ಇಂದಿನಿಂದ ದೇಶದಲ್ಲಿ ರೈಲು ಸಂಚಾರ ಪುನಾರಂಭ
ಮೈಸೂರು

ಇಂದಿನಿಂದ ದೇಶದಲ್ಲಿ ರೈಲು ಸಂಚಾರ ಪುನಾರಂಭ

May 12, 2020

ನವದೆಹಲಿ: ಕೇಂದ್ರ ಸರ್ಕಾರ ಮಂಗಳವಾರದಿಂದ (ಮೇ 12) ದೇಶದ ನಾನಾ ಭಾಗಗಳಿಂದ ನವದೆಹಲಿಗೆ ರೈಲು ಸಂಚಾರ ಆರಂಭಿಸುತ್ತಿದೆ. ಒಟ್ಟು 15 ಜೋಡಿ ರೈಲುಗಳ ಸಂಚಾರ ಆರಂಭಿಸಲಾಗುತ್ತಿದ್ದು, ಇದರೊಂದಿಗೆ ಲಾಕ್‍ಡೌನ್ ಆರಂಭವಾಗಿ 51 ದಿನಗಳ ಬಳಿಕ ದೇಶದಲ್ಲಿ ರೈಲು ಸಂಚಾರ ಮರು ಆರಂಭಕ್ಕೆ ಕ್ರಮ ಕೈಗೊಂಡಿದೆ.

ಈ 15 ಜೋಡಿ ರೈಲುಗಳು ನವ ದೆಹಲಿ ಅಲ್ಲದೆ, ಮುಂಬೈ, ಸಿಕಂದ ರಾಬಾದ್, ಬೆಂಗಳೂರು, ಚೆನ್ನೈ, ಅಹ ಮದಾಬಾದ್, ಹೌರಾ, ತಿರುವನಂತ ಪುರಂ, ಪಟನಾ, ಜಮ್ಮು, ದಿಬ್ರುಗಢ, ಅಗರ್ತಲಾ, ಬಿಲಾಸ್‍ಪುರ, ರಾಂಚಿ, ಭುವನೇಶ್ವರ ಮತ್ತು ಮಡ್ಗಾಂವ್ ನಿಂದಲೂ ಪ್ರಯಾಣ ಆರಂಭಿಸಲಿವೆ.

ಈ ಎಲ್ಲ ರೈಲುಗಳ ಮುಂಗಡ ಬುಕ್ಕಿಂಗ್ ಐಆರ್‍ಸಿಟಿಸಿ ವೆಬ್‍ಸೈಟ್ ಮೂಲಕ ಸೋಮವಾರ ಸಂಜೆ (ಮೇ 11) 6 ಗಂಟೆ ಯಿಂದ ಆರಂಭವಾಗಿದೆ. ರೈಲು ನಿಲ್ದಾಣ ಗಳಲ್ಲಿ ಟಿಕೆಟ್ ಖರೀದಿಗೆ ಅವಕಾಶವಿಲ್ಲ. ಕೇವಲ ಇ-ಟಿಕೆಟ್ ಇದ್ದವರು ಮಾತ್ರ ರೈಲುಗಳಲ್ಲಿ ಪ್ರಯಾಣಿಸಬಹುದಾಗಿದೆ.

ಎಲ್ಲೆಲ್ಲಿಂದ ಎಲ್ಲೆಲ್ಲಿಗೆ ರೈಲು ಸಂಚಾರ
ಮೇ 12ರಿಂದ ಹೌರಾದಿಂದ ನವ ದೆಹಲಿಗೆ ರೈಲು ಸಂಚಾರ ಆರಂಭ ವಾಗಲಿದೆ. ಈ ರೈಲು ಅಸನಾಲ್, ಧನ್‍ಬಾದ್, ಗಯಾ, ಪಂಡಿತ್ ದೀನ್ ದಯಾಳ್ ಉಪಧ್ಯಾಯ, ಪ್ರಯಾಗ್ ಗಂಜ್ ಮತ್ತು ಕಾನ್ಪುರ ಸೆಂಟ್ರಲ್‍ನಲ್ಲಿ ನಿಲುಗಡೆ ಆಗಲಿದೆ. ಮೇ 13ರಿಂದ ನವದೆಹಲಿಯಿಂದ ಹೌರಾಕ್ಕೆ ರೈಲು ಸಂಚರಿಸಲಿದೆ. ಈ ರೈಲು ಕೂಡ ಅಸ ನಾಲ್, ಧನ್‍ಬಾದ್, ಗಯಾ, ಪಂಡಿತ್ ದೀನ್ ದಯಾಳ್ ಉಪಧ್ಯಾಯ, ಪ್ರಯಾಗ್ ಗಂಜ್ ಮತ್ತು ಕಾನ್ಪುರ ಸೆಂಟ್ರಲ್‍ನಲ್ಲಿ ನಿಲುಗಡೆ ಇದೆ.

ಪಟನಾದ ರಾಜೇಂದ್ರ ನಗರದಿಂದ ನವದೆಹಲಿಗೆ ಮೇ 12ರಿಂದ ರೈಲು ಸಂಚಾರ ಆರಂಭವಾಗಲಿದ್ದು, ಪಟನಾ, ಪಂಡಿತ್ ದೀನ್ ದಯಾಳ್ ಉಪಧ್ಯಾಯ, ಪ್ರಯಾಗ್ ರಾಜ್ ಮತ್ತು ಕಾನ್ಪುರ ಸೆಂಟ್ರಲ್‍ನಲ್ಲಿ ನಿಲುಗಡೆ ಇದೆ

ನವ ದೆಹಲಿಯಿಂದ ಪಟನಾದ ರಾಜೇಂದ್ರ ನಗರ ರೈಲು ನಿಲ್ದಾಣಕ್ಕೆ ಮೇ 13ರಿಂದ ರೈಲು ಸಂಚಾರ ಆರಂಭವಾಗಲಿದ್ದು, ಪಟನಾ, ಪಂಡಿತ್ ದೀನ್ ದಯಾಳ್ ಉಪಧ್ಯಾಯ, ಪ್ರಯಾಗ್ ರಾಜ್ ಮತ್ತು ಕಾನ್ಪುರ ಸೆಂಟ್ರಲ್‍ನಲ್ಲಿ ನಿಲುಗಡೆ ಇದೆ.

ದಿಬ್ರುಗಡದಿಂದ ನವದೆಹಲಿಗೆ ಮೇ 14ರಿಂದ ರೈಲು ಸಂಚಾರ ಆರಂಭ ವಾಗಲಿದ್ದು, ದಿಮಾಪುರ, ಲಂಡಿಂಗ್, ಗುವಾಹಟಿ, ಕೋಕ್ರಾಜಾರ್, ಮರಿ ಯಾನಿ, ನ್ಯೂ ಜಲ್‍ಪೈಗಡಿ, ಕಟಿಹಾರ್, ಭರೌನಿ, ದಾನಾಪುರ, ಪಂಡಿತ್ ದೀನ್ ದಯಾಳ್ ಉಪಧ್ಯಾಯ, ಪ್ರಯಾಗ್ ರಾಜ್, ಕಾನ್ಪುರ ಸೆಂಟ್ರಲ್‍ನಲ್ಲಿ ನಿಲು ಗಡೆ ಇದೆ

ನವದೆಹಲಿಯಿಂದ ಅಗರ್ತ ಲಾಕ್ಕೆ ಮೇ 20ರಿಂದ ರೈಲು ಸಂಚಾರ ಆರಂಭವಾಗಲಿದ್ದು, ಬುಧವಾರ ಮಾತ್ರ ಸಂಚರಿಸಲಿದೆ. ಬದರ್‍ಪುರ, ಗುವಾಹಟಿ, ಕೋಕ್ರಾಜಾರ್, ನ್ಯೂ ಜಲ್ ಪೈಗಡಿ, ಕಟಿಹಾರ್, ಭರೌನಿ, ಪಾಟ್ಲಿಪುತ್ರ, ಪಂಡಿತ್ ದೀನ್ ದಯಾಳ್ ಮತ್ತು ಕಾನ್ಪುರ ಸೆಂಟ್ರಲ್‍ನಲ್ಲಿ ನಿಲುಗಡೆ ಆಗಲಿದೆ.

ಭುವನೇಶ್ವರದಿಂದ ನವದೆಹಲಿಗೆ ಮೇ 13ರಂದು ರೈಲು ಸಂಚಾರ ಆರಂಭ ವಾಗಲಿದೆ. ಬಲ್ಸೋ, ಹಿಜ್ಲೆ (ಖರಗ್‍ಪುರ) ಟಾಟಾನಗರ, ಬೊಕಾರೋ ಸ್ಟೀಲ್ ಸಿಟಿ, ಗಯಾ, ಪಂಡಿತ್ ದೀನ್ ದಯಾಳ್ ಉಪಧ್ಯಾಯ ಮತ್ತು ಕಾನ್ಪುರ ಸೆಂಟ್ರಲ್‍ನಲ್ಲಿ ನಿಲುಗಡೆ ಇದೆ.

ನವದೆಹಲಿಯಿಂದ ಭುವನೇಶ್ವರಕ್ಕೆ ಮೇ 14ರಿಂದ ರೈಲು ಸಂಚಾರ ಅರಂಭವಾಗಲಿದೆ. ಈ ರೈಲು ಕೂಡ ಬಲ್ಸೋ, ಹಿಜ್ಲೆ (ಖರಗ್‍ಪುರ) ಟಾಟಾನಗರ, ಬೊಕಾರೋ ಸ್ಟೀಲ್ ಸಿಟಿ, ಗಯಾ, ಪಂಡಿತ್ ದೀನ್ ದಯಾಳ್ ಉಪಧ್ಯಾಯ ಮತ್ತು ಕಾನ್ಪುರ ಸೆಂಟ್ರಲ್‍ನಲ್ಲಿ ನಿಲುಗಡೆ ಆಗಲಿದೆ.

ನವದೆಹಲಿಯಿಂದ ಮಡ್ಗಾಂವ್‍ಗೆ ಮೇ 15ರಿಂದ ರೈಲು ಸಂಚಾರ ಆರಂಭವಾಗಲಿದೆ. ಈ ರೈಲು ಶುಕ್ರವಾರ ಮತ್ತು ಶನಿವಾರ ಮಾತ್ರ ಸಂಚರಿಸಲಿದೆ. ರತ್ನಗಿರಿ, ಪನ್ವೇಲ್, ಸೂರತ್, ವಡೋದರ ಮತ್ತು ಕೋಟಾದಲ್ಲಿ ಮಾತ್ರ ನಿಲುಗಡೆ ಆಗÀಲಿದೆ.

ಮಡ್ಗಾಂವ್‍ನಿಂದ ನವದೆಹಲಿಗೆ ಮೇ 17ರಿಂದ ರೈಲು ಸಂಚಾರ ಆರಂಭ ವಾಗಲಿದೆ. ಈ ರೈಲು ಸೋಮವಾರ ಮತ್ತು ಭಾನುವಾರ ಮಾತ್ರ ಸಂಚರಿಸಲಿದೆ. ರತ್ನಗಿರಿ, ಪನ್ವೇಲ್, ಸೂರತ್, ವಡೋದರ ಮತ್ತು ಕೋಟಾದಲ್ಲಿ ಮಾತ್ರ ನಿಲುಗಡೆ ಆಗಲಿದೆ.

 ಸಿಕಂದರಾಬಾದ್‍ನಿಂದ ನವದೆಹಲಿಗೆ ಮೇ 20ರಿಂದ ರೈಲು ಸಂಚಾರ ಆರಂಭ ವಾಗಲಿದೆ. ಈ ರೈಲು ಬುಧವಾರ ಮಾತ್ರ ಸಂಚರಿಸಲಿದೆ. ನಾಗ್ಪುರ, ಭೋಪಾಲ್ ಮತ್ತು ಝಾನ್ಸಿಯಲ್ಲಿ ಮಾತ್ರ ನಿಲುಗಡೆ ಇದೆ.

* ನವದೆಹಲಿಯಿಂದ ಸಿಕಂದರಾಬಾದ್‍ಗೆ ಮೇ 17ರಿಂದ ರೈಲು ಸಂಚಾರ ಆರಂಭವಾಗಲಿದೆ. ಈ ರೈಲು ಭಾನುವಾ ಮಾತ್ರ ಸಂಚರಿಸಲಿದೆ. ನಾಗ್ಪುರ, ಭೋಪಾಲ್ ಮತ್ತು ಝಾನ್ಸಿಯಲ್ಲಿ ಮಾತ್ರ ನಿಲುಗಡೆ ಇದೆ.

Translate »