ಮೈಸೂರು ದೇವರಾಜ ಮಾರುಕಟ್ಟೆಯಲ್ಲಿ ಮಣ್ಣಿನ ವೈವಿಧ್ಯತೆ
ಮೈಸೂರು

ಮೈಸೂರು ದೇವರಾಜ ಮಾರುಕಟ್ಟೆಯಲ್ಲಿ ಮಣ್ಣಿನ ವೈವಿಧ್ಯತೆ

November 13, 2020

ಮೈಸೂರು, ನ.12(ಎಂಕೆ)- ಮೈಸೂ ರಿನ ಕೇಂದ್ರ ಭಾಗದಲ್ಲಿರುವ ಪಾರಂಪರಿಕ ಕಟ್ಟಡ ದೇವರಾಜ ಮಾರುಕಟ್ಟೆಯ ಪುನರ್ ನಿರ್ಮಾಣ ಸಂಬಂಧ ಆ.21ರಂದು ಮಾರು ಕಟ್ಟೆಯ 3 ಕಡೆ ಗುಂಡಿ ತೆಗೆದು ನಡೆಸ ಲಾಗಿದ್ದ ಸಾಯಿಲ್ ಬೇರಿಂಗ್ ಕೆಪಾಸಿಟಿ (ಎಸ್‍ಬಿಸಿ) ಪರೀಕ್ಷೆಯ ವರದಿ ಬಂದಿದ್ದು, ಇದರ ಪ್ರಕಾರ ಮಣ್ಣಿನ ಪರೀಕ್ಷೆ ನಡೆಸಲಾದ ಜಾಗದಲ್ಲಿ ಮೃದು ಕಲ್ಲು(ಗಟ್ಟಿ ಮಣ್ಣು), ಸಡಿಲ ಮಣ್ಣು ಮತ್ತು ಹೇರಳವಾಗಿ ಅಂತ ರ್ಜಲ ಉಕ್ಕುತ್ತಿರುವುದಾಗಿ ವರದಿಯಾಗಿದೆ.

ಸರ್ಕಾರದ ಸೂಚನೆ ಮೇರೆಗೆ ದೇವರಾಜ ಮಾರುಕಟ್ಟೆಯಲ್ಲಿ ಅಲ್ಲಲ್ಲಿ ಗುಂಡಿಗಳನ್ನು ತೆಗೆದು ಎಸ್‍ಬಿಸಿ ಪರೀಕ್ಷೆಗಾಗಿ ಮಣ್ಣನ್ನು ಎನ್‍ಐಇ ಇಂಜಿನಿಯರಿಂಗ್ ಕಾಲೇಜಿಗೆ ಕಳುಹಿಸಲಾಗಿತ್ತು. ಸದ್ಯ ಮಣ್ಣಿನ ಎಸ್‍ಬಿಸಿ ವರದಿ ಬಂದಿದ್ದು, ಧನ್ವಂತರಿ ರಸ್ತೆ ಸಮೀ ಪದ ಬಾಂಬೆ ಟಿಫಾನಿಸ್ ಹಿಂಭಾಗದಲ್ಲಿ ಮೃದು ಕಲ್ಲು(ಗಟ್ಟಿ ಮಣ್ಣು), ಆಟೋ ಸ್ಟ್ಯಾಂಡ್ ಸಮೀಪ ಸಡಿಲ ಮಣ್ಣು ಹಾಗೂ ಚಿಕ್ಕ ಗಡಿ ಯಾರದ ಮಾರುಕಟ್ಟೆ ಪ್ರವೇಶ ದ್ವಾರದಲ್ಲಿ ಹೇರಳವಾಗಿ ಅಂತರ್ಜಲ ಉಕ್ಕುತ್ತಿರು ದಾಗಿ ವರದಿಯಲ್ಲಿ ತಿಳಿಸಲಾಗಿದೆ.

ದೇವರಾಜ ಮಾರುಕಟ್ಟೆಯ ಪುನರ್ ನಿರ್ಮಾಣ ಕುರಿತಂತೆ ಗಟ್ಟಿ ಮಣ್ಣು (ಮೃದು ಕಲ್ಲು) ಇರುವ ಸ್ಥಳದಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಸಡಿಲ ಮಣ್ಣು ಹಾಗೂ ನೀರು ಉಕ್ಕುತ್ತಿರುವ ಜಾಗದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕಾಗುತ್ತದೆ. ಅಲ್ಲದೆ ಖರ್ಚಿನಲ್ಲೂ ಶೇ.20ರಿಂದ 30ರಷ್ಟು ಹೆಚ್ಚಾಗಬಹುದು ಎಂದು ನಗರಪಾಲಿಕೆ ವಲಯ ಕಚೇರಿ-6ರ ಅಭಿವೃದ್ಧಿ ಅಧಿ ಕಾರಿ ಸಿ.ಮಂಜುನಾಥ್ ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.

ಸಡಿಲ ಮಣ್ಣನ್ನು ಸದೃಢಗೊಳಿಸಿ, ಅಂತರ್ಜಲವನ್ನು ಹೊರ ಹಾಕಲು ಚರಂಡಿ ನಿರ್ಮಿಸಬೇಕು. ಇದಕ್ಕಾಗಿ ನಿಗದಿಗಿಂತ ಹೆಚ್ಚು ವರಿ ಅವಧಿ ಕಾಮಗಾರಿ ನಡೆಸಬೇಕಿದೆ ಎಂದು ವರದಿಯನ್ನು ಸರಕಾರಕ್ಕೆ ಕಳುಹಿಸ ಲಾಗುವುದು. ಸರ್ಕಾರದಿಂದ ಅನುಮೋ ದನೆ ದೊರೆತಲ್ಲಿ ಮಾರುಕಟ್ಟೆಯ ಹಲವು ಭಾಗಗಳಲ್ಲಿ ಮಣ್ಣಿನ ಪರೀಕ್ಷೆ ನಡೆಸಬೇಕಾ ಗುತ್ತದೆ. ಈಗ ನಡೆಸಲಾಗಿರುವ ಪರೀಕ್ಷೆ ಯಲ್ಲಿ 3 ಕಡೆಗಳಲ್ಲಿ ಒಂದೊಂದು ರೀತಿ ಯಲ್ಲಿ ಫಲಿತಾಂಶ ಬಂದಿರುವುದನ್ನು ಗಮ ನಿಸಿದರೆ, ಇಲ್ಲಿನ 10 ಮೀಟರ್ ಅಂತರಕ್ಕೆ ಮಣ್ಣಿನ ಸಾಮಥ್ರ್ಯ ಬೇರೆ ಬೇರೆ ಇರು ವುದಾಗಿ ಕಂಡುಬರುತ್ತಿದೆ. ಆದ್ದರಿಂದ ಮತ್ತಷ್ಟು ಕಡೆಗಳಲ್ಲಿ ಮಣ್ಣಿನ ಸಾಮಥ್ರ್ಯ ಪರೀಕ್ಷೆ ನಡೆಸಲಾಗುವುದು ಎಂದರು.

 

 

Translate »