ಅಂಗಾಂಶ ಕೃಷಿ ಬಾಳೆ ಸಸಿಗಳು ಲಭ್ಯ
ಮೈಸೂರು

ಅಂಗಾಂಶ ಕೃಷಿ ಬಾಳೆ ಸಸಿಗಳು ಲಭ್ಯ

June 25, 2020

ಮೈಸೂರು, ಜೂ.24- ಇತ್ತೀಚೆಗೆ ಹೊಸ ಆವಿಷ್ಕಾರಗಳಿಂದ ಹಾಗೂ ಅಂಗಾಂಶ ಕೃಷಿ ಬಾಳೆಯಿಂದ ರಾಷ್ಟ್ರದಲ್ಲಿ ಬಾಳೆ ಉತ್ಪಾ ದಕತೆ ಹೆಕ್ಟೇರ್‍ಗೆ 40-50 ಟನ್‍ವರೆಗೆ ಹೆಚ್ಚಳವಾಗಿದ್ದು, ಈ ಹಿನ್ನೆಲೆ ಅಂಗಾಂಶ ಕೃಷಿ ಬಾಳೆ ಸಸಿ ಗಿಡಗಳು ರೈತರಿಗೆ ಲಭ್ಯವಿದೆ ಎಂದು ತೋಟಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ.

ಅಂಗಾಂಶ ಕೃಷಿ ಬಾಳೆ ಸಸಿಗಳಿಂದ ಅಧಿಕ ಸಸ್ಯಾಭಿವೃದ್ಧಿ ಸಾಧ್ಯವಿದ್ದು, ಒಂದೇ ವಯಸ್ಸಿನ ಕೀಟ ಮತ್ತು ರೋಗ ರಹಿತ ಗಿಡಗಳು ಲಭ್ಯವಿದೆ. ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಬೆಳೆಯಬಹುದಾಗಿದ್ದು, ಕಡಿಮೆ ಅವಧಿಯಲ್ಲಿ ಒಂದೇ ಬಾರಿ ಇಳುವರಿ ಬರುವುದರ ಜೊತೆಗೆ ಅಧಿಕ ಲಾಭವಿರುತ್ತದೆ. ಮೈಸೂರು ಜಿಲ್ಲೆಯಲ್ಲಿ ಬಾಳೆ ಬೆಳೆಗೆ ಸೂಕ್ತವಾದ ವಾತಾವರಣವಿದ್ದು, ಸುಮಾರು 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಬಾಳೆ ಬೆಳೆಯುತ್ತಿದ್ದಾರೆ. ಆಧುನಿಕ ಬೇಸಾಯ ಪದ್ಧತಿಗಳನ್ನು ಅಳವಡಿಸುವುದರ ಜೊತೆಗೆ ಅಂಗಾಂಶ ಕೃಷಿ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿರುವ ಸಸಿಗಳನ್ನು ಉಪಯೋಗಿಸಿದಲ್ಲಿ ಬಾಳೆ ಉತ್ಪಾದಕತೆಯನ್ನು ಹೆಚ್ಚಿಸಬಹುದಾಗಿದೆ.

ಅಂಗಾಂಶ ಕೃಷಿ ಬಾಳೆ ಸಸಿಗಳು ಬೆಂಗಳೂರಿನ ಹುಳಿಮಾವು, ಬನ್ನೇರುಘಟ್ಟದ ಮುಖ್ಯರಸ್ತೆಯಲ್ಲಿರುವ ಜೈವಿಕ ಕೇಂದ್ರ, ಇಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ 0821-2422255, 2420066 ಅನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Translate »