ಸಮಾಜ ಚಿಂತಕ ಮರಿದಂಡಯ್ಯ ಬುದ್ಧ ನಿಧನಕ್ಕೆ ವಿಚಾರವಾದಿ ಹೊರೆಯಾಲ ಸಂತಾಪ
ಮೈಸೂರು

ಸಮಾಜ ಚಿಂತಕ ಮರಿದಂಡಯ್ಯ ಬುದ್ಧ ನಿಧನಕ್ಕೆ ವಿಚಾರವಾದಿ ಹೊರೆಯಾಲ ಸಂತಾಪ

July 15, 2020

ಮೈಸೂರು, ಜು.14- ಸಾಮಾಜಿಕ ಚಿಂತಕ, ಹೋರಾಟಗಾರ ಮರಿದಂಡಯ್ಯ ಬುದ್ಧ ಅವರ ನಿಧನಕ್ಕೆ ವಿಚಾರವಾದಿ ಹೊರೆಯಾಲ ದೊರೆಸ್ವಾಮಿ ಸಂತಾಪ ಸೂಚಿಸಿದ್ದಾರೆ.

ಪ್ರಗತಿಪರ ಚಿಂತಕರಾಗಿದ್ದ ಮರಿದಂಡಯ್ಯ ಮೈಸೂರಿನಲ್ಲಿ ಮಾತ್ರವಲ್ಲ, ಸುತ್ತಮುತ್ತಲಲ್ಲಿ ಎಲ್ಲೇ ಅನ್ಯಾಯದ ವಿರುದ್ಧ ಪ್ರತಿ ಭಟನೆ ನಡೆದರೂ ಅಲ್ಲಿ ಕಡ್ಡಾಯವಾಗಿ ಹಾಜರಿರುತ್ತಿದ್ದರು. ಜಾತಿ ಮತ ಭೇದವಿಲ್ಲದೆ ಎಲ್ಲಾ ಬಡವರ ಸಂಕಷ್ಟಗಳಿಗೆ ಸ್ಪಂದಿಸು ತ್ತಿದ್ದ ಮಾನವೀಯ ಹೃದಯವುಳ್ಳವರಾಗಿದ್ದರು. ಮೈಸೂರು ನಗರದ ಒಳಹೊರಗುಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದ ಬುದ್ಧ ಸದಾ ಪುರೋಗಾಮಿಯಾಗಿ ಚಿಂತಿಸುತ್ತಿದ್ದರು. ಸಮಾಜದ ಒಳಿತಿಗೆ ಹಾರೈಸುತ್ತಿದ್ದರು. ಮೈಸೂರಿನ ಚಳುವಳಿಯ ಇತಿಹಾಸದಲ್ಲಿ ಅವರಿಗೊಂದು ಸ್ಥಾನ ಎಂದೂ ಇದ್ದೇ ಇದೆ. ಅವರ ನಿಷ್ಕಲ್ಮಷ ನಗುವಿನ ನೆನಪು ಬಲ್ಲವರಿಗೆ ಎಂದೆಂದೂ ಮರೆಯಲಾಗದು. ಬುದ್ಧ ಅವರ ಪ್ರೀತಿ ತುಂಬಿದ ಬದುಕಿಗೆ ಮತ್ತು ಅವರ ನಿವ್ರ್ಯಾಜ ಮಾನವೀಯ ನಡೆಗೆ ನಮ್ಮ ನಮನ ಎಂದು ದೊರೆಸ್ವಾಮಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Translate »