ಚಾಮರಾಜನಗರದಲ್ಲಿ ಆತಂಕ ಸೃಷ್ಟಿಸಿದ್ದ ಮುಖ್ಯಪೇದೆಗೆ ಸೋಂಕಿಲ್ಲ
ಮೈಸೂರು

ಚಾಮರಾಜನಗರದಲ್ಲಿ ಆತಂಕ ಸೃಷ್ಟಿಸಿದ್ದ ಮುಖ್ಯಪೇದೆಗೆ ಸೋಂಕಿಲ್ಲ

May 7, 2020

ಚಾಮರಾಜನಗರ, ಮೇ 6(ಎಸ್‍ಎಸ್)- ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಬೆಳತ್ತೂರು ಗ್ರಾಮಕ್ಕೆ ಭೇಟಿ ನೀಡಿದ್ದ ಬೆಂಗ ಳೂರಿನ ಪೊಲೀಸ್ ಪೇದೆಗೆ ತಪ್ಪು ಮಾಹಿತಿ ಯಿಂದ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಆತನ ಗಂಟಲು ದ್ರವವನ್ನು ಮತ್ತೆ ಪರೀಕ್ಷೆ ಗೊಳಪಡಿಸಿದಾಗ ನೆಗೆಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ತಪ್ಪು ಮಾಹಿತಿ: ಕೋವಿಡ್-19 ಟೆಸ್ಟ್‍ಗಾಗಿ ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿದಂತೆ ನೂರಾರು ಪೊಲೀಸರ ಗಂಟಲು ದ್ರವವನ್ನು ಏಪ್ರಿಲ್ 24ರಂದು ಸಂಗ್ರ ಹಿಸಲಾಗಿತ್ತು. ಮೇ 4ರಂದು ಬೇಗೂರು ಠಾಣೆಯ ಮುಖ್ಯಪೇದೆ ವರದಿ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಹನೂರು ತಾಲೂಕು ಬೆಳ ತ್ತೂರಿಗೆ ಬಂದಿದ್ದ ಆತನನ್ನು ಕರೆಸಿಕೊಂಡು ಕೋವಿಡ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು.

ಆದರೆ, ಇಬ್ಬರು ಪೇದೆಗಳ ಹೆಸರಿನ ಮುಂದೆ ಒಂದೇ ಮೊಬೈಲ್ ಸಂಖ್ಯೆಯನ್ನು ನಮೂದಿ ಸಲಾಗಿತ್ತು. ಅದರಲ್ಲಿ ಬೇಗೂರು ಠಾಣೆ ಮುಖ್ಯ ಪೇದೆಯ ಮೊಬೈಲ್ ಸಂಖ್ಯೆ ಹೊಂದಾಣಿಕೆ ಯಾದ ಕಾರಣ ಆತನನ್ನು ಸೋಂಕಿತ ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಮೊಬೈಲ್ ಸಂಖ್ಯೆ ಹೊಂದಾಣಿಕೆ ಆಗಿದ್ದರೂ ಕ್ರಮ ಸಂಖ್ಯೆ ಹೊಂದಾ ಣಿಕೆ ಆಗದ ಕಾರಣ
ಆತನ ಗಂಟಲು ದ್ರವವನ್ನು ಮತ್ತೆ ಪರೀಕ್ಷೆಗೆ ಕಳುಹಿಸಿದಾಗ ನೆಗೆಟಿವ್ ವರದಿ ಬಂದಿದೆ. ಇದೇ ಮೊಬೈಲ್ ಸಂಖ್ಯೆ ನಮೂದಿಸಿದ್ದ ಮತ್ತೊಬ್ಬ ಪೇದೆಯ ಗಂಟಲು ದ್ರವ ಪರೀಕ್ಷಿಸಲಾಗಿ ಆತನಿಗೂ ನೆಗೆಟಿವ್ ವರದಿ ಬಂದಿದೆ. ಸದ್ಯಕ್ಕೆ ಇವರಿಬ್ಬರನ್ನೂ ಐಸೋಲೇಷನ್‍ನಲ್ಲಿಡಲಾಗಿದ್ದು, ಮತ್ತೊಮ್ಮೆ ಪರೀಕ್ಷೆ ನಡೆಸಿದ ನಂತರ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಖಾಸಗಿ ಲ್ಯಾಬ್ ಲೋಪ: ತುಂಬು ಗರ್ಭಿಣಿಯೊಬ್ಬರು ಆರೋಗ್ಯ ತಪಾಸಣೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಿದಾಗ ವೈದ್ಯರ ಶಿಫಾರಸಿನ ಮೇರೆಗೆ ಖಾಸಗಿ ಲ್ಯಾಬ್ ನಲ್ಲಿ ಆಕೆಗೆ ಕೋವಿಡ್ ಟೆಸ್ಟ್ ಮಾಡಲಾಗಿ, ಪಾಸಿಟಿವ್ ವರದಿ ಬಂದಿದೆ. ಈ ಹಿನ್ನೆಲೆ ಯಲ್ಲಿ ಗರ್ಭಿಣಿ ಮಹಿಳೆಯನ್ನು ಸೋಂಕಿತಳೆಂದು ಪರಿಗಣಿಸಿ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಾಗಿತ್ತು. ಆನಂತರ 2 ಬಾರಿ ಆಕೆಯ ಗಂಟಲು ದ್ರವವನ್ನು ಪರೀಕ್ಷೆಗೊಳ ಪಡಿಸಿದಾಗ ನೆಗೆಟಿವ್ ವರದಿ ಬಂದಿದೆ. ಈ ಮಹಿಳೆ ಸೋಂಕಿತಳಲ್ಲ ಎಂಬ ತೀರ್ಮಾ ನಕ್ಕೆ ಬಂದಿದ್ದು, ಆಕೆ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿರುವುದು ಸರಿಯಲ್ಲ ಎಂದು ನಿರ್ಧರಿಸಿ ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Translate »