸ್ಥಳದಲ್ಲೇ ಮೃತಪಟ್ಟರೆ, ಹಲವರು ತೀವ್ರ ಗಾಯಗಳಿಂದ ಹೊರ ಬರಲಾರದೇ ನರಳುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಉಳಿದಂತೆ ಬಸ್‌ನಲ್ಲಿದ್ದ ಪ್ರಯಾಣ ಕರು ಕಿಟಕಿ ಮೂಲಕ ಹೊರ ಬಂದಿದ್ದಾರೆ.
ಸ್ಥಳೀಯ ಗ್ರಾಮಸ್ಥರು ಹಲವು ಪ್ರಯಾಣ ಕರನ್ನು ಬಸ್‌ನಿಂದ ಹೊರ ತಂದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಪಾವಗಡ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಗಾಯಾಳುಗಳನ್ನು ಆಂಬುಲೆನ್ಸ್ ಮಾತ್ರವಲ್ಲದೆ, ಸಿಕ್ಕ ಸಿಕ್ಕ ವಾಹನಗಳಲ್ಲಿ ಆಸ್ಪತ್ರೆಗಳಿಗೆ ರವಾನಿಸಿದ್ದಾರೆ. ಪಾವಗಡ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ತೀವ್ರವಾಗಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ, ತುಮಕೂರು ಹಾಗೂ ಬೆಂಗಳೂರಿಗೆ ರವಾನಿಸಲಾಗಿದೆ. ಪಾವಗಡದ ಕೆಲವು ಖಾಸಗಿ ವೈದ್ಯರೂ ಕೂಡ ಸರ್ಕಾರಿ ಆಸ್ಪತ್ರೆಗೆ ಧಾವಿಸಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಸರ್ಕಾರಿ ವೈದ್ಯರಿಗೆ ಸಹಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಾವಗಡದಿಂದ ಪಳವಳ್ಳಿ ಗ್ರಾಮದ ಕಡೆಗೆ ಸಾರಿಗೆ ವ್ಯವಸ್ಥೆ ಸಮರ್ಪಕ ವಾಗಿ ಇಲ್ಲದ ಕಾರಣ ಬೆಳಗ್ಗೆ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿ ಗಳು, ಕಚೇರಿಗಳಿಗೆ ತೆರಳುವವರು ಹಾಗೂ ಪಾವಗಡ ಪಟ್ಟಣಕ್ಕೆ ಕೂಲಿ ಕೆಲಸಕ್ಕೆ ತೆರಳುವವರು ಇದ್ದ ಏಕೈಕ ಬಸ್‌ನಲ್ಲೇ ಅನ್ಯ ಮಾರ್ಗವಿಲ್ಲದೆ ಹತ್ತಿದ್ದರು ಎಂದು ಹೇಳಲಾಗಿದೆ. ಪ್ರತೀ ದಿನ ಈ ಬಸ್‌ನಲ್ಲಿ ಇದೇ ರೀತಿ ಪ್ರಯಾಣ ಕರು ಟಾಪ್ ಮೇಲೂ ಪ್ರಯಾಣ ಸುತ್ತಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಪಾವಗಡ ಕಾಂಗ್ರೆಸ್ ಶಾಸಕ ಎಂ.ವೆAಕಟರಮ ಣಪ್ಪ, ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಳಿಗೆ ಹಾಗೂ ಗಾಯಾಳುಗಳಿಗೆ ಸಾಂತ್ವನ ಹೇಳಿದರು. ತುಮಕೂರು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಜಿಲ್ಲಾ ಎಸ್ಪಿ ರಾಹುಲ್‌ಕುಮಾರ್ ಶಹಾಪುರವಾಡ್ ಭೇಟಿ ನೀಡಿದ್ದರು. ಸಂಜೆ ವೇಳೆಗೆ ಸಾರಿಗೆ ಸಚಿವ ಶ್ರೀರಾಮುಲು ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಂತರ ಸಾರಿಗೆ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಅಪಘಾತ ಸಂಭವಿಸುತ್ತಿದ್ದAತೆಯೇ ಬಸ್‌ನ ಚಾಲಕ ಹಾಗೂ ನಿರ್ವಾಹಕ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೃತರ ಕುಟುಂಬಕ್ಕೆ ೫ ಲಕ್ಷ ಪರಿಹಾರ
ತುಮಕೂರು: ಪಾವಗಡ ತಾಲೂಕು ಪಳವಳ್ಳಿ ಗ್ರಾಮದ ಬಳಿ ನಡೆದ ಅಪ ಘಾತದಲ್ಲಿ ಮೃತಪಟ್ಟವರ ಕುಟುಂಬ ದವರಿಗೆ ತಲಾ ೫ ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ ೫೦ ಸಾವಿರ ರೂ. ಪರಿಹಾರ ನೀಡುವುದಾಗಿ ಸಾರಿಗೆ ಸಚಿವ ಶ್ರೀರಾಮುಲು ಘೋಷಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾತ ನಾಡಿದ ಸಚಿವರು, ತಮಗೆ ಬಂದಿ ರುವ ವರದಿಯಂತೆ ಬಸ್‌ನಲ್ಲಿ ಓವರ್ ಲೋಡ್ ಇತ್ತು. ಟಾಪ್ ಮೇಲೂ ಪ್ರಯಾ ಣ ಕರು ಕುಳಿತಿದ್ದರು. ಇಂತಹ ಸಂದರ್ಭ ದಲ್ಲಿ ಯಾವ ವೇಗದಲ್ಲಿ ಬಸ್ ಓಡಿಸ ಬೇಕು ಎಂಬ ಪರಿಜ್ಞಾನ ಚಾಲಕನಿಗಿರ ಬೇಕಾಗಿತ್ತು. ಈ ಘಟನೆಯಲ್ಲಿ ಚಾಲಕ ನೊಬ್ಬನಿಗೆ ಮಾತ್ರವಲ್ಲ, ಬಸ್ ಮಾಲೀಕ ನಿಗೂ ಶಿಕ್ಷೆಯಾಗಬೇಕಾಗುತ್ತದೆ ಎಂದರು. ಈ ಭಾಗದಲ್ಲಿ ಸಂಚರಿಸುವ ಖಾಸಗಿ ಬಸ್‌ಗಳ ಲೈಸೆನ್ಸ್ ರದ್ದು ಮಾಡಿದರೆ ಮಾತ್ರ ಅವರಿಗೆ ಬುದ್ಧಿ ಬರುತ್ತದೆ. ಕೇವಲ ಲಾಭದ ಆಸೆಗಾಗಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಜನರ ಪ್ರಾಣಕ್ಕೆ ಕುತ್ತು ತಂದರೆ ಅದನ್ನು ಕ್ಷಮಿಸಲಾಗುವುದಿಲ್ಲ ಎಂದರು.

 

 

 

Translate »