ಕಾವೇರಿ ಜಲಾನಯನ ಪ್ರದೇಶದ 173 TMC ನೀರು ಬಳಕೆಗೆ ಕೇಂದ್ರ ಅಧಿಸೂಚನೆ ಹೊರಡಿಸಲಿ
ಮೈಸೂರು

ಕಾವೇರಿ ಜಲಾನಯನ ಪ್ರದೇಶದ 173 TMC ನೀರು ಬಳಕೆಗೆ ಕೇಂದ್ರ ಅಧಿಸೂಚನೆ ಹೊರಡಿಸಲಿ

March 20, 2022

ಮಾಜಿ ನೀರಾವರಿ ಸಚಿವರೂ ಆದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಆಗ್ರಹ

ರಾಷ್ಟಿçÃಯ ಯೋಜನೆಯಾಗಿ ಪರಿಗಣ ಸಲು ಒತ್ತಾಯ

ಬೆಂಗಳೂರು, ಮಾ. ೧೯(ಕೆಎಂಶಿ)- ರಾಜ್ಯ ಕಾವೇರಿ ಜಲಾನಯನ ಪ್ರದೇಶದಲ್ಲಿ ನಮ್ಮ ಪಾಲಿನ ೧೭೩ ಟಿಎಂಸಿ ನೀರು ಬಳಕೆ ಯೋಜನೆಯ ಕೇಂದ್ರ ಸರ್ಕಾರ ನೋಟಿಫಿಕೇಷನ್ ಹೊರಡಿಸಬೇಕೆಂದು ಮಾಜಿ ಜಲಸಂಪನ್ಮೂಲ ಸಚಿವ ಹಾಗೂ ಕೆಪಿಸಿಸಿ ಚುನಾವಣಾ ಪ್ರಚಾರ ಅಧ್ಯಕ್ಷ ಎಂ.ಬಿ. ಪಾಟೀಲ್ ಇಂದಿಲ್ಲಿ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಇದ್ದು, ಈ ಯೋಜನೆ ನೋಟಿಫಿಕೇಶನ್ ಹೊರಡಿಸಬೇಕಿದೆ. ನಂತರ ಇದನ್ನು ರಾಷ್ಟಿçÃಯ ಯೋಜನೆ ಎಂದು ಕೇಂದ್ರ ಸರ್ಕಾರ ಪರಿಗಣ ಸಬೇಕು ಎಂದರು.

೨ ಲಕ್ಷ ಹೆಕ್ಟೇರ್ ಪ್ರದೇಶ ಹಾಗೂ ನೋಟಿಫಿಕೇಶನ್ ಆದರೆ ಮಾತ್ರ ರಾಷ್ಟಿçÃಯ ಯೋಜನೆ ಎಂದು ಅರ್ಹತೆ ಪಡೆದುಕೊಳ್ಳುತ್ತೇವೆ. ಮೇಕೆದಾಟು ಯೋಜನೆಗೆ ಪರಿಸರ ಇಲಾಖೆ ಅನುಮತಿ ದೊರಕಿಸಿಕೊಡಬೇಕು. ಕಾವೇರಿ ನಿರ್ವಹಣಾ ಪ್ರಾಧಿ ಕಾರದ ಏಳೆಂಟು ಸಭೆಗಳಲ್ಲಿ ಈ ವಿಚಾರ ಬಂದು ಚರ್ಚೆ ಆಗಿದೆ ಅಷ್ಟೆ. ಅದಾದ ನಂತರ ಯಾವ ನಿರ್ಧಾರಕ್ಕೂ ಬಂದಿಲ್ಲ. ಕೃಷ್ಣ, ಮೇಕೆದಾಟು, ಮಹದಾಯಿ ಹಾಗೂ ನದಿ ಜೋಡಣೆ ವಿಚಾರವಾಗಿ ಕೇಂದ್ರ ಸರ್ಕಾರದ ಬಳಿ ಸರ್ವಪಕ್ಷ ನಿಯೋಗವನ್ನು ಕರೆದೊಯ್ಯಬೇಕು ಎಂದಿದ್ದೇವೆ. ನಮ್ಮ ಎಲ್ಲ ನಿಲುವಿಗೆ ಮುಖ್ಯಮಂತ್ರಿಗಳು ಒಪ್ಪಿದ್ದು, ಈ ವಿಚಾರವಾಗಿ ಸಾಕಷ್ಟು ವಿಳಂಬವಾಗುತ್ತಿದ್ದು, ಆದಷ್ಟು ಬೇಗ ಮಾಡಬೇಕು ಎಂದಿದ್ದೇವೆ. ಅಗತ್ಯ ಬಿದ್ದರೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲಾಗು ವುದು ಎಂದು ತಿಳಿಸಿದ್ದಾರೆ ಎಂದು ಎಂ.ಬಿ.ಪಾಟೀಲ್ ಉತ್ತರಿಸಿದರು.

ಮೇಕೆದಾಟು ಯೋಜನೆಗೆ ತಮಿಳುನಾಡು ಆಕ್ಷೇಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅವರು ಎಲ್ಲ ವಿಚಾರದಲ್ಲೂ ಆಕ್ಷೇಪ ಹಾಕಿದ್ದಾರೆ. ಕೃಷ್ಣ ವಿಚಾರದಲ್ಲಿ ಆಂಧ್ರಪ್ರದೇಶ ಕೂಡ ಹಾಕಿದೆ. ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಹಾಕಿದ್ದರೂ ಈ ಯೋಜ ನೆಗೆ ನ್ಯಾಯಾಲಯ ತಡೆಯಾಜ್ಞೆ ಕೊಟ್ಟಿದೆಯೇ? ಇಲ್ಲ.
ಅರ್ಜಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ಕೊಟ್ಟಿಲ್ಲ ಎಂದರೆ ಈ ಯೋಜನೆ ಮಾಡ ಬಹುದು. ಕೃಷ್ಣ ವಿಚಾರದಲ್ಲಿ ೨೦೧೧ರಲ್ಲಿ ಅರ್ಜಿ ಹಾಕಿದಾಗ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಂತಿಲ್ಲ ಎಂದು ತಡೆಯಾಜ್ಞೆ ನೀಡಲಾಗಿತ್ತು. ಆದರೆ ಈ ವಿಚಾರದಲ್ಲಿ ಹಾಗೇನೂ ಇಲ್ಲ’ ಎಂದರು. ‘ಮೇಕೆದಾಟು ಯೋಜನೆಗೆ ೧ ಸಾವಿರ ಕೋಟಿ ಘೋಷಣೆ ಮಾಡಿ ಯಾವ ಪ್ರಯೋಜನವಾಗುತ್ತದೆ. ಪರಿಸರ ಇಲಾಖೆ ಪಡೆಯದೆ ಹಣ ಘೋಷಿಸಿದರೆ ಏನು ಉಪಯೋಗ? ಮಹದಾಯಿಗೆ ೧ ಸಾವಿರ ಕೋಟಿ ಘೋಷಣೆ ಆಗಿದೆ. ಅಲ್ಲೂ ಡಿಪಿಆರ್ ಆಗಿ, ಪರಿಸರ ಇಲಾಖೆ ಅನುಮತಿ ಬೇಕಾಗಿದೆ. ಇದಕ್ಕೆ ಒಂದು ವರ್ಷ ಸಮಯಬೇಕಾಗುತ್ತದೆ. ಇನ್ನು ತುಂಗಭದ್ರಾ ರಿಸರ್ವರ್‌ಗೆ ನಾವು ಆಂಧ್ರ ಹಾಗೂ ತೆಲಂಗಾಣ ಅನುಮತಿ ಪಡೆಯಬೇಕಾಗಿದ್ದು, ಅಲ್ಲಿ ೧ ಸಾವಿರ ಕೋಟಿ ಘೋಷಣೆ ಮಾಡಿದೆ. ಇದೆಲ್ಲವೂ ಕಣ್ಣೊರೆಸುವ ತಂತ್ರ. ಇದರಲ್ಲಿ ಆಗಬೇಕಿರುವ ಕೆಲಸ ಆಗದೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಚುನಾವಣಾ ಪ್ರಚಾರ ಅಧ್ಯಕ್ಷನಾಗಿ ಮಾ.೨೮ರಂದು ಅಧಿಕಾರ ವಹಿಸಿಕೊಳ್ಳಲಿದ್ದು, ಅಂದು ನಡೆಯುವ ಸಭೆಯಲ್ಲಿ ರಾಜ್ಯ ಮತ್ತು ರಾಷ್ಟಿçÃಯ ನಾಯಕರು ಭಾಗವಹಿಸಲಿದ್ದಾರೆ ಎಂದರು. ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮಾಡುವುದಿಲ್ಲ. ನಾವು ಬಹುಮತ ಪಡೆದ ನಂತರ ಶಾಸಕರ ಅಭಿಪ್ರಾಯಗಳಿಗೆ ಮನ್ನಣೆ ನೀಡಿ, ವರಿಷ್ಠರು ನಾಯಕರು ಯಾರು ಎಂಬುದನ್ನು ನಿರ್ಧರಿಸಲಿದ್ದಾರೆ ಎಂದರು.

Translate »