ಶ್ರೀ ಶಿವರಾತ್ರೀಶ್ವರ ಸ್ವಾಮೀಜಿ ಕೃಷಿಗೆ ಪ್ರೋತ್ಸಾಹ ನೀಡುತ್ತಿದ್ದರು
ಮೈಸೂರು

ಶ್ರೀ ಶಿವರಾತ್ರೀಶ್ವರ ಸ್ವಾಮೀಜಿ ಕೃಷಿಗೆ ಪ್ರೋತ್ಸಾಹ ನೀಡುತ್ತಿದ್ದರು

May 12, 2020

ಮೈಸೂರು, ಮೇ 11(ಪಿಎಂ)- ಮಂತ್ರ ಮಹರ್ಷಿಗಳೆಂದೇ ಜನಮಾನಸದಲ್ಲಿ ನೆಲೆ ನಿಂತ ಸುತ್ತೂರು ಮಠ 22ನೇ ಪೀಠಾಧಿಪತಿ ಶ್ರೀಶಿವರಾತ್ರೀಶ್ವರ ಸ್ವಾಮೀಜಿಯವರು ಸ್ವತಃ ಕೃಷಿ ಕಾಯಕದಲ್ಲಿ ನಿರತರಾಗುತ್ತಿದ್ದರು. ಜೊತೆಗೆ ರೈತರಿಗೆ ಪ್ರೋತ್ಸಾಹ ನೀಡುತ್ತಿದ್ದರು ಎಂದು ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ಮೈಸೂರಿನ ಚಾಮುಂಡಿಬೆಟ್ಟದ ತಪ್ಪ ಲಿನ ಶ್ರೀ ಸುತ್ತೂರು ಮಠದಲ್ಲಿ ಭಾನು ವಾರ ಏರ್ಪಡಿಸಿದ್ದ ಶ್ರೀಮಠದ 22ನೇ ಪೀಠಾಧಿಪತಿ ಮಂತ್ರ ಮಹರ್ಷಿಯವರ (ಶ್ರೀಶಿವರಾತ್ರೀಶ್ವರ ಸ್ವಾಮೀಜಿ) 135ನೇ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಶ್ರೀ ಶಿವರಾತ್ರೀಶ್ವರ ಸ್ವಾಮೀಜಿಯವರು ತಪಸ್ವಿಗಳು, ಸಹನಾಶೀಲರು, ಮಂತ್ರ ಸಿದ್ಧಿ ಗಳು. ಶಿಸ್ತಿನ ಜೀವನ ಪಾಲಿಸಿದ ಅವರು, ರಾಜೇಂದ್ರ ಶ್ರೀಗಳ ಸೇವಾ ಕೈಂಕರ್ಯಕ್ಕೆ ಆಸರೆಯಾಗಿ ನಿಂತವರು. ಶ್ರೀಮಠದ ಆಡಳಿತ ಸುವ್ಯವಸ್ಥೆಗೊಳಿಸಿ ಜ್ಞಾನಾರ್ಜನೆ ಬಯಸುವ ವಿದ್ಯಾರ್ಥಿಗಳ ಕ್ಷೇಮಾಭಿ ವೃದ್ಧಿಗೆ ಕಾರಣರಾದರು ಎಂದು ತಿಳಿಸಿದರು.

ಸುತ್ತೂರು ಕ್ಷೇತ್ರದಲ್ಲಿ ಚೋಳರು ನಿರ್ಮಿ ಸಿದ್ದ ಸೋಮೇಶ್ವರ ದೇವಾಲಯ ಮೊದ ಲಾದ ದೇವಾಲಯಗಳನ್ನು ಮಂತ್ರ ಮಹರ್ಷಿ ಗಳು ಜೀರ್ಣೋದ್ಧಾರ ಮಾಡಿಸಿದರು. ಶಾಸನಗಳು ಮತ್ತು ಗ್ರಂಥಗಳನ್ನು ಸಂರಕ್ಷಿಸಿ ದರು. ಅವರ ಆಧ್ಯಾತ್ಮಿಕ ಸಾಧನೆ ಅನನ್ಯ ವಾದುದು. ಅವರು ರಾಜೇಂದ್ರ ಶ್ರೀಗಳಂ ತಹ ಸಮಾಜಮುಖಿ ಪೂಜ್ಯರನ್ನು ಸಮಾ ಜಕ್ಕೆ ಕೊಡುಗೆಯಾಗಿ ನೀಡಿದ್ದರ ಫಲವಾಗಿ ಇಂದು ಸುತ್ತೂರು ಮಠ ತ್ರಿವಿಧ ದಾಸೋ ಹಕ್ಕೆ ಮಾದರಿಯಾಗಿದೆ ಎಂದರು.

ಶ್ರೀಮಠದ ಗುರುಕುಲ ಸಾಧಕರಾದ ಶ್ರೀ ಬಸವಲಿಂಗ ದೇಶಿಕೇಂದ್ರ ಸ್ವಾಮೀಜಿ ಮಾತ ನಾಡಿ, ಮಂತ್ರ ಮಹರ್ಷಿಗಳು ಮಾತೃ ಹೃದಯಿಗಳು. ಅವರ ಜೀವನ ಎಲ್ಲರಿಗೂ ಒಂದು ಆದರ್ಶ ಎಂದು ತಿಳಿಸಿದರು.

ಶ್ರೀಮಠದ ರವಿ ರೇಚಂಬಳ್ಳಿ ಮಾತ ನಾಡಿ, ಮಹನೀಯರ ಜಯಂತಿಗಳನ್ನು ಆಚರಿಸುವ ಮೂಲಕ ಅವರ ಕೊಡುಗೆ ಗಳನ್ನು ಸ್ಮರಿಸಬೇಕು. ಮಂತ್ರ ಮಹರ್ಷಿ ಗಳ ಕೊಡುಗೆಯಿಂದ ಸುತ್ತೂರು ಮಠ ಇಂದು ಬೆಳೆಯಲು ಸಾಧ್ಯವಾಯಿತು ಎಂದು ಸ್ಮರಿಸಿ ದರು. ಸುತ್ತೂರು ಶ್ರೀಕ್ಷೇತ್ರದಲ್ಲಿ ಭಾನುವಾರ ಬೆಳಿಗ್ಗೆ ಮಂತ್ರ ಮಹರ್ಷಿಗಳ ಗದ್ದುಗೆ ಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀಮಠದ ಎಲ್ಲಾ ಸೇವಾ ಸಿಬ್ಬಂದಿ ವರ್ಗದವರು ಹಾಜರಿದ್ದರು.

Translate »