ಬೆಂಗಳೂರು, ಜೂ.18(ಕೆಎಂಶಿ)-ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಮಾಸ್ಕ್, ಸಾಮಾಜಿಕ ಅಂತರ ಅನಿವಾರ್ಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಮಾಸ್ಕ್ ಬಗ್ಗೆ ಜನಜಾಗೃತಿ ಮೂಡಿಸಲು ಸ್ವತಃ ಮುಖ್ಯಮಂತ್ರಿಯವರೇ ವಿಧಾನಸೌಧದಿಂದ ಒಂದು ಕಿಲೋ ಮೀಟರ್‍ವರೆಗೆ ಮಾಸ್ಕ್ ಧರಿಸಿ, ನಡಿಗೆಯಲ್ಲಿ ಪಾಲ್ಗೊಂಡರು.
ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರ ಸಹಕಾರದಿಂದ ಕೋವಿಡ್ ತಡೆಯಲು ಸಹಕಾರವಾಗಿದೆ ಎಂದು ಮುಖ್ಯಮಂತ್ರಿಯವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಕಾಲ ಮಿಂಚಿಲ್ಲ ಎಲ್ಲಾ ಒಟ್ಟಾಗಿ ಕೊರೊನಾ ನಿಯಂತ್ರಣಕ್ಕೆ ಕೆಲಸ ಮಾಡಬೇಕು, ಹೆಚ್ಚು ಜನ ಸೇರಬಾರದು ಎಂಬ ಕಾರಣಕ್ಕೆ ಬರಿ ಸಚಿವರು ಮಾತ್ರ ಭಾಗಿಯಾಗಿದ್ದೇವೆ. ಕೊರೊನಾ ಸೋಂಕು ಹರಡುವಿಕೆ, ನಿಯಂತ್ರಣ ಮಾಡುವಲ್ಲಿ ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡುವುದು ಅನಿವಾರ್ಯ. ವಿಶ್ವ ಆರೋಗ್ಯ ಸಂಸ್ಥೆ ಮಾಸ್ಕ್ ಧರಿಸುವುದರ ಬಗ್ಗೆ ಹೇಳಿದೆ. ಇದರ ಜೊತೆಗೆ ಸಾಮಾ ಜಿಕ ಅಂತರ ಕಾಯ್ದುಕೊಂಡು, ಸ್ವಚ್ಛತೆಗೆ ಆದ್ಯತೆ ನೀಡಿದರೆ, ಈ ರೋಗವನ್ನು ದೂರವಿಡಬಹುದು ಎಂದರು.