ಎಸ್‍ಪಿಬಿ ಸ್ಮರಣಾರ್ಥ `ನೂರೊಂದು ನೆನಪು’ ಗೀತ ನಮನ
ಮೈಸೂರು

ಎಸ್‍ಪಿಬಿ ಸ್ಮರಣಾರ್ಥ `ನೂರೊಂದು ನೆನಪು’ ಗೀತ ನಮನ

March 25, 2021

ಮೈಸೂರು,ಮಾ.24(ವೈಡಿಎಸ್)- ನಗ ರದ ನಾದಬ್ರಹ್ಮ ಸಂಗೀತ ಸಭಾದಲ್ಲಿ `ಜನ ಚೈತನ್ಯ ಫೌಂಡೇಷನ್’ ಆಯೋಜಿಸಿದ್ದ ಗಾನ ಗಂಧರ್ವ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಸ್ಮರಣಾರ್ಥ `ನೂರೊಂದು ನೆನಪು ಹಾಡಾಗಿ ಬಂತು’ ಚಿತ್ರಗೀತೆ ಗಾಯನ ನಮನ ಹಾಗೂ ಕಲಾವಿದರು-ಸಾಧಕರಿಗೆ `ಜನ ಚೈತನ್ಯ’ ಪುರಸ್ಕಾರ ಪ್ರದಾನ ಕಾರ್ಯಕ್ರಮ ದಲ್ಲಿ ಗಾಯಕರಾದ ಆರ್.ಮುತ್ತುರಾಜ್, ಆರ್.ಲಕ್ಷ್ಮಣ್, ಮಹದೇವಯ್ಯ, ಸಯ್ಯದ್ ಮುಜಾಮಿಲ್, ಉಮೇಶ್, ಸಿದ್ದರಾಜು, ಇಂಚರ, ಆನಂದಪ್ಪ ಅವರ ಕಂಠದಿಂದ ಹೊರಹೊಮ್ಮಿದ ಹಾಡುಗಳು ಸಂಗೀತ ಪ್ರಿಯರಿಗೆ ಮುದ ನೀಡಿದವು.

ಕೀಬೋರ್ಡ್ ವಾದಕ ಗಣೇಶ್ ಈಶ್ವರ್ ಭಟ್ಟ, ಸಂಗೀತ ನಿರ್ದೇಶಕ ಗಾಡ್ವಿನ್ ಪಾಲ್, ಹಿಂದೂಸ್ತಾನಿ ತಬಲವಾದಕ ಮಹದೇವ ಹೆಬ್ಬಾಡಿ, ಗಾಯಕರಾದ ಬಿ.ಎಂ.ಮಹದೇ ವಯ್ಯ, ಸರ್ವಮಂಗಳ, ಸಯ್ಯದ್ ಮುಜಾ ಮಿಲ್, ಪತ್ರಕರ್ತ ಎಂ.ಪ್ರಕಾಶ್, ಮಾಜಿ ಮೇಯರ್ ನಾರಾಯಣ ಅಭಿಮಾನಿ ಬಳಗದ ಅಧ್ಯಕ್ಷ ಆರ್.ರಮೇಶ್ ಅವರಿಗೆ `ಜನ ಚೈತನ್ಯ’ ಪುರಸ್ಕಾರ ನೀಡಲಾಯಿತು.
ಸಣ್ಣ ನೀರಾವರಿ ಇಲಾಖೆ ಕೆ.ಆರ್. ಪೇಟೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಎನ್.ಶ್ರೀನಿವಾಸಲು, ವಸಂತ ಸರ್ವಿಸ್ ಸ್ಟೇಷನ್ ಮಾಲೀಕ ರಂಜಿತ್ ಹೆಗಡೆ, ಪಾಲಿಕೆ ಸದಸ್ಯೆ ಶೋಭಾ ಸುನೀಲ್, ಜನ ಚೈತನ್ಯ ಫೌಂಡೇಷನ್ ಅಧ್ಯಕ್ಷ ಆರ್.ಲಕ್ಷ್ಮಣ್ ಮತ್ತಿತರರಿದ್ದರು.

Translate »