ಡಾ.ಅಂಬೇಡ್ಕರ್ ನಿವಾಸದ ಮೇಲಿನ ದಾಳಿ ಖಂಡಿಸಿ ಬಿಜೆಪಿ ಎಸ್‍ಸಿ ಮೋರ್ಚಾ ಪ್ರತಿಭಟನೆ
ಮೈಸೂರು

ಡಾ.ಅಂಬೇಡ್ಕರ್ ನಿವಾಸದ ಮೇಲಿನ ದಾಳಿ ಖಂಡಿಸಿ ಬಿಜೆಪಿ ಎಸ್‍ಸಿ ಮೋರ್ಚಾ ಪ್ರತಿಭಟನೆ

July 12, 2020

ಮೈಸೂರು, ಜು.11(ಪಿಎಂ)- ಸಂವಿ ಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇ ಡ್ಕರ್ ಅವರ ಮುಂಬೈ ನಿವಾಸದ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸ ಬೇಕೆಂದು ಒತ್ತಾಯಿಸಿ ಬಿಜೆಪಿ ಎಸ್‍ಸಿ ಮೋರ್ಚಾ ಮೈಸೂರು ನಗರ ಘಟಕ ವತಿ ಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಪುರಭವನದ ಬಳಿಯ ಅಂಬೇಡ್ಕರ್ ಪ್ರತಿಮೆ ಎದುರು ಜಮಾ ವಣೆಗೊಂಡ ಪ್ರತಿಭಟನಾಕಾರರು, ಮುಂಬೈ ನಲ್ಲಿರುವ ಡಾ.ಅಂಬೇಡ್ಕರ್ ಅವರ ರಾಜ ಗೃಹ ನಿವಾಸದ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿರುವುದು ಖಂಡನೀಯ. ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಿ ಉಗ್ರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ರಾಜಗೃಹ ನಿವಾಸದಲ್ಲಿ ಡಾ.ಅಂಬೇಡ್ಕರ್ ತಮ್ಮ ವಿದ್ಯಾಭ್ಯಾಸದ ಸಂದರ್ಭ ವಾಸವಿ ದ್ದರು. ಅಲ್ಲದೆ, ಜೀವನದ ಪ್ರಮುಖ ಘಟ್ಟ ಗಳನ್ನು ಈ ನಿವಾಸದಲ್ಲಿ ಇರುವಾಗಲೇ ಕಂಡಿದ್ದಾರೆ. ಇಂತಹ ಐತಿಹಾಸಿಕ ರಾಜ ಗೃಹದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ಅಂಬೇಡ್ಕರ್ ಅವರ ನೆಚ್ಚಿನ ಪುಸ್ತಕ ಭಂಡಾರವನ್ನು ನಾಶಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಾರಾಷ್ಟ್ರದಲ್ಲಿ ಶಿವಸೇನೆ ಮೈತ್ರಿ ಸರ್ಕಾರ ಆಡಳಿತದಲ್ಲಿದ್ದು, ಈ ಘಟನೆ ನಡೆದು ದಿನ ಗಳು ಕಳೆಯುತ್ತಿದ್ದರೂ ಅಲ್ಲಿನ ಮುಖ್ಯ ಮಂತ್ರಿ ಹಾಗೂ ಕಾಂಗ್ರೆಸ್‍ನ ಗೃಹ ಸಚಿವರು ಸ್ಥಳಕ್ಕೆ ಭೇಟಿ ನೀಡದೇ ಇರುವುದು ಅವರ ದಲಿತ ವಿರೋಧಿ ನೀತಿ ಎತ್ತಿ ತೋರಿ ಸುತ್ತದೆ ಎಂದು ಕಿಡಿಕಾರಿದರು. ಈ ರಾಷ್ಟ್ರಕ್ಕೆ ಸಂವಿಧಾನ ನೀಡಿ ಆಡಳಿತ ನಡೆಸಲು ಬುನಾದಿ ಹಾಕಿಕೊಟ್ಟ ಮಹಾನಾಯಕರ ಮನೆ ಮೇಲೆ ದಾಳಿ ನಡೆಸಿದ ಆರೋಪಿ ಗಳನ್ನು ಬಂಧಿಸಿ ಗಡಿಪಾರು ಮಾಡಬೇಕು. ಮುಂದೆ ಈ ಘಟನೆ ಮರುಕಳಿಸದಂತೆ ರಾಜಗೃಹಕ್ಕೆ ಹೆಚ್ಚಿನ ಭದ್ರತೆ ಒದಗಿಸಬೇಕು. ಅಲ್ಲಿನ ಪೊಲೀಸ್ ಆಯುಕ್ತರನ್ನು ಅಮಾ ನತು ಮಾಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಎಸ್‍ಸಿ ಮೋರ್ಚಾ ಮೈಸೂರು ನಗರ ಅಧ್ಯಕ್ಷ ಸಿ.ಈಶ್ವರ್, ಬಿಜೆಪಿ ಮುಖಂಡರಾದ ಸೋಮಸುಂದರ್, ಜೋಗಿ ಮಂಜು ಮತ್ತಿತರರು ಪ್ರತಿಭಟನೆಯಲ್ಲಿದ್ದರು.

Translate »