ರಂಗಾಯಣದಲ್ಲಿ ವಿಶೇಷ ‘ತ್ರಯಸ್ಥ’ ನಾಟಕ ಪ್ರದರ್ಶನ
ಮೈಸೂರು

ರಂಗಾಯಣದಲ್ಲಿ ವಿಶೇಷ ‘ತ್ರಯಸ್ಥ’ ನಾಟಕ ಪ್ರದರ್ಶನ

January 12, 2021

ಮೈಸೂರು, ಜ11(ಎಂಕೆ)- ಬಾಲ್ಯದ ಚೇಷ್ಟೆಗಳು, ಯೌವ್ವನದಲ್ಲಿ ಪ್ರೀತಿ-ಪ್ರೇಮದ ಆಕರ್ಷಣೆ, ಸಂಸಾರದ ಜಂಜಾಟ ಮತ್ತು ಮುಪ್ಪಿನ ಜೀವನ ಸೇರಿದಂತೆ ಬದುಕಿನ ಪಯಣವನ್ನು ಮೆಲುಕು ಹಾಕುವ ಕಥಾ ವಸ್ತುವುಳ್ಳ ‘ತ್ರಯಸ್ಥ’ ನಾಟಕವನ್ನು ಕಲಬುರಗಿ ರಂಗಾಯಣದ ಕಲಾವಿದರು ಅಚ್ಚುಕಟ್ಟಾಗಿ ಪ್ರಸ್ತುತ ಪಡಿಸಿದರು.

ಕಲಾಮಂದಿರದ ಕಿರುರಂಗಮಂದಿರ ದಲ್ಲಿ ಮೈಸೂರು ರಂಗಾಯಣ ಸೋಮ ವಾರ ಆಯೋಜಿಸಿದ್ದ `ತ್ರಯಸ್ಥ’ ನಾಟಕ ಪ್ರದರ್ಶನದಲ್ಲಿ ಕಲಬುರಗಿ ರಂಗಾ ಯಣದ ಕಲಾವಿದರು ತಮ್ಮ ಅಮೋಘ ಅಭಿನಯದ ಮೂಲಕ ಎಲ್ಲರನ್ನು ಸೆಳೆ ದರು. ಶ್ರೀನಿವಾಸ ವೈದ್ಯರ ‘ಮನಸುಖ ರಾಯನ ಮನಸು’ ಕೃತಿಯಿಂದ ಆಯ್ದ `ತ್ರಯಸ್ಥ’ ಎಂಬ ಕತೆಯನ್ನು ವಿಶ್ವರಾಜ್ ಪಾಟೀಲ್ ನಿರ್ದೇಶನ ಮಾಡಿದ್ದರು.

ಇದೇ ವೇಳೆ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮಾತ ನಾಡಿ, ಕಲಬುರಗಿ ರಂಗಾಯಣದ ಕಲಾ ವಿದರ ಅಭಿನಯಕ್ಕೆ ಮೈಸೂರಿನ ರಂಗಭೂಮಿ ಅಭಿಮಾನಿಗಳು ಅಪಾರ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಮೈಸೂರು ರಂಗಾಯಣ ಪ್ರಾರಂಭಗೊಂಡ ಸಂಕ್ರಾತಿ ಹಬ್ಬದ ದಿನ ದಂದು ‘ಸೀತಾ ಸ್ವಯಂವರ’ ನಾಟಕ ಪ್ರದ ರ್ಶನ ಏರ್ಪಡಿಸಲಾಗಿದೆ. ಅಲ್ಲದೆ ಮೊದಲ ಬಾರಿಗೆ ಜ.15ರಂದು ‘ಸಾಹೇಬ್ರು ಬಂದವೆ!!!’ ಎಂಬ ಅರೆಭಾಷೆ ನಾಟಕ ಪ್ರದರ್ಶನವನ್ನೂ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ್ ಜೋಷಿ, ಮೈಸೂರು ರಂಗಾ ಯಣ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ನಾಟಕ ನಿರ್ದೇಶಕ ವಿಶ್ವರಾಜ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

Translate »