ಹೊಂಗೇಮರದ ಬೆಡಗಿ ಸೋನಾಲ್ ಈಗ ನಿರ್ಮಾಪಕಿ….!
ಸಿನಿಮಾ

ಹೊಂಗೇಮರದ ಬೆಡಗಿ ಸೋನಾಲ್ ಈಗ ನಿರ್ಮಾಪಕಿ….!

July 10, 2020

ಭಟ್ಟರ ನಿರ್ದೇಶನದಲ್ಲಿ ಮೂಡಿಬಂದಿದ್ದ ಪಂಚತಂತ್ರ ಚಿತ್ರದ ಹೊಂಗೇಮರದ ಹಾಡಿನಲ್ಲಿ ರೋಮ್ಯಾಂಟಿಕ್ ಆಗಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಹೃದಯ ಕದ್ದಿದ್ದ ನಟಿ ಸೋನಾಲ್ ಮಾಂತೆರೋ ಈಗ ನಿರ್ಮಾಪಕಿಯಾಗುತ್ತಿದ್ದಾರೆ. ಈವರೆಗೆ ನಾಯಕಿಯಾಗಿ ಸಿನಿಮಾಗಳಲ್ಲಿ ನಟಿಸುತಿದ್ದ ಸೋನಾಲ್ ಮಾಂತೆರೋ ಇದ್ದಕ್ಕಿದ್ದಂತೆ ಈಗ ತನ್ನ ವರಸೆ ಬದಲಿಸಿಬಿಟ್ಟಿz್ದÁರೆ. ಪಂಚತಂತ್ರ ಚಿತ್ರದ ನಂತರ ಹಲವಾರು ಸಿನಿಮಾಗಳಲ್ಲಿ ನಟಿಸಿ, ನಂತರ ಬಾಲಿವುಡ್‍ಗೂ ಅಡಿಯಿಟ್ಟು ಬಂದ ಸೋನಾಲ್ ಆಕ್ಟಿಂಗ್ ಜೊತೆಗೆ ಮಂಗಳೂರಿನಲ್ಲಿ ಇವೆಂಟ್ ಮ್ಯಾನೇಜ್‍ಮೆಂಟ್ ಸಹ ನಡೆಸುತ್ತಿರುವ ಸೋನಾಲ್, ಇದರ ಜೊತೆಗೆ ತಮ್ಮದೇ ಆದ ಸೋಚ್ ನಿರ್ಮಾಣ ಸಂಸ್ಥೆ ಆರಂಭಿಸಿ, ಆ ಮೂಲಕ ವೆಬ್ ಸಿರೀಸ್‍ನ್ನು ನಿರ್ಮಾಣ ಮಾಡಿz್ದÁರೆ. ಸಿನಿಮಾಗಳಲ್ಲಿಯೇ ಸಾಕಷ್ಟು ಅವಕಾಶಗಳಿರುವಾಗ ಏಕಾಏಕಿ ನಿರ್ಮಾಣಕ್ಕಿಳಿದಿರುವುದು ಹಲವರಿಗೆ ಆಶ್ಚರ್ಯ ತಂದಿದೆ.

ಸೈಕೋ ಥ್ರಿಲ್ಲರ್ ಕಥೆ ಹೊಂದಿರುವ ವೆಬ್ ಸರಣಿಯೊಂದನ್ನು ಸೋನಾಲ್ ಅವರು ನಿರ್ಮಾಣ ಮಾಡಿz್ದÁರೆ. ಈ ವೆಬ್ ಸೀರಿಸ್‍ನ ಆರು ಎಪಿಸೋಡ್‍ಗಳು ಈಗಾಗಲೇ ತಯಾರಾಗಿದೆ ಎನ್ನಲಾಗುತ್ತಿದೆ. ಲಾಕ್‍ಡೌನ್ ಸಮಯದಲ್ಲಿ ಸೋನಾಲ್ ಮಂಗಳೂರಿನಲ್ಲಿದ್ದಾಗ, ಪಿ.ಎನ್. ಸತ್ಯ ಅವರ ಜೊತೆ ಕೆಲಸ ಮಾಡಿದ್ದ ರಾಮ್‍ತೇಜಾ ಈ ವೆಬ್‍ಸಿರೀಸ್ ಬಗ್ಗೆ ಹೇಳಿದ್ದರಂತೆ. ಆಗ ಅವರ ಜೊತೆ ರವಿ ಶ್ಯಾಮನೂರು ಎಂಬುವರು ಸಹ ಕೈಜೋಡಿಸಿದ್ದರಂತೆ. ಹಾಗಾಗಿ ಈ ವೆಬ್ ಸಿರೀಸ್ ನಿರ್ಮಾಣ ಸಾಧ್ಯವಾಯಿತು. ಅಷ್ಟೇ ಅಲ್ಲದೇ ಬೇರೆ ಬೇರೆ ಪ್ಲಾಟ್‍ಫಾರ್ಮ್‍ಗಳಲ್ಲಿ ಇದನ್ನು ರಿಲೀಸ್ ಮಾಡುವ ಪ್ಲಾನ್ ಮಾಡಿದ್ದಾರಂತೆ. ಥ್ರಿಲ್ಲರ್ ಮಾದರಿಯ ಈ ಸೀರಿಸ್ ಎಲ್ಲರಿಗೂ ಇಷ್ಟವಾಗಲಿದೆ ಎಂದು ಹೇಳುವ ಸೋನಾಲ್ ತುಳು ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದವರು. ತುಳು ಭಾಷೆಯ ಎಕ್ಕ ಸಕ್ಕ, ಜೈತುಳುನಾಡು ಚಿತ್ರಗಳಲ್ಲಿ ಅಭಿನಯಿಸಿದ್ದ ಇವರ ಮೊದಲ ಕನ್ನಡ ಸಿನಿಮಾ ಅಭಿಸಾರಿಕ. ಸೋನಾಲ್ ಅವರು ಪಂಚತಂತ್ರ ಸಿನಿಮಾದಲ್ಲಿ ನಟಿಸುವ ಮೊದಲು ಬಿಗ್‍ಬಾಸ್ ಪ್ರಥಮ್ ಜೊತೆ ಎಂಎಲïಎ, ಗ್ರಾಮೀಣ ಯುವತಿಯಾಗಿ ಮದುವೆ ದಿಬ್ಬಣ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ಇದೀಗ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದಲ್ಲೂ ನಟಿಸಿz್ದÁರೆ, ಅದರ ಜೊತೆ ಉಪೇಂದ್ರ ನಟನೆಯ ಬುದ್ಧಿವಂತ 2 ಚಿತ್ರದಲ್ಲೂ ಸಹ ಸೆಕೆಂಡ್ ಹೀರೋಯಿನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

Translate »