ಕೊರೊನಾ ಹಾವಳಿ: ಕಲ್ಯಾಣ ಮಂಟಪಗಳ ತೆರಿಗೆ ರದ್ದಿಗೆ ಶಾಸಕ ಸಾರಾ ಮಹೇಶ್ ಆಗ್ರಹ
ಮೈಸೂರು

ಕೊರೊನಾ ಹಾವಳಿ: ಕಲ್ಯಾಣ ಮಂಟಪಗಳ ತೆರಿಗೆ ರದ್ದಿಗೆ ಶಾಸಕ ಸಾರಾ ಮಹೇಶ್ ಆಗ್ರಹ

June 16, 2020

ಮೈಸೂರು, ಜೂ. 15- ಕೊರೊನಾ ಲಾಕ್‍ಡೌನ್ ಸಂದರ್ಭ ದಲ್ಲಿ ಕಲ್ಯಾಣ ಮಂಟಪಗಳು ತೀವ್ರ ನಷ್ಟಕ್ಕೊಳ ಗಾಗಿದ್ದು, ಅವುಗಳ ತೆರಿಗೆ ಯನ್ನು ರದ್ದುಪಡಿಸ ಬೇಕು ಎಂದು ಶಾಸಕ ಸಾ.ರಾ.ಮಹೇಶ್ ಆಗ್ರಹಿ ಸಿದರು. ಮೈಸೂರಿನ ರಮಾವಿಲಾಸ ರಸ್ತೆಯಲ್ಲಿ ರುವ ತಮ್ಮ ಕಚೇರಿಯಲ್ಲಿ ಸೋಮವಾರ ಸುದ್ದಿ ಗೋಷ್ಠಿ ನಡೆಸಿದ ಅವರು, ಲಾಕ್‍ಡೌನ್ ಹಿನ್ನೆಲೆ ಯಲ್ಲಿ ಮದುವೆ ಇನ್ನಿತರ ಸಮಾರಂಭಗಳಿಗೆ ನಿರ್ಬಂಧ ವಿಧಿಸಿದ್ದ ಕಾರಣ ಕಲ್ಯಾಣ ಮಂಟಪಗಳು ತೀವ್ರ ನಷ್ಟ ಅನುಭವಿಸಿವೆ ಎಂದರು. ಕಲ್ಯಾಣ ಮಂಟಪಗಳಿಗೆ ಆದಾಯವೇ ಇಲ್ಲದೇ ಇರುವಾಗ ತೆರಿಗೆ ಪಾವತಿಸುವುದು ತೀರಾ ಕಷ್ಟಕರವಾಗಿದ್ದು, ಕಲ್ಯಾಣ ಮಂಟಪ ಗಳ ತೆರಿಗೆಯನ್ನು ರದ್ದು ಪಡಿಸುವಂತೆ ನಗರಪಾಲಿಕೆ ಹಾಗೂ ಪುರಸಭೆಗಳಿಗೆ ಸರ್ಕಾರ ಆದೇಶಿಸಬೇಕು. ಅಲ್ಲದೇ ಕಲ್ಯಾಣ ಮಂಟಪಗಳಿಂದ ಚೆಸ್ಕಾಂ ಪಡೆಯುವ ವಿದ್ಯುತ್ ಠೇವಣಿ ಹಣವನ್ನು ಕೂಡ ರದ್ದುಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಕೋರ್ಟ್ ಸೂಚನೆ: ಮೈಮುಲ್ ಸಿಬ್ಬಂದಿ ನೇಮಕಾತಿಗೆ ಹೈಕೋರ್ಟ್ ನಿಬಂಧನೆ ವಿಧಿಸಿದೆ. ಒಂದು ವೇಳೆ ನೇಮಕಾತಿ ಪ್ರಕ್ರಿಯೆ ನಡೆದರೂ ಕೂಡ ಅಂತಿಮ ಪಟ್ಟಿಯನ್ನು ಕೋರ್ಟ್ ಗಮನಕ್ಕೆ ತಂದ ನಂತರವೇ ಬಿಡುಗಡೆ ಮಾಡಬೇಕೆಂದು ಮಧ್ಯಂತರ ಆದೇಶದಲ್ಲಿ ತಿಳಿಸಿದೆ. ಹೀಗಿದ್ದರೂ ಅಭ್ಯರ್ಥಿಗಳು ಸಂದರ್ಶನಕ್ಕೆ ಆಗಮಿಸುವಂತೆ ಮೈಮುಲ್ ನಿಂದ ಶನಿವಾರ ಪತ್ರ ಕಳುಹಿಸಲಾಗಿದೆ. ಅದೇ ವೇಳೆ ನ್ಯಾಯಾಲಯದ ಮಧ್ಯಂತರ ಆದೇಶದ ಬಗ್ಗೆ ಚರ್ಚಿಸಲು ಮೈಮುಲ್ ಆಡಳಿತ ಮಂಡಳಿ ಸಭೆಯನ್ನು ಸೋಮವಾರ ಕರೆದಿರುವುದು ಇನ್ನಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ ಎಂದು ಅವರು ಹೇಳಿದರು.

Translate »