ಮುಖ್ಯಮಂತ್ರಿಯಾಗಿ ಆರು ತಿಂಗಳಾದ ನಂತರ ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಹಂಚಿದ ಬೊಮ್ಮಾಯಿ
News

ಮುಖ್ಯಮಂತ್ರಿಯಾಗಿ ಆರು ತಿಂಗಳಾದ ನಂತರ ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಹಂಚಿದ ಬೊಮ್ಮಾಯಿ

January 25, 2022

ಬೆಂಗಳೂರು, ಜ.24(ಕೆಎಂಶಿ)- ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ ಕೊಂಡು ಆರು ತಿಂಗಳಾದ ನಂತರ ಬಸವರಾಜ ಬೊಮ್ಮಾಯಿ ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಕೋವಿಡ್-19 ನಿರ್ವಹಣೆ ಹಾಗೂ ಸ್ವಾತಂತ್ರ್ಯ ದಿನಾಚರಣೆಯಂದು ಬಾವುಟ ಹಾರಿಸಲೆಂದು ನಿಯೋಜಿಸಲಾಗಿದ್ದ ಬಹುತೇಕ ಸಚಿವರುಗಳಿಗೆ ಅದೇ ಜಿಲ್ಲೆಯ ಉಸ್ತುವಾರಿ ದೊರೆತಿದೆ. ಬೆಂಗಳೂರು ಜಿಲ್ಲಾ ಉಸ್ತುವಾರಿ ವಹಿಸಿಕೊಳ್ಳಲು ಕೆಲವು ಸಚಿವರಲ್ಲಿ ಭಾರೀ ಪೈಪೆÇೀಟಿ ನಡೆದಿತ್ತು. ಆದರೆ ಇದರ ಹೊಣೆಗಾರಿಕೆಯನ್ನು ಮುಖ್ಯಮಂತ್ರಿಯವರು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಬೆಂಗಳೂರು ನಗರದ ಉಸ್ತುವಾರಿ ಬಯಸಿದ್ದ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಯಾವುದೇ ಜಿಲ್ಲೆಯ ಹೊಣೆಗಾರಿಕೆ ವಹಿಸಿಲ್ಲ. ಸಂಪುಟದ ಹಿರಿಯ ಸದಸ್ಯರಾಗಿರುವ ಕೆ.ಎಸ್.ಈಶ್ವರಪ್ಪ, ಮುರು ಗೇಶ್ ನಿರಾಣಿ, ಗೋವಿಂದ್ ಕಾರಜೋಳ್ ಅವರಿಗೆ ತಮ್ಮ ಸ್ವಂತ ಜಿಲ್ಲೆಗಳ ಬದಲಾಗಿ ಬೇರೆ ಜಿಲ್ಲೆಗಳ ಹೊಣೆಗಾರಿಕೆ ವಹಿಸಲಾಗಿದೆ.

ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಮೈಸೂರು ಜಿಲ್ಲಾ ಉಸ್ತು ವಾರಿ ವಹಿಸಿಕೊಂಡರೆ, ವಸತಿ ಸಚಿವ ವಿ.ಸೋಮಣ್ಣ, ಚಾಮರಾಜನಗರ ಜಿಲ್ಲೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಕೊಡಗು ಜಿಲ್ಲೆ ಉಸ್ತುವಾರಿ ವಹಿಸಲಾಗಿದೆ. ಅಬಕಾರಿ ಸಚಿವ ಕೆ. ಗೋಪಾ ಲಯ್ಯ ಅವರಿಗೆ ಹಾಸನದ ಜೊತೆಗೆ ಮಂಡ್ಯ ಜಿಲ್ಲೆಯ ಹೆಚ್ಚಿನ ಹೊಣೆಗಾರಿಕೆ ಯನ್ನು ನೀಡಲಾಗಿದೆ. ಮಂಡ್ಯ ಜಿಲ್ಲೆಯವರಾದ ರೇಷ್ಮೆ ಖಾತೆ ಸಚಿವ ನಾರಾಯಣಗೌಡ ಅವರನ್ನು ಶಿವಮೊಗ್ಗ ಜಿಲ್ಲಾ

ಉಸ್ತುವಾರಿಯನ್ನಾಗಿ ಮುಖ್ಯಮಂತ್ರಿಯವರು ನೇಮಕ ಮಾಡಿದ್ದಾರೆ. ಅಧಿಕೃತವಾಗಿ ಉಸ್ತುವಾರಿಗಳ ನೇಮಕ ಮಾಡದೆ ಜಿಲ್ಲೆಗಳಲ್ಲಿನ ಪ್ರಗತಿ ಪರಿಶೀಲನಾ ಸಭೆಗಳು ನಡೆಯದೆ ಅಭಿವೃದ್ಧಿ ಕಾರ್ಯಗಳು ಹಾಗೇ ಉಳಿದಿವೆ. ಅನ್ಯ ಕಾರಣಕ್ಕಾಗಿ ನೇಮಕ ಮಾಡಿದ್ದನ್ನೇ ನೆಪವಾಗಿಟ್ಟುಕೊಂಡು ಕೆಲವರು ಜಿಲ್ಲಾ ಪ್ರಗತಿ ಸಭೆಗಳನ್ನು ನಡೆಸಲು ಪ್ರಯತ್ನ ನಡೆಸಿದ್ದರು. ಆದರೆ ಅದಕ್ಕೆ ಜಿಲ್ಲಾಧಿಕಾರಿಗಳು ಅನುಮತಿ ನೀಡದೆ, ಮುಖ್ಯ ಕಾರ್ಯದರ್ಶಿಗಳ ಅನುಮತಿ ಪಡೆಯಿರಿ ಎಂದು ಅಧಿಕಾರಿಗಳು ಕಿವಿಮಾತು ಹೇಳಿದ್ದರು.

ಕೆಲವರು ನೆಪ ಮಾತ್ರಕ್ಕೆ ಸಭೆಗಳನ್ನು ನಡೆಸಿದರಾದರೂ ಅವು ಅಧಿಕೃತವಾಗಿ ದಾಖಲೆಗೂ ಹೋಗಿಲ್ಲ ಮತ್ತು ಅಭಿವೃದ್ಧಿಗೂ ಚಾಲನೆ ದೊರೆತಿಲ್ಲ. ಬೆಂಗಳೂರು ನಗರ, ಮೈಸೂರು ಹಾಗೂ ಬೆಳಗಾವಿ ಜಿಲ್ಲೆಗಳ ಉಸ್ತುವಾರಿಗೆ ಭಾರೀ ಪೈಪೆÇೀಟಿ ಇತ್ತು. ರಾಜಧಾನಿಯ ಉಸ್ತುವಾರಿ ಪಡೆಯಲು ಅಶೋಕ್, ಅಶ್ವತ್ಥನಾರಾಯಣ ಮತ್ತು ವಿ. ಸೋಮಣ್ಣ ಕಸರತ್ತು ನಡೆಸಿದ್ದರು. ಪ್ರವಾಸಿ ತಾಣ ಮೈಸೂರಿನ ಉಸ್ತುವಾರಿಗಾಗಿ ಸಚಿವರಾದ ಮುರುಗೇಶ್ ನಿರಾಣಿ, ವಿ.ಸೋಮಣ್ಣ ಪ್ರಯತ್ನಿಸಿದ್ದರು, ಆದರೆ ಇದು ಮತ್ತೆ ಸೋಮಶೇಖರ್‍ಗೆ ದಕ್ಕಿತು.

Translate »