ದುರ್ಗುಣ ಬದಿಗಿಟ್ಟು ಸಮಾಜದ ಸ್ವಾಸ್ಥ್ಯ ಕಾಪಾಡಲು ಮನವಿ
ಮೈಸೂರು

ದುರ್ಗುಣ ಬದಿಗಿಟ್ಟು ಸಮಾಜದ ಸ್ವಾಸ್ಥ್ಯ ಕಾಪಾಡಲು ಮನವಿ

June 25, 2020

ಮೈಸೂರು,ಜೂ.24(ಎಂಟಿವೈ)- ದುರಾಸೆ, ದುರ್ಗುಣ ಬದಿಗೊತ್ತಿ ಪರಿಸರ ಮಾಲಿನ್ಯ ತಡೆಗಟ್ಟಿ ಸಮಾಜದ ಸ್ವಾಥ್ಯ ಕಾಪಾಡಲು ಪಣ ತೊಡುವಂತೆ ಸಾಹಿತಿ ಬನ್ನೂರು ಕೆ.ರಾಜು ಸಲಹೆ ನೀಡಿದರು.

`ಸರ್ ಎಂ.ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳ ಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ’ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನದಂಗವಾಗಿ ಬುಧವಾರ ಚಾಮುಂಡಿ ಬೆಟ್ಟದ ಪಾದ ಬಳಿ `ಸಾವಿರ ಮೆಟ್ಟಿಲು ಸ್ವಚ್ಛತಾ ಕಾರ್ಯ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ’ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದ ಅವರು, ಇತ್ತೀ ಚಿನ ದಿನಗಳಲ್ಲಿ ದುಶ್ಚಟ, ದುರ್ವಿಚಾರ, ದುರ್ಮಾರ್ಗ, ದುಷ್ಕೃತ್ಯದಂತಹ ದುಷ್ಟತನ ಗಳನ್ನೇ ಮೈತುಂಬಿಕೊಂಡು ಮನಸ್ಸಿನ ಮಾಲಿನ್ಯಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚಾ ಗಿದೆ. ಇದರಿಂದ ಸಮಾಜದ ಸ್ವಾಸ್ಥ್ಯವೂ ಕೆಡುತ್ತಿದೆ. ಅನಾಚಾರ ತಾಂಡವವಾಡುತ್ತಿದೆ. ಮುಖ್ಯವಾಗಿ ಪರಿಸರದ ಮೇಲೆ ಅಗಾಧ ದುಷ್ಪರಿಣಾಮವಾಗುತ್ತಿದೆ. ಇದನ್ನು ತಡೆ ಯಲು ದುರ್ಗಣಗಳಿಗೆ ತಿಲಾಂಜಲಿ ಇಡ ಬೇಕು. ಪರಿಸರ ಮಾಲಿನ್ಯ ತಡೆಗಟ್ಟಿ ಸಮಾ ಜದ ಸ್ವಚ್ಛತೆ ಹಾಗೂ ಸ್ವಾಸ್ಥ್ಯ ಎರಡನ್ನೂ ಕಾಪಾಡಬೇಕು ಎಂದು ಮನವಿ ಮಾಡಿ ದರು. ಜಗತ್ತನ್ನೇ ಕೊರೊನಾ ಕಾಡುತ್ತಿದೆ. ಮಾಸ್ಕ್‍ನಿಂದ ಮುಖ ಮುಚ್ಚಿಕೊಂಡು ಆತಂಕದಿಂದ ಬದುಕುತ್ತಿರುವ ನಾವು ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಇದ ಕ್ಕಿಂತಲೂ ಭಯಾನಕ ಸ್ಥಿತಿಗೆ ತಲುಪು ತ್ತೇವೆ. ಮನುಷ್ಯ ಕುಲವೇ ಸರ್ವನಾಶದತ್ತ ಸಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭ ಸಂಘದ ಅಧ್ಯಕ್ಷ ಎಸ್. ಮಹೇಶ್ ಜಯನಗರ, ಕಾನೂನು ಸಲಹೆ ಗಾರ ಸುಂದರರಾಜ್ ಮಾತನಾಡಿದರು. ಆಶೀರ್ವಾದ್ ಕಂಪನಿ ವಿಸ್ತರಣಾ ವ್ಯವ ಸ್ಥಾಪಕ ರುದ್ರಸ್ವಾಮಿ ಕಾರ್ಮಿಕರಿಗೆ ಉಚಿತವಾಗಿ ಹೆಲ್ತ್ ಕಿಟ್ ವಿತರಿಸಿದರು.

ಉಪಾಧ್ಯಕ್ಷ ಸುರೇಶ್‍ಕುಮಾರ್, ಪ್ರಧಾನ ಕಾರ್ಯದರ್ಶಿ ಕಾಳೇಗೌಡ, ಜಂಟಿ ಕಾರ್ಯದರ್ಶಿ ಪಳನಿ, ಖಜಾಂಚಿ ಎಂ.ರವಿ ಕುಮಾರ್, ಚಂದ್ರೇಗೌಡ, ಎಜಾಜ್ ಪಾಷ, ಅನಿಲ್‍ಕುಮಾರ್, ಲಕ್ಷ್ಮಣ್, ಯೋಗೇಶ್, ಪ್ರಕಾಶ್, ಕನ್ನಡ ಹೋರಾಟಗಾರ ಆರ್.ಎ. ರಾಧಾಕೃಷ್ಣ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Translate »