ವಿವಿಧ ವಸತಿ ಯೋಜನೆಯಡಿ 10,060 ಮನೆ  ನಿರ್ಮಾಣಕ್ಕೆ ಫೆ.16ರೊಳಗೆ ಕಾರ್ಯಾದೇಶ ನೀಡಿ
ಮೈಸೂರು

ವಿವಿಧ ವಸತಿ ಯೋಜನೆಯಡಿ 10,060 ಮನೆ ನಿರ್ಮಾಣಕ್ಕೆ ಫೆ.16ರೊಳಗೆ ಕಾರ್ಯಾದೇಶ ನೀಡಿ

January 25, 2022

ಮೈಸೂರು,ಜ.24(ಆರ್‍ಕೆ)- 2021-22ನೇ ಸಾಲಿನಲ್ಲಿ ವಿವಿಧ ವಸತಿ ಯೋಜನೆ ಯಡಿ ಮಂಜೂರಾಗಿರುವ 10,060 ಮನೆ ಗಳ ನಿರ್ಮಿಸಲು ಫೆಬ್ರವರಿ 16 ರೊಳ ಗಾಗಿ ಕಾರ್ಯಾದೇಶ ನೀಡುವಂತೆ ವಸತಿ ಸಚಿವ ವಿ.ಸೋಮಣ್ಣ, ಇಂದಿಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಮೈಸೂರು ಜಿಲ್ಲೆಯ ವಸತಿ ಯೋಜನೆಗಳ ಕುರಿತು ಪ್ರಗತಿ ಪರಿ ಶೀಲನೆ ನಡೆಸಿದ ಸಚಿವರು, ಬಸವ ವಸತಿ ಯೋಜನೆ ಹಾಗೂ ಡಾ.ಬಿ.ಆರ್. ಅಂಬೇ ಡ್ಕರ್ ನಿವಾಸ ಯೋಜನೆಯಡಿ ಜಿಲ್ಲೆಗೆ 2021-22ನೇ ಸಾಲಿನಲ್ಲಿ ಮಂಜೂರಾಗಿ ರುವ 10,060 ಮನೆಗಳ ನಿರ್ಮಿಸಿ ಕೊಳ್ಳಲು ಕಾರ್ಯಾದೇಶ(ವರ್ಕ್ ಆರ್ಡರ್)ವನ್ನು ಫೆಬ್ರವರಿ 16ರೊಳಗೆ ನೀಡಬೇಕೆಂದು ಸಂಬಂಧಪಟ್ಟ ಅಧಿಕಾರಿ ಗಳಿಗೆ ತಾಕೀತು ಮಾಡಿದರು.
ಕೆ.ಆರ್.ನಗರ ಕ್ಷೇತ್ರಕ್ಕೆ 1,270 ಚಾಮುಂ ಡೇಶ್ವರಿಗೆ 1,080, ತಿ.ನರಸೀಪುರಕ್ಕೆ 1,110, ನಂಜನಗೂಡಿಗೆ 1,050, ಪಿರಿಯಾಪಟ್ಟ ಣಕ್ಕೆ 1,240, ವರುಣಾಗೆ 1,490, ಹೆಚ್.ಡಿ. ಕೋಟೆಗೆ 1,410 ಹಾಗೂ ಹುಣಸೂರು ಕ್ಷೇತ್ರಕ್ಕೆ 1,410 ಸೇರಿ ಬಸವ ವಸತಿ ಯೋಜನೆ ಯಡಿ 7,592 ಮತ್ತು ಡಾ.ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆಯಡಿ 2,468 ಮನೆಗಳನ್ನು ಮಂಜೂರು ಮಾಡ ಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿ ಗಳು ಸಚಿವರಿಗೆ ನೀಡಿದರು.

ಗ್ರಾಮೀಣ ಭಾಗದ ನಿರಾಶ್ರಿತ ಬಡಜನ ರಿಗೆ ವಸತಿ ಸೌಲಭ್ಯ ಕಲ್ಪಿಸಲು ಮಂಜೂರಾಗಿ ರುವ ಮನೆ ಹಂಚಲು ಆಯಾ ಗ್ರಾಮ ಪಂಚಾಯ್ತಿ, ಪುರಸಭೆ, ಪಟ್ಟಣ ಪಂಚಾಯ್ತಿ, ನಗರಸಭೆ ವ್ಯಾಪ್ತಿಯಲ್ಲಿ ನಿಜವಾದ ಫಲಾನು ಭವಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಆಯಾ ಕ್ಷೇತ್ರದ ಶಾಸಕರು, ಜನಪ್ರತಿನಿಧಿಗಳ ಸಮ್ಮುಖದಲ್ಲಿ ಜ.31 ರೊಳಗಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಅಂತಿಮ ಪಟ್ಟಿಯನ್ನು ವಸತಿ ಇಲಾಖೆ ಮುಖ್ಯಸ್ಥರಿಗೆ ಕಳುಹಿಸಬೇಕು, ತಡ ಮಾಡದೇ ಮಂಜೂರಾಗಿರುವ ಹೊಸ ಮನೆಗಳಿಗೆ ಪsÀಲಾನುಭವಿಗಳನ್ನು ನಿಷ್ಪಕ್ಷವಾಗಿ ಗುರ್ತಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಾರದರ್ಶಕವಾಗಿರಲಿ: ಮನೆ ಹಂಚಿಕೆ ಪ್ರಕ್ರಿಯೆ ಪಾರದರ್ಶಕವಾಗಿರಬೇಕು, ನೀವೇ ಖುದ್ದು ಭೇಟಿ ನೀಡಿ ಅವರ ಆರ್ಥಿಕ ಪರಿ ಸ್ಥಿತಿ, ಮನೆ ಇಲ್ಲದಿರುವುದನ್ನು ದೃಢಪಡಿಸಿ ಕೊಂಡು ಕುಟುಂಬದ ಒಬ್ಬರನ್ನು ಮಾತ್ರ ನಿಜವಾದ ಫಲಾನುಭವಿಯನ್ನು ಆಯ್ಕೆ ಮಾಡಬೇಕು, ಯಾವುದೇ ಸಣ್ಣ ಲೋಪ ವಾಗದಂತೆ ಪಟ್ಟಿ ತಯಾರಿಸಿ ಎಂದು ಸಚಿವರು ನಿರ್ದೇಶನ ನೀಡಿದರು.

ಫೆ.12ರಿಂದ 16ರವರೆಗೆ ಹಕ್ಕುಪತ್ರ: ಹೊಸ ಮನೆಗಳು, ಈ ಹಿಂದೆ ಮಂಜೂ ರಾಗಿರುವ ಮನೆಗಳ ಫಲಾನುಭವಿಗಳಿಗೆ ಫೆ.12ರಿಂದ 16ರವರೆಗೆ
ಹಕ್ಕುಪತ್ರಗಳನ್ನು ವಿತರಿಸಲು ತಯಾರಿ ಮಾಡಿಕೊಳ್ಳಿ, ಆಯಾ ತಾಲೂಕು ಅಥವಾ ಜಿಲ್ಲಾ ಕೇಂದ್ರದಲ್ಲಾದರೂ ಕಾರ್ಯಕ್ರಮ ಏರ್ಪಡಿಸಿ ಎಲ್ಲರನ್ನೂ ಒಟ್ಟಿಗೇ ಸೇರಿಸಿ ಸೌಲಭ್ಯ ವಿತರಣೆಗೆ ವ್ಯವಸ್ಥೆ ಮಾಡಿ ಎಂದು ಶಾಸಕರು ಮತ್ತು ಅಧಿಕಾರಿಗಳಿಗೆ ಸಲಹೆ ನೀಡಿದರು.

3 ಕಂತುಗಳಲ್ಲಿ ಸಹಾಯ ಧನ : ವಸತಿ ಯೋಜನೆಯಡಿ ಹಂಚಿಕೆಯಾದ ಮನೆ ನಿರ್ಮಿಸಿಕೊಳ್ಳಲು ಸಾಮಾನ್ಯ ವರ್ಗದವರಿಗೆ 1.20 ಲಕ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ 1.50 ರಿಂದ 1.75 ಲಕ್ಷ ರೂ. ಧನ ಸಹಾಯವನ್ನು ಸಮಾನ 3 ಕಂತುಗಳಲ್ಲಿ ನೀಡಲಿದ್ದು, ಮೊದಲ ಕಂತಿನ ಹಣವನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಕ್ರಮವಹಿಸಿ ಎಂದು ಸೋಮಣ್ಣ ಇದೇ ವೇಳೆ ತಿಳಿಸಿದರು.

ಸಮಸ್ಯೆ ಇತ್ಯರ್ಥ: ಈ ಹಿಂದೆ ಮನೆ ಮಂಜೂರಾಗಿದ್ದವರ ಪೈಕಿ ಕೆಲವರ ಹಂಚಿಕೆಯು ಬೇರೆ ಬೇರೆ ಕಾರಣಕ್ಕೆ ರದ್ದಾಗಿದ್ದು, ಸಾಫ್ಟ್‍ವೇರ್‍ನಲ್ಲೇ ಬಂದ್ ಆಗಿವೆ. ಲಾಗಿನ್ ಓಪನ್ ಆಗದ ಕಾರಣ ವಸತಿ ಯೋಜನೆ ಜಾರಿಯ ಪ್ರಗತಿಯೂ ಕುಂಠಿತವಾಗಿರುವ ಬಗ್ಗೆ ಬಹುತೇಕ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂಬಂಧ ಸರ್ಕಾರದ ಮಟ್ಟದಲ್ಲಿ ಮಾತನಾಡಿ, ಲಾಗಿನ್ ತೆರವುಗೊಳಿಸುವ ಮೂಲಕ ನಿಜವಾಧ ಫಲಾನುಭವಿಗಳಿಗೆ ವಂಚನೆಯಾಗದಂತೆ ಕ್ರಮ ವಹಿಸುವುದಾಗಿಯೂ ಸೋಮಣ್ಣ ಇದೇ ವೇಳೆ ಭರವಸೆ ನೀಡಿದರು. ಸಂಸದ ಪ್ರತಾಪ್‍ಸಿಂಹ, ಮೇಯರ್ ಸುನಂದ ಪಾಲನೇತ್ರ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಜಿ.ಟಿ.ದೇವೇಗೌಡ, ತನ್ವೀರ್‍ಸೇಠ್, ಡಾ. ಯತೀಂದ್ರ ಸಿದ್ದರಾಮಯ್ಯ, ಅಶ್ವಿನ್‍ಕುಮಾರ್, ಬಿ.ಹರ್ಷ ವರ್ಧನ್, ಅನಿಲ್ ಚಿಕ್ಕಮಾದು, ಹೆಚ್.ಪಿ. ಮಂಜುನಾಥ, ವಿಧಾನ ಪರಿಷತ್ ಸದಸ್ಯರಾದ ಎ.ಹೆಚ್.ವಿಶ್ವನಾಥ, ಸಿ.ಎನ್.ಮಂಜೇ ಗೌಡ, ಡಾ.ಡಿ.ತಿಮ್ಮಯ್ಯ ಹಾಗೂ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Translate »