ಆನ್‍ಲೈನ್ ಶಿಕ್ಷಣ ಮಕ್ಕಳು, ಪೋಷಕರು, ಶಿಕ್ಷಕರಿಗೂ ಹಾನಿಕರ
ಮೈಸೂರು

ಆನ್‍ಲೈನ್ ಶಿಕ್ಷಣ ಮಕ್ಕಳು, ಪೋಷಕರು, ಶಿಕ್ಷಕರಿಗೂ ಹಾನಿಕರ

July 12, 2020

ಮೈಸೂರು, ಜು. 11- ಖಾಸಗಿ ಶಾಲೆ ಗಳಲ್ಲಿ ಆನ್‍ಲೈನ್ ಶಿಕ್ಷಣ ನೀಡುತ್ತಿರುವುದ ರಿಂದ ಮಕ್ಕಳು ಕಣ್ಣುರಿ, ತಲೆ ನೋವು, ವಾಕರಿಕೆ, ಹೊಟ್ಟೆ ನೋವು ಮುಂತಾದ ಆರೋಗ್ಯ ಸಮಸ್ಯೆಗಳಿಂದ ಬಳ ಲುತ್ತಿದ್ದು, ಕೂಡಲೇ ಸರ್ಕಾರವು ಈ ಶಿಕ್ಷಣವನ್ನು ಸ್ಥಗಿತಗೊಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಸರ್ಕಾರವನ್ನು ಆಗ್ರಹಪಡಿಸಿದೆ.

ಕರ್ನಾಟಕ ರಾಜ್ಯ ರೈತ ಸಂಘದ ಪರವಾಗಿ ಈ ಸಂಬಂಧ ಹೇಳಿಕೆ ನೀಡಿರುವ ಸಂಘದ ರಾಜ್ಯ ಸಂಚಾ ಲಕ ಎನ್.ನಂಜೇಗೌಡ, ಹಲವು ಮಕ್ಕಳು ನಾನಾ ಆರೋಗ್ಯ ಸಮಸ್ಯೆ ಗಳಿಂದ ಬಳಲುತ್ತಿರುವುದನ್ನು ಕಣ್ಣಾರೆ ಕಂಡಿದ್ದೇವೆ. ಈ ಶಿಕ್ಷಣಕ್ಕೆ ಸಹಕರಿಸದಿದ್ದರೆ ಶಾಲೆಯಿಂದ ತೆಗೆದು ಹಾಕುವರು ಎಂಬ ಆತಂಕ ದಿಂದಾಗಿ ಮಾನಸಿಕ ಒತ್ತಡವನ್ನು ಮಕ್ಕಳು ಅನುಭವಿಸುತ್ತಿದ್ದಾರೆ. ಎಳೆಯ ಮಕ್ಕಳು ಹತ್ತಿರದಿಂದ ಗಂಟೆಗಟ್ಟಲೆ ಮೊಬೈಲ್ ದಿಟ್ಟಿಸುವುದು ಕಣ್ಣಿಗೆ ಅಪಾಯ ಮತ್ತು ಮಾನಸಿಕವಾಗಿ ಹಾನಿಕರ ಎಂದು ನಿಮ್ಹಾನ್ಸ್ ವರದಿ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಅಲ್ಲದೆ ಕೆಲವು ಅಧ್ಯಯನಗಳ ಪ್ರಕಾರ, ಮಕ್ಕಳು ಖಿನ್ನತೆ, ದೈಹಿಕವಾಗಿ ನಿಷ್ಕ್ರಿಯತೆ, ಕುಟುಂಬದ ಸಂಬಂಧಗಳು ದುರ್ಬಲ ಆಗು ವಿಕೆ, ಭಾಷೆಯ ಬೆಳವಣಿಗೆ ಕುಂಠಿತ, ಮಕ್ಕಳ ಏಕಾಗ್ರತೆಗೆ ಭಂಗ, ಮೊಬೈಲ್ ನೋಡುವ ಚಾಳಿಗೂ ಕಾರಣವಾಗುತ್ತದೆ. ಮಕ್ಕಳು ಮುಂದುವರಿದು ಅಶ್ಲೀಲ, ಲೈಂಗಿಕ ದೃಶ್ಯಗಳ ಚಿತ್ರಗಳನ್ನು ನೋಡುವ ಸಾಧ್ಯತೆ ಇದೆ. ಇದರಿಂದಾಗಿ ಪೆÇೀಷಕರಿಗೆ ಹಿಂಸೆ ಮತ್ತು ತರಗತಿ ನಡೆಸುವ ಶಿಕ್ಷಕರು ಸಹ ತೊಂದರೆಗೀಡಾಗುತ್ತಾರೆ. ಶಿಕ್ಷಕರು ಮಕ್ಕಳ ಕಲಿಕೆಯನ್ನು ಗುರುತಿಸಲು ಆಗುವುದಿಲ್ಲ. ಒಟ್ಟಾರೆ ಯಾಗಿ ಮೂಲ ಶಿಕ್ಷಣದ ಉದ್ದೇಶವೇ ವಿಫಲ ವಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಲಕ್ಷಾಂತರ ಮಕ್ಕಳಿಗೆ ಕಂಪ್ಯೂಟರ್, ಲ್ಯಾಪ್ ಟಾಪ್, ಸ್ಮಾರ್ಟ್ ಫೆÇೀನ್, ಇಂಟರ್ನೆಟ್ ಸೌಲಭ್ಯಗಳಿಲ್ಲ. ಬಡ ಕುಟುಂಬಗಳು ಉಪ ಕರಣಗಳನ್ನು ಪಡೆಯಲು ಅಥವಾ ಕೊಳ್ಳಲು ಸಾಧ್ಯವಿಲ್ಲ. 2017-18ರ ರಾಷ್ಟ್ರೀಯ ಮಾದರಿ ಸಮೀಕ್ಷೆ ಪ್ರಕಾರ, ಕಂಪ್ಯೂಟರ್ ಹೊಂದಿರುವ ಗ್ರಾಮೀಣ ಕುಟುಂಬಗಳು ಕೇವಲ ಶೇ.4.4, ನಗರ ಕುಟುಂಬ ಶೇ.23.4 ಮತ್ತು ಇಂಟರ್ನೆಟ್ ಸೌಲಭ್ಯ ಹೊಂದಿರುವ ಗ್ರಾಮೀಣ ಕುಟುಂಬ ಶೇ.15, ನಗರ ಕುಟುಂಬ ಶೇ. 42. ಒಂದು ಸ್ಮಾರ್ಟ್ ಫೆÇೀನ್ ಕೊಳ್ಳಲು ಕನಿಷ್ಠ 10 ಸಾವಿರ ರೂಪಾಯಿ ಬೇಕಾಗು ತ್ತದೆ. ಪ್ರಯೋಗ ಶಾಲೆ, ಕಾರ್ಯಾನುಭವ, ಪಠ್ಯೇತರ ಚಟುವಟಿಕೆಗಳು ಇಲ್ಲದೆ ಬಹುಮುಖ ವ್ಯಕ್ತಿತ್ವ ಕುಂಠಿತವಾಗುತ್ತದೆ. ಇಂತಹ ಪರಿಸ್ಥಿತಿ ಯಲ್ಲಿ ಸರ್ಕಾರವು ಆನ್‍ಲೈನ್ ಶಿಕ್ಷಣ ಜಾರಿಗೆ ತರುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ ಎಂದು ನಂಜೇಗೌಡರು ತಿಳಿಸಿ ದ್ದಾರೆ. ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು, ಆನ್‍ಲೈನ್ ಶಿಕ್ಷಣ ಜಾರಿಗೆ ತರುವುದಾಗಿ ಒಮ್ಮೆ ಹೇಳಿದರೆ, ಮತ್ತೊಮ್ಮೆ ಜಾರಿಗೆ ತರುವುದಿಲ್ಲ ಎಂದು ಗೊಂದಲದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಸರ್ಕಾರಕ್ಕೆ ಸ್ಪಷ್ಟತೆ ಮತ್ತು ಬದ್ಧತೆ ಇರಬೇಕು. ಮಾರ ಣಾಂತಿಕ ಕೊರೊನಾ ನಿಯಂತ್ರಣಕ್ಕೆ ಬರುವವರೆಗೆ ಶಾಲೆಗಳಿಗೆ ರಜೆ ಘೋಷಿಸಿ ಆನ್‍ಲೈನ್ ಶಿಕ್ಷಣ ಸ್ಥಗಿತಗೊಳಿಸಿದರೆ ಮಕ್ಕಳಿಗೆ ನಷ್ಟವೇನೂ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

Translate »