ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆಗೆ ನಮ್ಮ ವಿರೋಧವಿಲ್ಲ
ಮೈಸೂರು

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆಗೆ ನಮ್ಮ ವಿರೋಧವಿಲ್ಲ

March 20, 2022

ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ

ನೈತಿಕ ವಿಚಾರಗಳನ್ನು ಮಕ್ಕಳಿಗೆ ಕಲಿಸುವುದು ತಪ್ಪಲ್ಲ

ಒಟ್ಟಾರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕಷ್ಟೇ

ಬೆಂಗಳೂರು,ಮಾ.೧೯(ಕೆಎAಶಿ)-ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರಿಸಲು ತಮ್ಮ ವಿರೋಧವಿಲ್ಲ ಎಂದು ವಿಧಾನಸಭೆಯ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ನೈತಿಕ ವಿಷಯವನ್ನು ಶಾಲಾ ಮಕ್ಕಳಿಗೆ ಕಲಿ ಸಲು ನಮ್ಮ ತಕರಾರು ಇಲ್ಲ. ನಾವು ಸಂವಿಧಾನ ಮತ್ತು ಜಾತ್ಯತೀತತೆಯಲ್ಲಿ ನಂಬಿಕೆ ಇಟ್ಟವರು ಎಂದಿದ್ದಾರೆ.

ಸುದ್ದಿಗಾರರೊAದಿಗೆ ಮಾತನಾ ಡಿದ ಅವರು, ಮಕ್ಕಳಿಗೆ ಭಗವದ್ಗೀತೆ, ಖುರಾನ್, ಬೈಬಲ್ ಯಾವುದನ್ನಾದರೂ ಹೇಳಿಕೊಡಲಿ, ಒಟ್ಟಾರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕಾದ್ದು ಮುಖ್ಯ. ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗಿ ಉತ್ತಮ ಶಿಕ್ಷಣ ಸಿಗಬೇಕು. ಭಗವದ್ಗೀತೆ ಹೇಳಿಕೊಟ್ಟರೆ ತಪ್ಪೇನಿಲ್ಲ ಎಂದರು.

ನಮಗೂ ಮನೆಯಲ್ಲಿ ರಾಮಾಯಣ, ಮಹಾಭಾರತ, ಭಗ ವದ್ಗೀತೆ ಹೇಳಿಕೊಟ್ಟಿದ್ದಾರೆ. ನಾವೇನು ಹಿಂದೂಗಳಲ್ಲವೇ? ಹಳ್ಳಿಗಳ ನಾಟಕಗಳಲ್ಲಿ ಇವುಗಳನ್ನು ಹಾಡೋದು ನೋಡಿದ್ದೇವೆ. ನಾವು ಭಗವದ್ಗೀತೆ, ಖುರಾನ್, ಬೈಬಲ್ ಇವು ಯಾವುದಕ್ಕೂ ವಿರೋಧ ಮಾಡಲ್ಲ. ನಮ್ಮದು ಬಹು ಸಂಸ್ಕöÈತಿಯ ದೇಶ, ಶಿಕ್ಷಣದಲ್ಲಿ ಕಲಿಸುವ ವಿಷಯ ಸಂವಿಧಾನಬದ್ಧವಾಗಿರಬೇಕು ಅಷ್ಟೆ. ಸಹಿಷ್ಣುತೆ ಮತ್ತು ಸಹ ಬಾಳ್ವೆಯಲ್ಲಿ ನಮಗೆ ನಂಬಿಕೆ ಇದೆ. ಕಾಶ್ಮೀರಿ ಫೈಲ್ಸ್ ಸಿನಿಮಾ ಮೂಲಕ ಸತ್ಯ ತೋರಿಸಿದರೆ ಯಾರಿಗೂ ತೊಂದರೆ ಇಲ್ಲ. ಕಾಶ್ಮೀರದಲ್ಲಿ ಭಯೋ ತ್ಪಾದಕರು ಏನೆಲ್ಲಾ ಮಾಡಿದರು, ಕಾಶ್ಮೀರಿ ಪಂಡಿತರಿಗೆ ಏನು ತೊಂದರೆ ಮಾಡಿದರು, ಆ ಕಾಲದಲ್ಲಿ ಯಾರ ಸರ್ಕಾರ ಇತ್ತು? ಇದನ್ನೆಲ್ಲ ತೋರಿಸಬೇಕು. ಸತ್ಯ ಹೇಳಿದರೆ ಯಾರಿಗೂ ಸಮಸ್ಯೆ ಇಲ್ಲ. ಇದರ ಜೊತೆಗೆ ಲಿಖಿಂಪುರ್‌ನ ಹಿಂಸಾಚಾರದ ಸಿನಿಮಾವನ್ನು ಮಾಡಿ ಜನರಿಗೆ ತೋರಿಸಲಿ. ನಾನು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿದ್ದು ತುಂಬಾ ಕಡಿಮೆ, ಬಹುತೇಕ ಸಿನಿಮಾ ಗಳನ್ನು ನಾನು ನೋಡಿಲ್ಲ, ಅದರಲ್ಲಿ ಇದೂ ಒಂದು. ಸಿನಿಮಾ ನೋಡಲೇ ಬೇಕು ಅಂತ ಎಲ್ಲಿದೆ? ನಮ್ಮದು ಮೃದು ಹಿಂದೂತ್ವ ವಾಗಲೀ, ಕಠೋರ ಹಿಂದುತ್ವವಾಗಲೀ ಅಲ್ಲ. ನಾವು ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟಿದ್ದೇವೆ. ಸಂವಿಧಾನ ಹೇಳಿದಂತೆ ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತೇವೆ. ಅದು ಇತರೆ ಧರ್ಮಗಳಾದ ಕ್ರಿಶ್ಚಿಯನ್ ಧರ್ಮ ಆಗಿರಲಿ, ಮುಸ್ಲಿಂ ಧರ್ಮ ಆಗಿರಲಿ, ಸಿಖ್ ಧರ್ಮವಾಗಿರಲಿ, ಪಾರ್ಸಿ ಧರ್ಮವಾಗಿರಲಿ, ಬೌದ್ಧ ಧರ್ಮ ಆಗಿರಲಿ ಎಲ್ಲರನ್ನು ಸಮಾನವಾಗಿ ಕಾಣುತ್ತೇವೆ.

ಹಿಜಾಬ್ ತೀರ್ಪಿನ ಬಗ್ಗೆ ಅಸಮಾಧಾನ ಇರುವವರು ಬಂದ್ ಮಾಡಿದ್ದಾರೆ, ಆದರೆ ನ್ಯಾಯಾಂಗದ ನಿರ್ಣಯವನ್ನು ಯಾರೂ ಕೂಡ ವಿರೋಧ ಮಾಡಬಾರದು. ಹಿಂದೂ ಧಾರ್ಮಿಕ ಕಾರ್ಯ ಕ್ರಮಗಳ ಸ್ಥಳದಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾ ರದು ಎಂಬ ಅಭಿಯಾನದ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ಧರ್ಮವಾಗಿರಲಿ ಅವರು ಕೋಮುವಾದ ಮಾಡ ಕೂಡದು. ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದರು.

ಪಠ್ಯದಲ್ಲಿ ಭಗವದ್ಗೀತೆ: ಮುಖ್ಯಮಂತ್ರಿ ಬೊಮ್ಮಾಯಿ ಸುಳಿವು

ಯಾದಗಿರಿ,ಮಾ.೧೯-ಮುಂದಿನ ದಿನಗಳಲ್ಲಿ ಶಾಲಾ ಪಠ್ಯಕ್ರಮದಲ್ಲಿ ‘ಭಗವದ್ಗೀತೆ’ಯನ್ನು ಪರಿಚಯಿಸುವ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಳಿವು ನೀಡಿದ್ದಾರೆ. ಶೋರಾಪುರ ತಾಲೂಕಿನ ದೇವತ್ಕಲ್ ಗ್ರಾಮದ ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಬೊಮ್ಮಾಯಿ, ವಿದ್ಯಾರ್ಥಿಗೆ ನೈತಿಕ ಶಿಕ್ಷಣ ಕಲಿಯಲು ನೆರವಾಗುವ ನೈತಿಕ ಉದ್ದೇಶ ಇರುವುದರಿಂದ ಗುಜರಾತ್ ಸರ್ಕಾರ ಇದೇ ರೀತಿಯ ನಿರ್ಧಾರ ಕೈಗೊಂಡಿದೆ.

ಶಿಕ್ಷಣ ಇಲಾಖೆಯು ಈ ಕುರಿತು ಅಧ್ಯಯನ ನಡೆಸಿ ವರದಿಯನ್ನು ಸಂಪುಟದ ಮುಂದೆ ಮಂಡಿಸಿ ನಂತರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು. ಇದೇ ವೇಳೆ ನೈತಿಕ ಬೋಧನೆ ಭಗವದ್ಗೀತೆಯಲ್ಲಿ ಮಾತ್ರವೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಹಿಂದಿನAತೆ ನೈತಿಕ ಶಿಕ್ಷಣವನ್ನು ಬೋಧಿಸುವ ಇತರ ಪುಸ್ತಕಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಹೇಳಿದರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ಸರ್ಕಾರ ನಿರ್ಲಕ್ಷಿಸಿಲ್ಲ ಮತ್ತು ನಂಜುAಡಪ್ಪ ಸಮಿತಿ ಶಿಫಾರಸುಗಳ ಪ್ರಕಾರ ಅನುದಾನ ಬಿಡುಗಡೆ ಮಾಡುತ್ತಿದೆ ಎಂದರು. ಪಾವಗಡದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಲಿದೆ ಎಂದು ಮತ್ತೊಂದು ಪ್ರಶ್ನೆಗೆ ಸಿಎಂ ಪ್ರತಿಕ್ರಿಯೆ ನೀಡಿದರು.

Translate »