ಸೋಮೇಶ್ವರಪುರ ಸೀಲ್‍ಡೌನ್ ಮುಕ್ತ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು; ಆದರೂ ಅಧಿಕಾರಿಗಳಿಂದ ತೀವ್ರ ನಿಗಾ
ಮೈಸೂರು

ಸೋಮೇಶ್ವರಪುರ ಸೀಲ್‍ಡೌನ್ ಮುಕ್ತ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು; ಆದರೂ ಅಧಿಕಾರಿಗಳಿಂದ ತೀವ್ರ ನಿಗಾ

May 7, 2020

ಮೈಸೂರು,ಮೇ 6(ಆರ್‍ಕೆಬಿ)-ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಕಳೆದ 28 ದಿನಗಳಿಂದ ಸೀಲ್‍ಡೌನ್ ಆಗಿದ್ದ ಮೈಸೂರು ತಾಲೂಕಿನ ಸೋಮೇಶ್ವರಪುರ ಗ್ರಾಮ ಈಗ ಸೀಲ್‍ಡೌನ್ ಮುಕ್ತವಾ ಗಿದೆ. ಮನೆಯಿಂದ ಹಾಗೂ ಗ್ರಾಮದ ಬೀದಿಗಳಿಂದ ಹೊರಬರಲಾಗದೆ ಚಡಪಡಿಸುತ್ತಿದ್ದ ಗ್ರಾಮದÀ ಜನರಿಗೆ ಇದೀಗ ಸಮಾಧಾನವಾಗಿದೆ.

ಸೋಮೇಶ್ವರಪುರ ಮತ್ತು ಹೆಬ್ಯಾ ಗ್ರಾಮಗಳು ಅಕ್ಕ-ಪಕ್ಕದಲ್ಲೇ, ಕೇವಲ 1 ಕಿ.ಮೀ. ಅಂತರದಲ್ಲಿವೆ. ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಎರಡೂ ಗ್ರಾಮಗಳನ್ನು ಸೀಲ್‍ಡೌನ್ ಮಾಡಲಾಗಿತ್ತು. ಇದೀಗ ಸೋಮೇಶ್ವರಪುರ ಮೇ 3ರಂದು ಸೀಲ್‍ಡೌನ್‍ನಿಂದ ಮುಕ್ತಗೊಂಡಿದೆ. ಹಾಗಿದ್ದೂ ಕೊರೊನಾ ಸೋಂಕು ಮತ್ತೆ ಬಾರದಿರಲಿ ಎಂಬ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಈ ಗ್ರಾಮದ ಮೇಲೆ ಹೆಚ್ಚಿನ ನಿಗಾ ಇಟ್ಟಿದೆ. ಸೀಲ್‍ಡೌನ್‍ನಿಂದಾಗಿ ಮನೆಯಿಂದ ಹೊರಬರಲಾಗದೆ, ಜಮೀ ನಿಗೂ ಹೋಗಲಾಗದೆ ಚಡಪಡಿಸುತ್ತಿದ್ದ ಗ್ರಾಮಸ್ಥರು, ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು ವ್ಯವಸಾಯದತ್ತ ಮುಖ ಮಾಡಿದ್ದಾರೆ. ಗ್ರಾಮದಲ್ಲಿ ಎಲ್ಲರೂ ಮಾಸ್ಕ್ ಧರಿಸಿಯೇ ಓಡಾಡುತ್ತಿದ್ದಾರೆ. ವ್ಯವಸಾಯ ಚಟುವಟಿಕೆ ಮತ್ತೆ ಗರಿಗೆದರಿದೆ.

ಹಾನಿ: ಜಮೀನಿಗೆ ಹಲವು ದಿನಗಳಿಂದ ರೈತರು ಹೋಗಲಾಗದ್ದರಿಂದ ಟೊಮೆಟೊ, ಬದನೆಕಾಯಿ, ಮೆಣಸಿನಕಾಯಿ ಇನ್ನಿತರೆ ತರಕಾರಿ ಬೆಳೆಗಳು ಹಾಳಾಗಿವೆ. ಇದು ರೈತರಿಗೆ ಭಾರೀ ನಷ್ಟ ಉಂಟು ಮಾಡಿದೆ. ಸೀಲ್‍ಡೌನ್ ಮುಕ್ತವಾಗಿದ್ದರಿಂದ ಖುಷಿಯಾಗಿ ದ್ದರೂ, ಬೆಳೆ ನಷ್ಟದಿಂದಾಗಿ ತರಕಾರಿ ಬೆಳೆಗಾರರಲ್ಲಿ ಮಾತ್ರ ನೆಮ್ಮದಿ ಕಾಣದಾಗಿದೆ.

Translate »