ಇಂದಿನಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನೂರೊಂದು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ
ಮೈಸೂರು

ಇಂದಿನಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನೂರೊಂದು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ

June 25, 2020

ಮೈಸೂರು,ಜೂ.24-ಮೈಸೂರಿನ ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಆತಂಕ ಬಿಡಿ ಪರೀಕ್ಷೆ ಎದುರಿಸಿ ಎಂದು ನಾಳೆ(ಜೂ.25)ಯಿಂದ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ನಿರ್ವಿಘ್ನವಾಗಿ ನಡೆಯಲಿ ಎಂದು ಮೈಸೂರು ನಗರದ ನೂರಾಒಂದು ಗಣಪತಿ ದೇವಸ್ಥಾನದಲ್ಲಿ ಶಾಲಾ ಮಕ್ಕಳ ಪರವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ವೇಳೆ ಬಿಜೆಪಿ ಮಹಿಳಾ ಮುಖಂಡರಾದ ಲಕ್ಷ್ಮೀದೇವಿ ಮಾತನಾಡಿ, ವಿದ್ಯಾರ್ಥಿ ಗಳು ಜವಾಬ್ದಾರಿ ಅರಿಯಲಿ. ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿ ರುವುದರ ನಡುವೆಯೇ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯುತ್ತಿದೆ. ಪರೀಕ್ಷೆ ಒತ್ತಡದ ಜೊತೆಗೆ ಕೊರೊನಾ ಸೋಂಕಿನ ಆತಂಕವೂ ಸೇರಿದೆ. ಈ ಹಿಂದೆ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಯ ಸಂದರ್ಭದಲ್ಲಿ ಎಷ್ಟೋ ವಿದ್ಯಾರ್ಥಿಗಳು ಸರಿಯಾಗಿ ಮಾಸ್ಕ್ ಬಳಸಿಲ್ಲ. ಎಚ್ಚರಿಕೆಯ ಕ್ರಮಗಳನ್ನು ಸರಿಯಾಗಿ ಪಾಲಿಸಿಲ್ಲ ಎಂದು ವರದಿಯಾಗಿದೆ. ಅದು ಬರೀ ಒಂದು ದಿನದ ಪರೀಕ್ಷೆ ಆಗಿತ್ತು. ಈಗ ವಿದ್ಯಾರ್ಥಿಗಳು ಆರೇಳು ವಿಷಯ ಗಳಿಗೆ ಪರೀಕ್ಷೆ ಬರೆಯಬೇಕಾಗಿದೆ. ಹೀಗಾಗಿ ಎಲ್ಲಾ ಎಚ್ಚರಿಕಾ ಕ್ರಮಗಳನ್ನು ಸಂಪೂರ್ಣ ಪಾಲಿಸುತ್ತಾ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳನ್ನು ಪೆÇೀಷಕರು ಅಣಿಗೊಳಿಸಬೇಕು. ಈ ಮೂಲಕ ಅವರು ಕೊರೊನಾ ಸೋಂಕು ನಿಯಂತ್ರಣ ಹಾಗೂ ಶಿಸ್ತುಪಾಲನೆ ವಿಷಯದಲ್ಲಿ ರಾಜ್ಯದ ಜನರಿಗೆ ಮಾದರಿಯಾಗಬೇಕು ಎಂದು ಹೇಳಿದರು.

ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ ಬಸಪ್ಪ, ಯುವ ಮುಖಂಡರಾದ ಲೋಹಿತ್, ಸುಚೀಂದ್ರ, ಪ್ರಶಾಂತ್, ಶಿವಪ್ರಕಾಶ್ ಗುರುಪ್ರಸಾದ್, ರಾಕೇಶ್ ಕುಂಚಿಟಿಗ, ಚಕ್ರಪಾಣಿ ಹಾಗೂ ಇನ್ನಿತರರು ಹಾಜರಿದ್ದರು.

Translate »